ಕಲಬುರಗಿ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾನೆ‌ ಕರೆದುಕೊಂಡು ಬರುತ್ತೇನೆ. ಬಿಜೆಪಿಯವರಿಗೆ ಧಮ್‌ ಇದ್ದರೆ ಅವರನ್ನು ‌ಹೊಡೆದು ಹಾಕಲಿ ನೋಡಣ ಎಂದು ಕಲಬುರಗಿಯಲ್ಲಿ ಎಐಸಿಸಿ‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್ ಸುರ್ಜೆವಾಲ ಸವಾಲು ಹಾಕಿದ್ದಾರೆ.
ಸಚಿವ ಅಶ್ವಥ್ ನಾರಾಯಣ, ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕುವ ಹೇಳಿಕೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ,ಡಿಕೆಶಿ,ಮಲ್ಲಿಕಾರ್ಜುನ್ ಖರ್ಗೆ, ಖಂಡ್ರೆ ಅವರನ್ನು ಕರೆದುಕೊಂಡು ಬರುತ್ತೇನೆ. ಇವರೆಲ್ಲೆರನ್ನು ಹೊಡೆದು ಹಾಕಲಿ ನೋಡೋಣ ಎಂದು ವಾಗ್ಧಾಳಿ ಮಾಡಿದ್ದಾರೆ.
ಕರ್ನಾಟಕದಲ್ಲಿರುವ 40% ಬೊಮ್ಮಾಯಿ ಸರ್ಕಾರ ಕಿತ್ತೊಗೆದು ಹೊಸ ಯುಗದ ಆರಂಭ ಮಾಡುತ್ತೇವೆ. ನಮ್ಮ‌ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದ ನಂತರ ಟಿಕೆಟ್ ಫೈನಲ್ ಮಾಡಲಾಗುತ್ತದೆ. ಅತೀ ಶೀಘ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆಂದಿದ್ದಾರೆ.ಇದನ್ನೂ ಓದಿ:ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿಯಿಂದಲೇ ಹೆಂಡತಿ, ಮಕ್ಕಳ ಹತ್ಯೆ!
ಮಾಂಸ ಆಹಾರ ಸೇವಿಸಿ ಸಿ.ಟಿ.ರವಿ ದೇವಸ್ಥಾನ ಪ್ರವೇಶ ಮಾಡಿರುವ ಕುರಿತಾಗಿ ಮಾತನಾಡಿ, ಸಿ.ಟಿ.ರವಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಇದೀಗ ಅವರ ಮಾತಿನ ಮೇಲೆ ನಾವು ಗಮನ ಕೊಡವುದಿಲ್ಲ. ದಿನ ಬೆಳಗಾದರೆ ಯಾವುದಾದರು ವಿಚಾರವಾಗಿ ಟಿವಿಯಲ್ಲಿ ಕಾಣುವ ಹವ್ಯಾಸವಿದೆ ಎಂದು ಅಪಹಾಸ್ಯ ಮಾಡಿದ್ದಾರೆ.
ಬಿಜೆಪಿ ಪಕ್ಷ ಅವರ ಪಕ್ಷದ‌ ಮುಖಂಡರನ್ನೆ ಅವಮಾನ ಮಾಡುತ್ತ ಬರುತ್ತಿದೆ. ಮೋದಿಜಿ ಅವರು ಗುರು ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರಿಗೆ ನಿವೃತಿ ನೀಡಿದ್ದಾರೆ ಯಡಿಯೂರಪ್ಪ ಅವರನ್ನು ಸಹ ಸಿಎಂ ಸ್ಥಾನದಿಂದ ಹೀಗೆ ಅವಮಾನ ಮಾಡುತ್ತಿದ್ದಾರೆ. ಹಿರಿಯರನ್ನು ರಿಟೈಡ್ ಮಾಡುವದೇ ಬಿಜೆಪಿಯವೆ ಕೆಲಸವಾಗಿದೆ ಇದು ಅವರ ಸಂಸೃತಿಯನ್ನು ಎತ್ತಿ ತೋರಿಸುತ್ತಿದೆ. ಇಂತಹವರು ಜನರ ಸೇವೆ ಹೇಗೆ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.
CM ಬೊಮ್ಮಾಯಿ ತಡವಾಗಿ ಬಂದಿದ್ದಕ್ಕೆ ಸನ್ಮಾನವನ್ನೇ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬ್ಯೋನ್‌ ಬೋರ್ಗ್‌!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
