ರಾಮನಗರ:ಇಂದು(ಜು.05) ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸಿದ ಚಾಲಕರ ವಿರುದ್ಧ ಇದೀಗ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮೂರು ತಿಂಗಳಲ್ಲಿ 61.41ಲಕ್ಷ ‌ಮಾನವ ದಿನ ಸೃಜನೆ-ನರೇಗಾ ಅನುಷ್ಠಾನದಲ್ಲಿ ರಾಜ್ಯಕ್ಕೆ ಬೆಳಗಾವಿ ಜಿಪಂ ಪ್ರಥಮ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸಿದ ಒಟ್ಟು 44 ಚಾಲಕರ ವಿರುದ್ಧ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ರೇಡಾರ್ ಗನ್‌ ಉಪಯೋಗಿಸಿ ವೇಗ ತಪಾಸಣೆ ನಡೆಸಿದ ಸಂಚಾರಿ ಪೊಲೀಸರು, ಅನುಮತಿಸುವ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದವರ ವಿರುದ್ಧ ಕೇಸ್​ ಹಾಕಿದ್ದಾರೆ.
ಮಾರ್ಚ್‌ನಲ್ಲಿ ಉದ್ಘಾಟನೆಯಾದ ದಿನದಿಂದಲೂ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಹಲವು ಅಪಘಾತಗಳು ಸಂಭವಿಸಿದ ಸುದ್ದಿ ವರದಿಯಾಗಿದೆ. ವರದಿಗಳ ಅನುಸಾರ, ಈ ವರ್ಷದ ಜನವರಿ 1 ರಿಂದ ಜೂನ್ 25ರ ನಡುವೆ ಎಕ್ಸ್‌ಪ್ರೆಸ್‌ವೇಯಲ್ಲಿ ಒಟ್ಟು 58 ಜನರು ಸಾವನ್ನಪ್ಪಿದ್ದಾರೆ. ಹೈವೆಯಲ್ಲಿ ಅಪಘಾತ ಪೀಡಿತ ಪ್ರದೇಶಗಳನ್ನು ಗುರುತಿಸಿ, ವೇಗದ ಮಿತಿಯನ್ನು ಸಂಚಾರಿ ಪೊಲೀಸರು ಗಂಟೆಗೆ 100 ಕಿಲೋಮೀಟರ್​ಗೆ ನಿಗದಿಪಡಿಸಿದ್ದಾರೆ,(ಏಜೆನ್ಸೀಸ್).
ಉದ್ಯೋಗಿಗಳಿಗೆ ಹಾಗಲಕಾಯಿ ತಿನ್ನಿಸಿದ ಕಂಪನಿ; ಕಾರಣ ತಿಳಿದರೆ ಶಾಕ್ ಆಗ್ತೀರಾ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
