ಬೆಂಗಳೂರು:ಬಾಂಬ್ ಸ್ಪೋಟ ನಡೆದ ರಾಮೇಶ್ವರಂ ಕೆಫೆ ಮುಂದಿನ ಶುಕ್ರವಾರ ಅಂದ್ರೆ ಶಿವರಾತ್ರಿಯಂದು ಪುನಾರಂಭವಾಗಲಿದೆ ಎಂದು ಮಾಲೀಕ ರಾಘವೇಂದ್ರ ರಾವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು
ಶುಕ್ರವಾರ ಸಂಜೆಯಿಂದ ರಾಮೇಶ್ವರಂ ಕೆಫೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ. ನಮ್ಮ ಸಂಸ್ಥೆಯ ಪರವಾಗಿ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ರಾಮೇಶ್ವರಂ ಕೆಫೆ ಇದು ನಿನ್ನೆ ಮೊನ್ನೆ ಹುಟ್ಟಿದ ಸಂಸ್ಥೆ ಅಲ್ಲ. 2012 ರಲ್ಲಿ ನಾಲ್ಕು ಜನ ಸೇರಿಕೊಂಡು ಕುಮಾರಪಾರ್ಕ್​ ಬಳಿಯ ಪುಟ್ ಪಾತ್ ಮೇಲೆ ಆರಂಭವಾಗಿತ್ತು. ಶುಕ್ರವಾರ ಸಂಭವಿಸಿದ ಬಾಂಬ್​ ಸ್ಫೋಟದ ಕಠಿಣ ಸಂದರ್ಭದಲ್ಲೂ ಪ್ರತಿಯೊಬ್ಬರು ನಮ್ಮ ಜೊತೆ ನಿಂತಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದರು.
ಎಪಿಜೆ ಅಬ್ದುಲ್ ಕಲಾಂ. ಅವರ ಪ್ರೇರಣೆ ಮೇಲೆ ರಾಮೇಶ್ವರಂ ಕೆಫೆ ಶುರು ಮಾಡಲಾಗಿದೆ. ಕಷ್ಟಗಳು, ಲಾಭ ನಷ್ಟಗಳು ನಮಗೆ ಹೊಸದೇನಲ್ಲ‌. ನಮ್ಮಲ್ಲಿ ಎಲ್ಲಾ ಬ್ರಾಂಚ್ ಸೇರಿ ಎರಡು ಸಾವಿರ ಜನ ಕೆಲಸ ಮಾಡ್ತಾರೆ. ಎಲ್ಲರೂ ಹಳ್ಳಿ ಕಡೆಯವರು. ಏನು ಮಾಡೋಕೆ ಆಗದವರು ದಿಕ್ಕು ತೋಚದೆ ಬರುವವರಿಗೆ ನಾವು ಕೆಲಸ ಕೊಡುತ್ತೇವೆ ಎಂದರು.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಘಟನೆ ಸರಿಯಲ್ಲ. ಭಾರತೀಯರಾಗಿ ಇದನ್ನ ಖಂಡಿಸಬೇಕು. ಇದು ನಮಗೆಲ್ಲಾ ಮುನ್ನೆಚ್ಚರಿಕೆಯಾಗಿದ್ದು, ನಡೆದ ಘಟನೆಯನ್ನು ಎದುರಿಸಬೇಕಿದೆ. ಬರುವ ಶುಕ್ರವಾರ ಶಿವರಾತ್ರಿಯಂದು ರಾಮೇಶ್ವರಂ ಕೆಫೆ ಆರಂಭವಾಗಲಿದ್ದು, ನಮಗೆ ಬೆಂಬಲ ನೀಡಿದ ಎಲ್ಲರನ್ನು ಕಾರ್ಯಕ್ರಮ ಕರೆಯುತ್ತೇನೆ ಎಂದು ಕೆಫೆ ಮಾಲೀಕ ರಾಘವೇಂದ್ರ ಹೇಳಿದರು.
ಈ ಘಟನೆಯಲ್ಲಿ ಗಾಯಗೊಂಡಿರುವವರ ಜೊತೆ ನಾವು ಇರುತ್ತೇವೆ. ರಾಜ್ಯ ಸರ್ಕಾರವು ಚಿಕಿತ್ಸೆ ವೆಚ್ಚ ಭರಸುವುದಾಗಿ ಹೇಳಿದೆ.  ಪೊಲೀಸರು ಮೆಟಲ್ ಡಿಟೆಕ್ಟರ್ ಇಟ್ಕೊಳಿ ಅಂತಾ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನೂ ಅಳವಡಿಸಿಕೊಳ್ತೀವಿ ಎಂದು ರಾಮೇಶ್ವರಂ ಕೆಫೆ ಮಾಲೀಕರು ಹೇಳಿದರು.
ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು

ಬಾಂಬ್ ಸ್ಫೋಟ ಸಂಭವಿಸಿದ ರಾಮೇಶ್ವರಂ ಕೆಫೆಯ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 2 =
Remember me
