ಬೆಂಗಳೂರು:ಸಿಡಿ ಪ್ರಕರಣ ದಿನೇದಿನೆ ಸದ್ದು ಮಾಡುತ್ತಿರುವ ಜತೆಗೆ ದಿನಕ್ಕೊಂದು ತಿರುವನ್ನೂ ಪಡೆಯುತ್ತಿದ್ದು, ಇದೀಗ ಈ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಹಾಸಿಗೆ ಮೇಲಿರುವ ವಿಡಿಯೋವೊಂದು ಈಗ ಹರಿದಾಡುತ್ತಿದೆ. ಈ ಮೂಲಕ ಎದುರಾಳಿಗಳ ಟೀಕೆಗೆ ಹಾಸಿಗೆ ಮೇಲಿದ್ದುಕೊಂಡೇ ಸೈಲೆಂಟಾಗಿ ಟಾಂಗ್ ಕೊಡುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ವಿವಾದಿತ ಸಿಡಿ ಪ್ರಕರಣವನ್ನು ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕರೊನಾ ಸೋಂಕಿರುವುದು ಇಂದು ದೃಢಪಟ್ಟಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ, ಜಾರಕಿಹೊಳಿ ಕರೊನಾ ಸೋಂಕಿಗೆ ಒಳಗಾಗಿರುವ ಬಗ್ಗೆಯೇ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಅದರಲ್ಲೂ ಈ ಪ್ರಕರಣದಲ್ಲಿ ಸಿಡಿ ಲೇಡಿ ಪರವಾಗಿ ಓಡಾಡುತ್ತಿರುವ ಕೆಪಿಸಿಸಿ ಕಾನೂನು ಘಟಕದ ಸೂರ್ಯ ಮುಕುಂದರಾಜ್ ಕೂಡ ಅನುಮಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ‘ಕರೋನ ಸೋಂಕಿತ ವ್ಯಕ್ತಿ ಆಸ್ಪತ್ರೆಯ ಯಾವ ಮಂಚದ ಮೇಲೂ ಕಾಣುತ್ತಿಲ್ಲ..’ ಎಂಬುದಾಗಿ ಫೇಸ್​ಬುಕ್​ನಲ್ಲಿ ವಿಡಿಯೋ ಸಮೇತ ಪೋಸ್ಟ್ ಮಾಡಿ ಸಂದೇಹ ವ್ಯಕ್ತಪಡಿಸಿದ್ದರು.
ಇದಾಗಿ ಸುಮಾರು ಐದು ಗಂಟೆಗಳಲ್ಲಿ ಮಾಜಿ ಸಚಿವ ಜಾರಕಿಹೊಳಿ ಆಸ್ಪತ್ರೆಯೊಂದರ ಹಾಸಿಗೆ ಮೇಲೆ ಇರುವ ದೃಶ್ಯದ ವಿಡಿಯೋ ಬಹಿರಂಗವಾಗಿದೆ. ಪಿಪಿಇ ಕಿಟ್ ಧರಿಸಿರುವ ಒಂದಿಬ್ಬರ ನಡುವೆ ಹಾಸಿಗೆ ಮೇಲೆ ಜಾರಕಿಹೊಳಿ ಕೂಡ ಪಿಪಿಇ ಕಿಟ್-ಮಾಸ್ಕ್​ ಧರಿಸಿರುವುದು ಈ ವಿಡಿಯೋದಲ್ಲಿದೆ. ರಮೇಶ್ ಜಾರಕಿಹೊಳಿ ಗೋಕಾಕ್​ನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಸೋಂಕಿನ ಕಾರಣಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಸಿಗೆ ಮೇಲಿರುವ ವಿಡಿಯೋ ಬಿಡುಗಡೆ.ವಿವರಗಳಿಗೆhttps://t.co/YaFZZbZDD9ನೋಡಿ…pic.twitter.com/kMvF9e5ID5
— Vijayavani (@VVani4U)April 5, 2021

ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​

ರಮೇಶ್ ಜಾರಕಿಹೊಳಿಗೆ ನಿಜಕ್ಕೂ ಚಳಿ ಜ್ವರವೋ ಅಥವಾ ತಲೆಮರೆಸಿಕೊಳ್ಳುವ ತಂತ್ರವೋ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 14 =
Remember me
