ಬೆಂಗಳೂರು:ಸಿಡಿ ಪ್ರಕರಣದಿಂದ ಮುಜುಗರಕ್ಕೆ ಸಿಲುಕಿರುವ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕಳೆದುಕೊಂಡಿದ್ದಕ್ಕಿಂತ ಇನ್ನೊಂದು ವಿಚಾರದಲ್ಲಿ ಹೆಚ್ಚು ಬೇಸರವಾಗಿದೆಯಂತೆ.
ತನ್ನ ಆಪ್ತರೊಂದಿಗೆ ಸಭೆ ನಡೆಸಿದ ರಮೇಶ್, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ, ಅದು ಫೇಕ್ ವಿಡಿಯೋ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ, ತನಗೆ ನೈತಿಕವಾಗಿ ಬೆಂಬಲಿಸಿದ ಸಿಎಂ ಬಿಎಸ್ವೈ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು  ಸ್ಮರಿಸಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಕುಟುಂಬಕ್ಕೆ ತಮ್ಮಿಂದಾದ ಹಾನಿಯ ಬಗ್ಗೆಯೂ ಹೇಳಿಕೊಂಡಿದ್ದಾರೆ.ಇದನ್ನೂ ಓದಿರಿಸಿಐಡಿಗೆ ಸಿಡಿ ಕೇಸ್​! ಷಡ್ಯಂತ್ರ ಮಾಡಿದ್ದವರನ್ನ ಜೈಲಿಗೆ ಕಳಿಸೋದೇ ನನ್ನ ಗುರಿ: ಜಾರಕಿಹೊಳಿ
ಈ ವಿಚಾರವನ್ನು ಸುದ್ದಿಗಾರರಿಗೆ ತಿಳಿಸಿದ ಶಾಸಕ‌ ಮಹೇಶ್ ಕಮಟಳ್ಳಿ, ತನ್ನಿಂದ ಮನೆತನದ ಗೌರವಕ್ಕೆ ಧಕ್ಕೆಯಾಯಿತು ಎಂಬ ಬಹಳ ಬೇಸರ ಅವರಲ್ಲಿದೆ. ರಾಜಕೀಯ ಇರುತ್ತೆ, ಹೋಗುತ್ತದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು ಎಂದರು.
ನಾವು ಕಳೆದ ಒಂದು ವಾರದಿಂದ ಭೇಟಿ ಆಗಿರಲಿಲ್ಲ. ಪ್ರತ್ಯಕ್ಷ ವಾಗಿ ಅಥವಾ ಫೋನ್​ನಲ್ಲಿ ಭೇಟಿ ಆಗಿರಲಿಲ್ಲ. ಮಾಧ್ಯಮದಲ್ಲಿ ಪರ ವಿರೋಧ ವಿಶ್ಲೇಷಣೆ ನೋಡಿ ಮಾತನಾಡುತ್ತಿದ್ದೆವು. ಆದರೆ ಈಗ ಭೇಟಿ ಮಾಡಿ ಅವರೊಂದಿಗೆ ವಾಸ್ತವ ವಿಚಾರ ತಿಳಿದುಕೊಂಡೆವು. ನಿನ್ನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದೆವು. ನಾವ್ಯಾರು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲ. ಬಾಲಚಂದ್ರ ಅಥವಾ ರಮೇಶ್‌ಗೆ ಸಚಿವ ಸ್ಥಾನ ಕೊಡಿ ಎಂದಿದ್ದೇವೆ ಎಂದುಮಹೇಶ್ ಕಮಟಳ್ಳಿ ವಿವರಿಸಿದರು.
ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ ವಿರೂಪಾಕ್ಷಪ್ಪ! ಮಸ್ಕಿ ಬೈ ಎಲೆಕ್ಷನ್​ ಭರ್ಜರಿ ಸಿದ್ಧತೆ

ಸಿ.ಡಿ ಬಿಡುಗಡೆಯಾಗೋದು 4 ತಿಂಗಳ ಮೊದಲೇ ಗೊತ್ತಿತ್ತು- ಯಾರ ಕೈವಾಡ ಎಂದೂ ಗೊತ್ತು ಎಂದ ಜಾರಕಿಹೊಳಿ

ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
