ಮಂಡ್ಯ:ದಿನದಿಂದ ದಿನಕ್ಕೆ ದೇಶದೆಲ್ಲೆಡೆ ಲೋಕಸಭಾ ಚುನಾವಣೆಯ ಕಾವೇರುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್​ ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿಗಳ ನಡುವಿನ ಹಣಾಹಣಿ ಭರ್ಜರಿಯಾಗಿ ಸಾಗುತ್ತಿದೆ. ಸದ್ಯ ಎಲ್ಲರ ಚಿತ್ತ ಮಂಡ್ಯ ಲೋಕಸಭಾ ಕ್ಷೇತ್ರದತ್ತ ಮೂಡಿದ್ದು, ಯಾರಿಗೆ ಒಲಿಯಲಿದೆ ಮಂಡ್ಯ ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಇದನ್ನೂ ಓದಿ:21 ವರ್ಷಗಳ ನಂತರ ಸುಕ್ಮಾದಲ್ಲಿರುವ ರಾಮ ದೇವಾಲಯದಲ್ಲಿ ಮತ್ತೆ ಪೂಜೆ ಆರಂಭ
ಇನ್ನು ಈ ಮಧ್ಯೆ ಈಗಾಗಲೇ ಲೋಕಸಭಾ ಅಖಾಡದಲ್ಲಿ ಬಹುಮತಗಳಿಂದ ಗೆಲುವು ದಾಖಲಿಸುವ ಸಲುವಾಗಿ ಬಿರುಸಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಮೈತ್ರಿ ಅಭ್ಯರ್ಥಿ ಎಚ್​.ಡಿ. ಕುಮಾರಸ್ವಾಮಿ ಒಂದೆಡೆಯಾದರೆ, ಕಾಂಗ್ರೆಸ್​ನಿಂದ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) ಮತ್ತೊಂದೆಡೆ. ಈ ಇಬ್ಬರ ಕಾಳಗದಲ್ಲಿ ಗೆಲುವಿನ ಲೆಕ್ಕಾಚಾರ ಯಾರಿಗೆ ಎಂಬ ಕುತೂಹಲ ಮತದಾರರಲ್ಲಿ ಹೆಚ್ಚಿದೆ.
ಇನ್ನು ತಮ್ಮ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಕೈಗೊಳ್ಳಲು ಕಾಂಗ್ರೆಸ್​ ಮಾಸ್ಟರ್​ಪ್ಲಾನ್ ಮಾಡಿದೆ. ಒಕ್ಕಲಿಗರ ಭದ್ರಕೋಟೆಯಲ್ಲಿ ಪಾರುಪತ್ಯ ಸಾಧಿಸಲು ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇವರೊಂದಿಗೆ ಎಚ್​ಡಿಕೆ ವಿರುದ್ಧ ಸ್ಯಾಂಡಲ್​ವುಡ್​ನ ಮೋಹಕ ತಾರೆ ನಟಿ ರಮ್ಯ ಕೂಡ ಪ್ರಚಾರಕ್ಕೆ ಬರಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಮಾತುಬಾರದ, ಕಿವಿ ಕೇಳಿಸದ ವಕೀಲೆಯ ವಾದ; ವಿಶೇಷ ಕ್ಷಣಕ್ಕೆ ಸಾಕ್ಷಿಯಾದ ಕರ್ನಾಟಕ ಹೈಕೋರ್ಟ್
ಏಪ್ರಿಲ್ 17 ಅಥವಾ‌ 20ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುವುದು. ಈ ಸಮಾವೇಶದಲ್ಲಿ ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯರಿಂದ ಒಂದು ದಿನ ಮತಬೇಟೆ ಇರಲಿದ್ದು, ಮಂಡ್ಯ ಲೋಕಾ ಕ್ಷೇತ್ರದ ಕೆ.ಆರ್.ನಗರ, ಕೆ.ಆರ್.ಪೇಟೆಯಲ್ಲಿ ಮತಯಾಚನೆ ಮಾಡಲಿದ್ದಾರೆ.
ಧೋನಿ ಪ್ರಯತ್ನ ವಿಫಲವಾದ್ರೂ ಬಿಡಲಿಲ್ಲ ಫ್ಯಾನ್ಸ್​ ಕಿರುಚಾಟ! ಶಾಕ್ ಆದ ದೈತ್ಯ ಆಟಗಾರ

ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 12 =
Remember me
