ಆನೇಕಲ್:ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೆಸರು ಆರಂಭದಿಂದಲೂ ಪ್ರಸ್ತಾಪ ಆಗುತ್ತಿದೆ.
ಅಲ್ಲದೆ ಸಿಡಿ ಕೇಸ್​ನ ಮಹಾನಾಯಕ/ ಸೂತ್ರಧಾರ ಡಿಕೆಶಿ ಎಂಬ ನೇರ ಆರೋಪ ದಟ್ಟವಾಗಿದೆ. ಈ ಕುರಿತು ಡಿಕೆಶಿ ಸಹೋದರ ಡಿ.ಕೆ.ಸುರೇಶ್​ ಮಾತನಾಡಿದ್ದಾರೆ.ಆನೇಕಲ್ ತಾಲೂಕಿನ ಖಾಸಗಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್​, ಸಂತ್ರಸ್ತ ಮಹಿಳೆ‌ ಸೋಷಿಯಲ್ ಮೀಡಿಯಾದಲ್ಲಿ ತನ್ನ ನೋವನ್ನು ಹೇಳಿದ್ದಾರೆ. ಇದುವರೆಗೂ ಸರ್ಕಾರ ಸಂತ್ರಸ್ತೆ ವಿಚಾರವಾಗಿ ರಕ್ಷಣೆ ಹಾಗೂ ಸಹಾನುಭೂತಿ ವಿಷಯವಾಗಿ ಮಾತಾಡಿಲ್ಲ. ಸಂತ್ರಸ್ತೆಯ ಪರವಾಗಿ ವಿರೋಧ ಪಕ್ಷದ ನಾಯಕರು ಸದನದಲ್ಲಿ ದ್ವನಿಯೆತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ತನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಆಶಯ ಆ ಮಹಿಳೆಯದ್ದು ಎಂದರು.ಇದನ್ನೂ ಓದಿರಿಇಂದು ಸಂಜೆ ಫಿಲಂ ರಿಲೀಸ್​ ಮಾಡ್ತಾರಂತೆ ಜಾರಕಿಹೊಳಿ! ಅದು ಯಾರ ಸಿನಿಮಾ?
ಸರ್ಕಾರವನ್ನೇ ಬೀಳಿಸತ್ತೇನೆ ಎಂದು ರಮೇಶ್​ ಜಾರಕಿಹೊಳಿ ಎಚ್ಚರಿಸಿರುವ ವಿಷಯ ಬಿಜೆಪಿ ಮತ್ತು ಅವರ ಶಾಸಕರಿಗೆ ಸಂಬಂಧಿಸಿದ್ದು ಎಂದ ಡಿಕೆ ಸುರೇಶ್​, ಸಂತ್ರಸ್ತ ಮಹಿಳೆ ನೀಡಿರುವ ದೂರಿನ‌ ಮೇಲೆ ನ್ಯಾಯ ಸಮ್ಮತ ಕ್ರಮ ತೆಗೆದುಕೊಳ್ಳಬೇಕಾದ್ದು ಸರ್ಕಾರದ ಕರ್ತವ್ಯ. ಆ ಮೂಲಕ ಮಹಿಳೆಯರ ಪರ ಸರ್ಕಾರ ಇದೆ ಎಂಬುದನ್ನು ತೋರಿಸಬೇಕಿದೆ ಎಂದರು.
ಸಿಡಿ ಬಿಡುಗಡೆ ಮಾಡಿಸಿದ್ದೇ ಡಿಕೆಶಿ ಎಂಬ ಆರೋಪವನ್ನ ಅಲ್ಲಗೆಳೆದ ಸುರೇಶ್​, ರಾಜಕೀಯ ವೈರಿಗಳ‌ ಮೇಲೆಯೇ ಆರೋಪ ಮಾಡಬೇಕು. ಸರ್ಕಾರದ ವೈಫಲ್ಯ- ದುರಾಡಳಿತಗಳನ್ನು ಎತ್ತಿ ಹಿಡಿಯಬೇಕಿರೋದು ನಮ್ಮ ಕರ್ತವ್ಯ. ಬಿಜೆಪಿ ದುರಾಡಳಿತ ನಡೆಸುತ್ತಿದ್ದು, ಮಹಿಳೆ ಪರ ನಾವು ಹೋರಾಟ ಮಾಡೋದು ಸರಿ ಎನ್ನಿಸಿದೆ ಎಂದು ಸುರೇಶ್​ ಹೇಳಿದರು.
ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಜಾರಕಿಹೊಳಿ ಸ್ಪರ್ಧೆ: ನಾಮಪತ್ರ ಸಲ್ಲಿಕೆ ವೇಳೆ ಬಾರದಂತೆ ಡಿಕೆಶಿಗೆ ಸೂಚನೆ

ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 16 =
Remember me
