ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ ಮಾಜಿ ಸಚಿವರೊಬ್ಬರದ್ದು ಎನ್ನಲಾದ ಸೆಕ್ಸ್​ ಸಿಡಿ ಪ್ರಕರಣ. ಈಗ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಆಗ್ತಿದೆ ಈ ಪ್ರಕರಣ!
ಕನ್ನಡ ಫಿಲ್ಮ್ ಚೇಂಬರ್​ನಲ್ಲಿ ‘ಸಿಡಿ ಲೇಡಿ’ ಸಿನಿಮಾ ಟೈಟಲ್​ ರಿಜಿಸ್ಟರ್ ಆಗಿದೆ. ನಿರ್ಮಾಪಕ ಸಂದೇಶ್ ನಾಗಾರಾಜ್ ಬ್ಯಾನರ್​ನಲ್ಲಿ ಈ ಹೆಸರು ನೋಂದಣಿ ಆಗಿದ್ದು, ಸಿಡಿ ಪ್ರಕರಣ ಸಿನಿಮಾ ಆಗ್ತಿದೆ ಎಂಬ ಮಾಹಿತಿ ಲಭ್ಯ ಆಗಿದೆ. ಮತ್ತೊಂದು ವಿವಾದ ಎಬ್ಬಿಸುತ್ತಾ? ಈ ಸಿಡಿ ಲೇಡಿ ಟೈಟಲ್​ ಎಂಬ ಪ್ರಶ್ನೆ ಕೂಡ ಎದ್ದಿದೆ.ಇದನ್ನೂ ಓದಿರಿಎರಡು ಮಕ್ಕಳ ತಾಯಿ ಆತ್ಮಹತ್ಯೆ! ಇಂಥ ನೀಚ ಕೆಲಸಕ್ಕೆ ಇಳಿದನಾ ಗಂಡ?
ಈ ಹಿಂದೆ ‘ಮುಖ್ಯಮಂತ್ರಿ ಐ ಲವ್ ಯು’ ಸಿನಿಮಾ ಟೈಟಲ್ ಕೂಡ ನೋಂದಣಿ ಆಗಿತ್ತು. ಈ ಟೈಟಲ್​ ವಿವಾದಕ್ಕೆ ಗುರಿಯಾಗಿತ್ತು. ಎಟಿಎಂನಲ್ಲಿ ಹಲ್ಲೆ ಆಗಿದ್ದ ಪ್ರಕರಣಕ್ಕೂ ಸಿನಿಮಾ ಟಚ್​ ಕೊಟ್ಟಿದ್ದನ್ನು ಸ್ಮರಿಸಬಹುದು.
ಮಾ.2ರಂದು ಜಾರಕಿಹೊಳಿಯದ್ದು ಎನ್ನಲಾದ ಸಿಡಿ ವೈರಲ್​ ಆಗುತ್ತಿದ್ದಂತೆ ರಾಜ್ಯದಲ್ಲಿ ಭಾರಿ ಗದ್ದಲ ಎದ್ದಿತ್ತ. ಮರುದಿನವೇ ನೈತಿಕಹೊಣೆ ಹೊತ್ತು ರಮೇಶ್​ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದೂರುದಾರ ದಿನೇಶ್​ ಕಲ್ಲಹಳ್ಳಿ ದೂರು ಹಿಂಪಡೆಗೆ ನಿರ್ಧರಿಸುತ್ತಿದ್ದಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಮೇಶ್​ ಜಾರಕಿಹೊಳಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ, ಇದು ನಕಲಿ ಸಿಡಿ ಎಂದು ದೂರು ದಾಖಲಿಸಿದ್ದರು. ಇಷ್ಟೆಲ್ಲ ಅವಾಂತರದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ವಿಡಿಯೋದಲ್ಲಿ ಕಾಣಿಸಿಕೊಂಡ ಸಿಡಿ ಕೇಸ್​ನ ಯುವತಿ, ರಮೇಶ್ ಜಾರಕಿಹೊಳಿ ಅವರು ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ನನ್ನ ಮಾನ ಮರ್ಯಾದೆ ಊರು ತುಂಬಾ ಹರಾಜಾಗಿದೆ. ಆ ಅಶ್ಲೀಲ ವಿಡಿಯೋ ಹೇಗೆ ಮಾಡಿದಾರೋ ನನಗೆ ಗೊತ್ತಿಲ್ಲ. ದಯವಿಟ್ಟು ನನಗೆ ರಕ್ಷಣೆ ನೀಡಬೇಕು ಎಂದು ಕೇಳಿಕೊಂಡಿದ್ದಳು. ಆದರೆ ಸಿಡಿ ಲೇಡಿ ಆಗಲಿ, ಸಿಡಿ ಕಿಂಗ್​ಪಿನ್​, ಹ್ಯಾಕರ್ಸ್​ ಆಗಲಿ ಯಾರೊಬ್ಬರೂ ಇನ್ನೂ ಎಸ್​ಐಟಿ ವಿಚಾರಣೆಗೆ ಹಾಜರಾಗಿಲ್ಲ. ಅವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಿನಕ್ಕೊಂದು ಟ್ವಿಸ್ಟ್​ ಪಡೆಯುತ್ತಿರುವ ಈ ಸಿಡಿ ಕೇಸ್​ ಇದೀಗ ‘ಸಿಡಿ ಲೇಡಿ’ ಸಿನಿಮಾ ಟೈಟಲ್​ ರಿಜಿಸ್ಟ್ರಾರ್​ ಆಗಿದೆ. ಇದರ ಬೆನ್ನಲ್ಲೇ ಸಿಡಿ ಕೇಸ್​ ಸಿನಿಮಾ ಬರುತ್ತಾ? ನಟ-ನಟಿ ಯಾರು? ಯಾವಾಗ ರಿಲೀಸ್​ ಆಗುತ್ತೆ…? ಎಂಬ ಚರ್ಚೆ ಸಾರ್ವಜನಿಕ ವಯಲದಲ್ಲಿ ಶುರುವಾಗಿದೆ.
ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

ರಮೇಶ್​ ಜಾರಕಿಹೊಳಿ ಮನೆಗೆ ಇಂದ್ರಜಿತ್​ ಲಂಕೇಶ್​ ಬಂದಿದ್ದೇಕೆ?

ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
