ಬೆಂಗಳೂರು:ವಿಧಾನಸಭೆ ಅಧಿವೇಶನದ ಹೊತ್ತಿನಲ್ಲಿ ಚುನಾವಣೆ ಸಂಬಂಧಿ ರಾಜಕೀಯ ಚಟುವಟಿಕೆ ಬಿರುಸುಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಬೆಳಗಾವಿಯಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ ರಾಜ್ಯ ಚುನಾವಣೆ ಸಮಿತಿ ಸಭೆ ನಡೆಯಲಿದೆ.
ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಚುನಾವಣೆ ಸಮಿತಿ ಮೊದಲ ಸಭೆ ಕರೆದಿದ್ದು, ಮೂರು ದಿನಗಳ ಹಿಂದಷ್ಟೇ ಎಐಸಿಸಿ ರಚಿಸಿದ್ದ ಸಮಿತಿಯ 42 ಸದಸ್ಯರು ಪಾಲ್ಗೊಳ್ಳುವರು.
ಟಿಕೆಟ್ ಹಂಚಿಕೆ, ಪ್ರಚಾರ ಸಭೆ, ಹೋರಾಟಗಳು, ಚುನಾವಣೆ ತಂತ್ರಗಾರಿಕೆ, ಬಿಜೆಪಿಗೆ ಪ್ರತಿರೋಧ ಒಡ್ಡುವ ಕುರಿತಂತೆ ಈ ಸಭೆಯಲ್ಲಿ ಚರ್ಚೆಯಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿಯಾಗಿ ನಡೆಸಲಿರುವ ಬಸ್ ಯಾತ್ರೆಗೆ ಈ ಸಮಿತಿ ಅಂತಿಮ ಮುದ್ರೆ ಒತ್ತಲಿದೆ.
ಸಭೆಯಲ್ಲಿ ಪ್ರಮುಖವಾಗಿ ಬಿಜೆಪಿಯ ನೀತಿ ನಿಲುವುಗಳು, ಅದರಿಂದ ಚುನಾವಣೆ ಮೇಲೆ ಬೀರುವ ಪರಿಣಾಮಗಳು, ಅದಕ್ಕೆ ಕಾಂಗ್ರೆಸ್ ಕಡೆಯಿಂದ ನೀಡಬೇಕಾದ ತಿರಗೇಟುಗಳ ಕುರಿತು ಚರ್ಚೆಯಾಗಲಿವೆ.
ಚುನಾವಣೆ ಸಮಿತಿಯ ಜವಾಬ್ದಾರಿಗಳು ಸಹ ಇದೇ ವೇಳೆ ನಿರ್ಧಾರವಾಗಲಿದೆ. ಸಭೆ ನಡೆಸುವುದು ಹಾಗೂ ಟಿಕೆಟ್ ಹಂಚಿಕೆ ವಿಚಾರವಾಗಿ ಅಭಿಪ್ರಾಯ ನೀಡಲು ಉಪ ಸಮಿತಿಗಳನ್ನು ರಚಿಸುವ ಸಾಧ್ಯತೆಯೂ ಇದೆ.
ಕೋವಿಡ್​ಗೆ ತಾಯಿ ಬಲಿ… ಒಂದೊತ್ತಿನ ಊಟಕ್ಕೂ ಬೀದಿಬೀದಿ ಅಲೆಯುತ್ತಿದ್ದ 10 ವರ್ಷದ ಬಾಲಕ ರಾತ್ರೋರಾತ್ರಿ ಕೋಟ್ಯಧಿಪತಿಯಾದ!

ದಾವಣಗೆರೆ ಮೂಲದ ನವದಂಪತಿ ಬಾಳಲ್ಲಿ ದುರಂತ: ಸ್ಟ್ರೆಚರ್​​ನಲ್ಲಿ ಮಲಗಿಕೊಂಡೇ ಶವಗಾರಕ್ಕೆ ಬಂದು ಗಂಡನ ಮುಖ ಸವರಿದ ಪತ್ನಿ… ಮನಕಲಕುತ್ತೆ ಈ ಸ್ಟೋರಿ

ರಾಮನಗರಕ್ಕೆ ನಿಖಿಲ್​ ಕುಮಾರಸ್ವಾಮಿಯೇ ಅಭ್ಯರ್ಥಿ: ಹೆಸರು ಘೋಷಿಸಿದ ಶಾಸಕಿ ಅನಿತಾ

surjevala
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
