ಮಂಡ್ಯ:ಕಾಂಗ್ರೆಸ್​ ಮಾಜಿ ಸಂಸದೆ, ನಟಿ ರಮ್ಯಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ‘ನಿಮ್ಮ ಮದುವೆ ಯಾವಾಗ?’ ಎಂಬ ಪ್ರಶ್ನೆ ಎದುರಿಸುತ್ತಲೇ ಇರುತ್ತಾರೆ. ಇದೀಗ ಮಂಡ್ಯದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ವೇಳೆ ಅಭಿಮಾನಿಗಳಿಂದ ಮತ್ತದೇ ಪ್ರಶ್ನೆ ಎದುರಾಗಿದೆ.
ಮದುವೆ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ರಮ್ಯಾ ಉತ್ತರಿಸುತ್ತಾ, ನನಗೆ ಮೊದಲು ಹುಡುಗನನ್ನು ಹುಡುಕಿ. ಗೌಡರ ಹುಡುಗ ಸಿಕ್ತಾರೆ ಅಂದ್ರೆ ನೋಡಿ. ನನಗೆ ಒಬ್ಬರೂ ಕಾಣುತ್ತಿಲ್ಲ, ನೀವೇ ಹುಡುಕಿ ಕೊಡಿ. ನನಗೂ ಹುಡುಕಿ… ಹುಡುಕಿ ಸಾಕಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪ್ರಿಯತಮೆಯನ್ನು ವರಿಸಲು ಪಾಕಿಸ್ತಾನಕ್ಕೆ ತೆರಳಿದ ಭಾರತೀಯ ಯುವಕ!
ರಮ್ಯಾ ಮಾತನಾಡುತ್ತಾ, ನನಗೂ ಹುಡುಗನನ್ನು ನೋಡಿ ನೋಡಿ ಸಾಕಾಗಿದೆ. ಬೇಕಿದ್ದರೆ ನೀವೇ ಸ್ವಯಂವರ ಏರ್ಪಾಟು ಮಾಡಿ, ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ.
ನಾನು ಯಾವಾಗಲೂ ಮಂಡ್ಯದವಳು. ನಾನು ಗೌಡತಿ ಎಂಬುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ. ನಮ್ಮ ತಾಯಿ ಊರು ಮಂಡ್ಯ, ನಮ್ಮ ತಂದೆ ಸತ್ತಿದ್ದು ಇಲ್ಲೇ, ನನ್ನ ಅಭ್ಯರ್ಥಿ ಮಾಡಿದ್ದು ಇಲ್ಲೇ, ಮಂಡ್ಯ ಜಿಲ್ಲೆಯ ಜನರು ನನಗೆ ಬೆಂಬಲ‌ ನೀಡಿದ್ದಾರೆ. ಈ ಅಭಿಮಾನವನ್ನು ನಾನು ಯಾವತ್ತೂ ಮರೆಯಲ್ಲ, ಇದು ಕಮ್ಮಿಯೂ ಆಗಲ್ಲ. ಮಂಡ್ಯ ಸಂಬಂಧ ಕೇವಲ‌ ರಾಜಕೀಯವಾಗಿ ಅಲ್ಲ, ನನಗೆ ಮಂಡ್ಯ ಕುಟುಂಬದ ರೀತಿ ಎಂದ ರಮ್ಯಾ, ನಾನು ಮಂಡ್ಯಕ್ಕೆ ಬಂದುಹೋಗುತ್ತಾ ಇರುತ್ತೇನೆ ಎಂದು ರಮ್ಯಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಕುಟುಂಬವಾದಿ ಪಕ್ಷಗಳಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ; ಜೆಡಿಎಸ್, ಕಾಂಗ್ರೆಸ್ ವಿರುದ್ಧ ಗುಡುಗಿದ ಮೋದಿ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 2 =
Remember me
