ಬೆಂಗಳೂರು:ಸಿಡಿ ಕೇಸ್​ ಸಂಬಂಧ ಶುಕ್ರವಾರ ಎಸ್​ಐಟಿ ವಿಚಾರಣೆಗೆ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹಾಜರಾಗಿದ್ದರು. ಆಡುಗೋಡಿ ಟೆಕ್ನಿಕಲ್ ಸೆಲ್​ನಲ್ಲಿ ನಿರಂತರ 4 ಗಂಟೆ ಕಾಲ ಜಾರಕಿಹೊಳಿಯನ್ನು ಎಸ್​ಐಟಿ ಪೊಲೀಸರು ತೀವ್ರ ವಿಚಾರಣೆ ನಡೆಸಿದರು.
ನಿನ್ನೆ ನಡೆದ ವಿಚಾರಣೆಯಲ್ಲಿ ಏನೇನೆಲ್ಲ ಆಯ್ತು ಎಂಬುದರ ಇನ್​ಸೈಡ್​ ಮಾಹಿತಿ ಇಲ್ಲಿದೆ. ವಿಚಾರಣೆಗೂ ಮುನ್ನ ವಿವಿಧ ಆಯಾಮಗಳಲ್ಲಿ 50 ಪ್ರಶ್ನೆಗಳನ್ನ ಎಸ್ಐಟಿ ಸಿದ್ಧಪಡಿಸಿಕೊಂಡಿತ್ತು. ನಿನ್ನೆ ಸಂಜೆ 4 ಗಂಟೆಗೆ ಬಂದ ರಮೇಶ್ ಜಾರಕಿಹೊಳಿ, ಈ 50 ಪ್ರಶ್ನೆಗಳಲ್ಲಿ ಉತ್ತರಿಸಿದ್ದು 20 ಪ್ರಶ್ನೆಗೆ ಮಾತ್ರ.ಇದನ್ನೂ ಓದಿರಿ‘ಸಿಡಿ ಲೇಡಿ’ ಹೆಸರಲ್ಲಿ ರಿಜಿಸ್ಟರ್ ಆಯ್ತು ಸಿನಿಮಾ ಟೈಟಲ್! ಸ್ಯಾಂಡಲ್​ವುಡ್​ನಲ್ಲಿ ವಿವಾದ ಎಬ್ಬಿಸಲಿದ್ಯಾ?
ಸಿಡಿ ಕೇಸ್​ನ ಕಿಂಗ್​ಪಿನ್ ಎನ್ನಲಾದ ನರೇಶ್ ಗೌಡನ ಫೋಟೋ ತೋರಿಸಿದ ಎಸ್​ಐಟಿ, ‘ಈತನನ್ನ ನೋಡಿದ್ದೀರಾ? ನಿಮ್ಮ ಸಂಪರ್ಕಕ್ಕೆ ನರೇಶ್ ಬಂದಿದ್ದನೇ? ನಿಮ್ಮ ಬಳಿ ಎಷ್ಟು ಮಂದಿ ಆಪ್ತ ಸಹಾಯಕರಿದ್ದಾರೆ? ಅವರನ್ನ ಸಿಡಿ ಕೇಸ್​ ತಂಡದಲ್ಲಿರುವ ಯಾರಾದರೂ ಸಂಪರ್ಕಿಸಿದ್ದರೇ? ಯುವತಿ ಹೇಗೆ ಪರಿಚಯ? ಯಾರಿಂದ ಪರಿಚಯ? ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟರು.
ಎಸ್​ಐಟಿ ಅಧಿಕಾರಿಗಳ ಕೆಲ ಪ್ರಶ್ನೆಗೆ ಅಳೆದು ತೂಗಿ ಉತ್ತರ ನೀಡಿದ ರಮೇಶ್​ ಜಾರಕಿಹೊಳಿ, ಉಳಿದ ಪ್ರಶ್ನೆಗಳಿಗೆ ತನ್ನ ವಕೀಲರನ್ನು ಸಂಪರ್ಕಿಸಿದ ಬಳಿಕ ಹೇಳ್ತೀನಿ ಎಂದರು. ಈ ಹಿಂದೆ ದೂರು ನೀಡಿದ್ದ ವೇಳೆಯೂ ಮಾಜಿ ಸಚಿವರು ಅಸ್ಪಷ್ಟ ಮಾಹಿತಿ ನೀಡಿದ್ದರು. ಷಡ್ಯಂತ್ರ ನಡೆಸಿದ್ದಾರೆಂದು ಹೇಳಿದ್ದ ಜಾರಕಿಹೊಳಿ, ಯಾರು ಆ ವ್ಯಕ್ತಿಗಳೆಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಸದಾಶಿವನಗರದಲ್ಲಿ ನಡೆದಿದ್ದ ಕುತಂತ್ರ ಎಂದು ಹೇಳಿದ್ದರಷ್ಟೆ. ಆದರೆ ಸದಾಶಿವನಗರದಲ್ಲಿ ಎಲ್ಲಿ? ಎಂದು ರಿವೀಲ್ ಮಾಡಿರಲಿಲ್ಲ.
‘ಸಿಡಿ ಲೇಡಿ’ ಹೆಸರಲ್ಲಿ ರಿಜಿಸ್ಟರ್ ಆಯ್ತು ಸಿನಿಮಾ ಟೈಟಲ್! ಸ್ಯಾಂಡಲ್​ವುಡ್​ನಲ್ಲಿ ವಿವಾದ ಎಬ್ಬಿಸಲಿದ್ಯಾ?

ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 5 =
Remember me
