ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಭಾರಿ ಸಂಚಲನ ಮೂಡಿಸಿದೆ. ಇದರ ಮುಂದುವರಿದ ಭಾಗ ಎಂಬಂತೆ ಶನಿವಾರ ಸಂಜೆ ಅಸಲಿ ಆಟ ಶುರುವಾಗುತ್ತೆ, ನನ್ನ ಜೇಬಿನಲ್ಲಿ ಸಾಕ್ಷಿ ಇಟ್ಟುಕೊಂಡಿದ್ದೇನೆ, ಸಮಯನೋಡಿ ಬಿಡುಗಡೆ ಮಾಡ್ತೀನಿ ಎಂದು ಬಹಿರಂಗವಾಗಿ ಹೇಳುವ ಮೂಲಕ ಕುತೂಹಲ ಮೂಡಿಸಿದ್ದ ರಮೇಶ್, ಈ ಕುರಿತು ಇಂದು ಸಂಜೆ ಮಹತ್ವದ ಸುದ್ದಿಗೋಷ್ಠಿ ನಡೆಸಿದರು.
ಇಂದು ಬೆಳಗ್ಗೆಯಿಂದ ಅಜ್ಞಾತ ಸ್ಥಳದಲ್ಲೇ ಇದ್ದ ರಮೇಶ್​ ಜಾರಕಿಹೊಳಿ ಸಂಜೆ 5ಕ್ಕೆ ಸದಾಶಿವನಗರದ ಮನೆಗೆ ಆಗಮಿಸಿದರು. 6ಕ್ಕೆ ಹೊರಬಂದ ರಮೇಶ್ ಸುದ್ದಿಗಾರರೊಂದಿಗೆ ಮಾತನಾಡುತ್ತ, ನಾನು ನಿನ್ನೆ ಹೇಳಿದಂತೆ ಇಂದು ನಾನು ಕೆಲ ಮಹತ್ವದ ಮಾಹಿತಿಯನ್ನ ಹೊರಹಾಕುತ್ತೇನೆ ಅಂದಿದ್ದೆ. ಡಿಕೆಶಿಯೇ ಕಿಂಗ್​ಪಿನ್​ ನರೇಶ್​ ತನ್ನ ಸಂಬಂಧಿ ಎಂದು ಹೇಳಿಕೊಂಡಿದ್ದಾನೆ. ಯುವತಿ ಪೋಷಕರು ಕೂಡ ಮಹಾನಾಯಕನ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಆ ಮಹಾನಾಯಕ ರಾಜಕೀಯಕ್ಕೆ ನಾಲಾಯಕ್. ಅವನೆಂಥ ದೊಡ್ಡ ಗಂಡಸು, ಅವನು ಗಂಡಸಲ್ಲ, ನಾನು ಗಂಡು ಎಂದು ಡಿ.ಕೆ.ಶಿವಕುಮಾರ್​ ವಿರುದ್ಧ ಕಿಡಿಕಾರಿದರು.
ಡಿಕೆಶಿ ಷಡ್ಯಂತ್ರಕ್ಕೆ ಕ್ಷಮೆಯೇ ಇಲ್ಲ. ಕನಕಪುರದಲ್ಲಿ ಡಿಕೆಶಿಯನ್ನ ಸೋಲಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತೆ. ಅವನಂಥ ಗಾಂ… ರಾಜಕಾರಣಿ ಯಾರೂ ಇಲ್ಲ. ಎಂದು ಅವಾಚ್ಯಶಬ್ದಗಳಿಂದ ರಮೇಶ್​ ಜಾರಕಿಹೊಳಿ. ನಾಳೆ ಡಿಕೆಶಿ ವಿರುದ್ಧ ದೂರು ನೀಡ್ತೀನಿ. ಯುವತಿಯ ಪೋಷಕರ ಹೇಳಿಕೆ ಬಳಿಕ ಗೊತ್ತಾಯ್ತು ಆ ಮಹಾನಾಯಕ ರಾಜಕೀಯಕ್ಕೆ ನಾಲಾಯಕ್​ ಎಂದು ಏಕ ವಚನದಲ್ಲೇ ನಿಂದಿಸಿದರು.
ಹೆಣ್ಣನ್ನು ಮುಂದಿಟ್ಟುಕೊಂಡು ಷಡ್ಯಂತ್ರ ಮಾಡಿದ್ದಾನೆ ಡಿಕೆಶಿ. ಅವನಿಗೆ ನಾನೇಕೆ ಹೆದರಲಿ? ಗೋಕಾಕ್​ನಲ್ಲಿ ಚುನಾವಣೆಗೆ ನನ್ನ ತಮ್ಮನನ್ನು ನಿಲ್ಲಿಸ್ತೀನಿ, ಕನಕಪುರದಲ್ಲಿ ನಾನೇ ನಿಲ್ತೀನಿ. ನನ್ನ ಹತ್ತಿರ ಒಟ್ಟು 11 ಸಾಕ್ಷ್ಯಗಳಿವೆ. ಅದನ್ನು ಎಸ್​ಐಟಿಗೆ ಒಪ್ಪಿಸುತ್ತೇನೆ. ಯುವತಿ ಸತ್ತರೆ ಅದಕ್ಕೆ ಡಿಕೆಶಿಯೇ ಹೊಣೆ ಎಂದರು.
ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ಸಿಡಿ ಲೇಡಿ ಇಲ್ಲೇ ಇದ್ದಾಳೆ! ಸುಮ್ಮನೆ ಎಲ್ಲೆಲ್ಲೋ ಹುಡುಕ್ತಿದ್ರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 11 =
Remember me
