ಬೆಂಗಳೂರು:ಅಶ್ಲೀಲ ಸಿಡಿ ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಶೇಷ ತನಿಖಾ ತಂಡದ(ಎಸ್‌ಐಟಿ) ಮುಂದೆ ವಿಡಿಯೋದಲ್ಲಿ ಇರುವುದು ನಾನೇ ಒಪ್ಪಿಕೊಂಡಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ರಮೇಶ್ ಜಾರಕಿಹೊಳಿ ಹಾಜರಾಗಿದ್ದರು. ಈ ವೇಳೆ, ದೂರಿನಲ್ಲಿ ನೀಡಿರುವ ವಿಡಿಯೋ ತುಣುಕಿನಲ್ಲಿ ಇರುವುದು ನಾನೇ. ಜತೆಗೆ ಇರುವ ಯುವತಿ ಹಲವು ದಿನಗಳಿಂದ ನನಗೆ ಪರಿಚಯವಿದ್ದಳು. ಸಹಮತದಿಂದ ಇಬ್ಬರು ಒಟ್ಟಿಗೆ ಇದ್ದವು. ಆದರೆ, ಕದ್ದು ವಿಡಿಯೋ ಮಾಡಿರುವುದು ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಎಸ್‌ಐಟಿ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಸಚಿವರ ವೈದ್ಯಕೀಯ ಪರೀಕ್ಷೆಯೂ ಪೂರ್ವವಾಗಿದೆ.
ಮಾರ್ಚ್ 2ಕ್ಕೆ ಮಾಜಿ ಸಚಿವರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದರು. ಮಾರನೇ ದಿನವೇ (ಮಾ.3ಕ್ಕೆ) ಸಚಿವ ಸ್ಥಾನಕ್ಕೆ ರಮೇಶ್ ಜಾರಿಕಿಹೊಳಿ ರಾಜೀನಾಮೆ ನೀಡಿದ್ದರು. ಇತ್ತ ದೂರು ಪಡೆದ ಪೊಲೀಸರು ದಿನೇಶ್ ಕಲ್ಲಹಳ್ಳಿಗೆ ನೋಟಿಸ್ ಜಾರಿ ಮಾಡಿ ಹೆಚ್ಚಿನ ಮಾಹಿತಿ ಕೇಳಿದ್ದರು. ಮಾ.4ಕ್ಕೆ ವಿಚಾರಣೆಗೆ ಗೈರು ಆದ ಕಲ್ಲಹಳ್ಳಿ ಜೀವ ಬೆದರಿಕೆ ಹಿನ್ನೆಲೆ ಮಾರ್ಚ್ 9ಕ್ಕೆ ಬರುವುದಾಗಿ ಪತ್ರ ಬರೆದಿದ್ದರು. ಮಾ.5ಕ್ಕೆ ದಿಢೀರನೇ ವಿಚಾರಣೆಗೆ ದಿನೇಶ್ ಕಲ್ಲಹಳ್ಳಿ ಹಾಜರಾಗಿದ್ದರು. ಇತ್ತ 6 ಸಚಿವರು ಮಾನಹಾನಿಕರ ಸುದ್ದಿ ಪ್ರಸಾರಕ್ಕೆ ತಡೆ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು. ಇದರಿಂದ ಅಶ್ಲೀಲ ಸಿಡಿ ಪ್ರಕರಣ ಮತ್ತಷ್ಟು ಸುದ್ದಿಯಾಗಿ ಹೆಚ್ಚಿನ ಮಹತ್ವ ಪಡದುಕೊಂಡಿತು.ಮಾ.7ಕ್ಕೆ ವಕೀಲರ ಮೂಲಕ ದಿನೇಶ್ ಕಲ್ಲಹಳ್ಳಿ ದೂರು ಹಿಂಪಡೆಯುತ್ತಾರೆ. ಆದರೆ, ಇತ್ತ ಪೊಲೀಸರ ರಕ್ಷಣೆ ಕೋರಿ ಯುವತಿಯೇ ಲಿಖಿತ ದೂರು ನೀಡುವ ಮೂಲಕ ಮಾಜಿ ಸಚಿವರ ವಿರುದ್ಧ ಎಫ್​ಐಆರ್ ಮಾಡಿಸಿದ್ದಳು. ಮತ್ತೊಂದೆಡೆ ಮಾಜಿ ಸಚಿವ, ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವುದಾಗಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ಈ ಎಲ್ಲ ಪ್ರಕರಣ ಕುರಿತು ಎಸ್‌ಐಟಿ ತನಿಖೆ ಕೈಗೊಂಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + one =
Remember me
