ಬೆಂಗಳೂರು:ಭಾರತೀಯರ ಪಾಲಿನ ಕನಸು ನನಸಾಗಿದೆ. ರಾಮನ ಪ್ರಾಣ ಪ್ರತಿಷ್ಠೆ ನೆರವೇರಿದೆ.  ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ವಿರಾಜಮಾನನಾಗಿದ್ದಾನೆ. ರಾಮ ಮಂದಿರ ಉದ್ಘಾಟನೆಯಾದ ಬೆನ್ನಲ್ಲೇ, ಹೆರಿಗೆಗೆ ಅಂತಾ ತುಂಬು ಗರ್ಭಿಣಿಯರು ಮುಗಿಬಿದ್ದಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ  60ಕ್ಕೂ ಹೆಚ್ಚು ಮಕ್ಕಳಿಗೆ ಮಹಿಳೆಯರು ಜನ್ಮ ನೀಡಿದ್ದಾರೆ.
ರಾಮನ ಪ್ರಾಣ ಪ್ರತಿಷ್ಠೆ ನೆರವೇರಿದೆ. ಈ ಶುಭ ದಿನದಂದು ರಾಮನಂತಹ ಮಗು, ಸೀತೆಯಂತಹ ಮಗಳು ಪಡೆಯಲು ಸಿಟಿ ಪೋಷಕರು ಆಸಕ್ತಿ ವಹಿಸಿದ್ದಾರೆ.  ರಾಮಲಲ್ಲಾ ಪ್ರತಿಷ್ಠಾಪನೆ ದಿನವೇ ರಾಜಧಾನಿಯಲ್ಲಿ 60ಕ್ಕೂ ಹೆಚ್ಚು ಕಂದಮ್ಮಗಳು ಜನ್ಮ ಪಡೆದುಕೊಂಡಿವೆ. ಸಿಲಿಕಾನ್ ಸಿಟಿಯಲ್ಲಿ ಜ. 22 ಡೆಲಿವರಿ  ಕ್ರೇಜ್ ಶುರುವಾಗಿದೆ.
ವಾಣಿವಿಲಾಸ್ ಆಸ್ಪತ್ರೆಯಲ್ಲಿ 28 ಕಂದಮ್ಮಗಳು ಜನಿಸಿದ್ದು, ಈ ಪೈಕಿ 10 ನಾರ್ಮಲ್, 1 ಸಿಸೇರಿಯನ್ ಮಾಡಲಾಗಿದೆ. ಗಂಡು 16, ಹೆಣ್ಣು 12 ​
ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈ ತನಕ 4 ಶಿಶುಗಳ ಜನನವಾಗಿದ್ದು, ಈ ಪೈಕಿ 2 ಸಹಜ, 2 ಸಿಸೇರಿಯೆನ್​
ಘೋಷಾ ಆಸ್ಪತ್ರೆಯಲ್ಲಿ ಒಟ್ಟು 6 ಕಂದಮ್ಮಗಳ ಜನನ, 5 ನಾರ್ಮಲ್, 1 ಸಿಸೇರಿಯನ್​
ಇತರೆ ಖಾಸಗಿ ಆಸ್ಪತ್ರೆಗಳಲ್ಲಿ 25 ಕ್ಕೂ ಅಧಿಕ ಮಕ್ಕಳ ಜನನವಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಡೆಲಿವರಿ ಮಾಹಿತಿ ನೀಡದಂತೆ ಪೋಷಕರು ತಾಕೀತು ಮಾಡಿದ್ದು, ಈ ಹಿನ್ನೆಲೆ ಡೆಲಿವರಿ ಮಾಹಿತಿ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕಿದ್ದಾರೆ.
ರಾಮ ಮಂದಿರ ಉದ್ಘಾಟನೆಯ ದಿನವೇ ತಮಗೆ ಮಗು ಜನಿಸಬೇಕು ಎಂದು ತುಂಬು ಗರ್ಭೀಣೀಯರು, ಕುಟುಂಬಸ್ಥರು ಹೆರಿಗೆ ಆಸ್ಪತ್ರೆಗಳ ಮೊರೆ ಹೋಗಿದ್ದಾರೆ. ವೈದ್ಯರಿಗೆ ಖುದ್ದು ಭೇಟಿಯಾಗಿ ಜ.22 ರಂದೆ ತಮ್ಮ ಹೆರಿಗೆಯಾಗಬೇಕು ಎಂದು ಬೇಡಿಕೆ ಇಟ್ಟಿದ್ದರು.  22ರಂದೆ ಸಿಜೆರಿಯನ್‌ ಮಾಡುವಂತೆ ವೈದ್ಯರಿಗೆ ಗಂಟು ಬಿದ್ದಿದ್ದರು. ಕೆಲವರು ಹೆರಿಗೆಗೆ ತಮ್ಮ ನಂಬರ್‌ ಸಿಗುತ್ತೋ ಇಲ್ಲೋ ಎಂದು ಅಡ್ವಾನ್ಸ್‌ ರೆಜಿಸ್ಟ್ರೇಶನ್‌ ಸಹ ಮಾಡಿಸಿದ್ದರು.
ಜ.22 ರಂದು ಮಗು ಜನಿಸಿದ್ರೆ ರಾಮ ಅಥವಾ ಸೀತೆ ಎಂದು ಹೆಸರಿಡಲು ಈಗಾಗಲೇ ಕೆಲ ಕುಟುಂಬಗಳು ನಿರ್ಧರಿಸಿಕೊಂಡಿವೆ. ಮಂದಿರ ಉದ್ಘಾಟನೆ ದಿನ ಗಂಡು ಮಗು ಹುಟ್ಟಿದ್ರೆ ರಾಮ ಹಾಗೂ ಹೆಣ್ಣು ಮಗು ಹುಟ್ಟಿದ್ರೆ ಸೀತೆ ಎಂದು ಹೆಸರಿಲು ನಿರ್ಧಾರ ಮಾಡಿದ್ದಾರೆ.. ಮನೆಯಲ್ಲಿ ಈಗಾಗಲೇ ರಾಮ ಅಥವಾ ಸೀತೆ ಎಂದು ಹೆಸರಿನ ಮಕ್ಕಳಿದ್ದಲ್ಲಿ, ರಾಮಧೂತ ಆಂಜನೇಯ ಸ್ವಾಮಿ, ಸೀತೆಯ ಪರ್ಯಾಯ ಹೆಸರುಗಳನ್ನ ಆಯ್ಕೆ ಮಾಡಿ ಇಟ್ಟಿದ್ದಾರೆ ಅನ್ನೋದು ವಿಶೇಷ.
ನನಗೆ ಅದ್ರ ಅವಶ್ಯಕತೆ ಇಲ್ಲ, ಎಲ್ಲವನ್ನು ಅನುಭವಿಸಿದ್ದೇನೆ..’ಓ ಮಲ್ಲಿಗೆ’ ಬ್ಯೂಟಿ ಚಾರುಲತಾ ಓಪನ್​ ಟಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seventeen =
Remember me
