ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡುತ್ತಿರುವುದಾಗಿ ಗೋಕಾಕ್​ ತಾಲೂಕು ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್ ತಿಳಿಸಿದ್ದಾರೆ.
ಗುರುವಾರ ರಾತ್ರಿ ಮಹಾರಾಷ್ಟ್ರದಿಂದ ಬಂದ ರಮೇಶ್ ಜಾರಕಿಹೊಳಿಗೆ ಶನಿವಾರ ರಾತ್ರಿ ಕರೊನಾ ಪರೀಕ್ಷೆ ಮಾಡಲಾಗಿತ್ತು. ವರದಿಯಲ್ಲಿ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.ಇದನ್ನೂ ಓದಿರಿರಮೇಶ್ ಜಾರಕಿಹೊಳಿಗೆ ನಿಜಕ್ಕೂ ಚಳಿ ಜ್ವರವೋ ಅಥವಾ ತಲೆಮರೆಸಿಕೊಳ್ಳುವ ತಂತ್ರವೋ?
ಮಹಾರಾಷ್ಟ್ರ ಹಾಗೂ ಬೆಂಗಳೂರಿಗೆ ಹೋಗಿ ಬಂದ ಹಿಸ್ಟರಿ ರಮೇಶ್​ ಜಾರಕಿಹೊಳಿಗೆ ಇದೆ. ರ್ಯಾಪಿಡ್ ಟೆಸ್ಟ್ ಮಾಡಿದಾಗ ಅವರಿಗೆ ಕೋವಿಡ್ ಸೋಂಕು ಇರುವುದು ಗೊತ್ತಾಗಿದೆ. ಶುಗರ್ ಮತ್ತು ಬಿಪಿ ಹೆಚ್ಚಾಗಿದ್ದರಿಂದ ಅವರನ್ನ ಕೋವಿಡ್ ವಾರ್ಡ್​ನ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಅವರು ಇನ್ನೂ ಮೂರ್ನಾಲ್ಕು ದಿನ ಐಸಿಯುನಲ್ಲೇ ಇರಬೇಕಾಗುತ್ತೆ ಎಂದು ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್ ಹೇಳಿದರು. ರಮೇಶ್​ರ ಆರೋಗ್ಯ ಹದಗೆಟ್ಟಿದ್ದು, ಗಂಭೀರ ಸ್ಥಿತಿ ಇದೆ ಎಂದು ಮೂಲಗಳು ತಿಳಿಸಿವೆ.
ಇತ್ತ ವಿಚಾರಣೆಗೆ ಸಿಡಿ ಕೇಸ್​ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್​ ನೀಡಿದ್ದು, ಕರೊನಾ ನೆಗೆಟಿವ್ ರಿಪೋರ್ಟ್ ಸಿಗುವವರೆಗೂ ವಿಚಾರಣೆಯಿಂದ ರಮೇಶ್ ಜಾರಕಿಹೊಳಿಗೆ ವಿನಾಯಿತಿ ಸಿಗುವ ಸಾಧ್ಯತೆ ಇದೆ. ಸದ್ಯ ರಮೇಶ್​ಗೆ ಕರೊನಾ ಎಸ್ಐಟಿ ವಿಚಾರಣೆ ಟೆನ್ಷನ್ ಕಡಿಮೆ ಮಾಡಿದೆ.
ರಮೇಶ್ ಜಾರಕಿಹೊಳಿಯ ಕಾರು ಚಾಲಕ ಹಾಗೂ ಓರ್ವ ಅಡುಗೆ ಸಿಬ್ಬಂದಿಗೂ ಕರೊನಾ ಪಾಸಿಟಿವ್ ಬಂದಿದೆ. ಚಾಲಕ ಮತ್ತು ಅಡುಗೆ ಸಿಬ್ಬಂದಿ ಹೋಮ್ ಐಸೋಲೇಷನ್​ನಲ್ಲಿದ್ದಾರೆ.
2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಕುಮಾರಸ್ವಾಮಿ ಇವತ್ತು ತುಂಬಿದ ಕೊಡ! ಅಂದಿನ ಹಣದ ರಹಸ್ಯ ಕೆದಕಿದ ಜಮೀರ್

ಕೊರಗಜ್ಜನ ಕ್ಷೇತ್ರದಲ್ಲಿ ಮೂತ್ರ ವಿಸರ್ಜಿಸಿದವ ರಕ್ತಕಾರಿ ಸತ್ತ ಬೆನ್ನಲ್ಲೇ ಕೊಂಡಾಣದಲ್ಲಿ ಮತ್ತೊಂದು ಹೀನ ಕೃತ್ಯ ಬಯಲು

ಸಿಡಿ ಕೇಸ್​ಗೆ ಟಕ್ಕರ್​ ಕೊಟ್ಟ ವಕೀಲೆ ಮೀರಾ ರಾಘವೇಂದ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 3 =
Remember me
