ಬೆಂಗಳೂರು:ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಿಡಿ ರಾದ್ದಾಂತ ಪ್ರಕರಣ ಘಳಿಗೆಗೊಂದು ತಿರುವು ತೆಗೆದುಕೊಳ್ಳುತ್ತಿದೆ. ಅಶ್ಲೀಲ ವಿಡಿಯೋದಲ್ಲಿ ಇದ್ದಾಳೆ ಎನ್ನಲಾದ ಯುವತಿ ತನ್ನ ಸಹೋದರನೊಂದಿಗೆ ಮಾತನಾಡಿರುವ ಆಡಿಯೋ ಇಂದು ವೈರಲ್ ಆಗಿದ್ದು, ಆ ಆಡಿಯೋದಲ್ಲಿ ಯುವತಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದಾಳೆ.
ಆಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ, ನಾಳೆ ಇದಕ್ಕಿಂತ ದೊಡ್ಡ ಬಾಂಬ್ ಇದೆ. ಸಂಜೆ 4-6 ರೊಳಗೆ ಬಿಡುಗಡೆಯಾಗಲಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ ಆಗಿದ್ದರ ಕುರಿತು ಮಾತನಾಡಿದ ಅವರು, ಡಿಕೆಶಿ ನನ್ನ ಗೆಳೆಯ, ಆತನಿಗೆ ಒಳ್ಳೆಯದಾಗಲಿ. ನನಗೆ ಬಂದ ಪರಿಸ್ಥಿತಿ ಅವನಿಗೆ ಬರಬಾರದು. ನಾನು ರಾಜೀನಾಮೆ ಕೊಟ್ಟಂತೆ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ:ಮದುವೆ ಬೆನ್ನಲ್ಲೇ ಸಂಜನಾ ಕೆಲಸಕ್ಕೆ ಹಾಜರ್! ಬುಮ್ರಾ ಹನಿಮೂನ್‌ಗೆ ಯಾರ ಜತೆ ಹೋದರು?!
ಎಫ್​ಐಆರ್​ ಆದ ತಕ್ಷಣ ನಾನೇನು ಅಪರಾಧಿ ಅಲ್ಲ. ನಾನು ಎಫ್​ಐಆರ್​ ದಾಖಲಿಸಿದ್ದೇನೆ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ನಾನು ಯಾವುದೇ ಜಾಮೀನು ತೆಗೆದುಕೊಳ್ಳುವುದಿಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ.
ಆಡಿಯೋದಲ್ಲಿ ಏನಿದೆ? ಯುವತಿ ಸಿಡಿ ಬಿಡುಗಡೆಯಾದ ಆರಂಭದ ದಿನದಲ್ಲಿ ತನ್ನ ಸಹೋದರನೊಂದಿಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಅಶ್ಲೀಲ ವಿಡಿಯೋದಲ್ಲಿ ಇರುವುದು ನಾನಲ್ಲ, ಅದು ಗ್ರಾಫಿಕ್​ ಮಾಡಿದ್ದಾರೆ. ನನ್ನನ್ನು ನಂಬಿ. ಡಿಕೆ ಶಿವಕುಮಾರ್ ಅವರು ನನ್ನನ್ನು ಭೇಟಿಯಾಗಲು ಬಂದಿದ್ದಾರೆ. ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಸರ್ಕಾರವನ್ನೇ ಬೀಳಿಸಿದ್ದೆ, ಸಿಡಿ ಯಾವ ಲೆಕ್ಕ? ನಾಳೆಯಿಂದ ನನ್ನ ಆಟ ಶುರು ಎಂದ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾಯಿತು ಎಫ್​ಐಆರ್: ಸಾಹುಕಾರ್ ಬಂಧನವಾಗುತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 2 =
Remember me
