|ಎನ್.ಎಲ್.ಶಿವಮಾದುಬೆಂಗಳೂರು
ಕರೊನಾ ಸಮಯದಲ್ಲಿ ಉಂಟಾಗಿರುವ ಕಲಿಕಾ ಕೊರತೆಯನ್ನು ಸರಿದೂಗಿಸುವುದಕ್ಕಾಗಿ ದೇಶದಲ್ಲಿಯೇ ಮಾದರಿಯಾಗಿ ಆರಂಭಿಸಿರುವ ‘ಕಲಿಕಾ ಚೇತರಿಕೆ’ ಕಾರ್ಯಕ್ರಮದ ಮೌಲ್ಯಮಾಪನಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯಾದ್ಯಂತ ಶಾಲೆಗಳಿಗೆ ‘ದಿಢೀರ್ ಪರಿಶೀಲನೆ’ (ರ‌್ಯಾಂಡಮ್ ಚೆಕ್) ನೀಡಿ ಕಲಿಕಾ ಚೇತರಿಕೆ ಎಷ್ಟರ ಮಟ್ಟಿಗೆ ಮಕ್ಕಳ ಕಲಿಕೆಗೆ ಸಹಾಯಕವಾಗಿದೆ ಎಂಬುದನ್ನು ಪತ್ತೆ ಹಚ್ಚುವುದು ಮತ್ತು ಇಲಾಖೆ ಕಾರ್ಯಕ್ರಮದಿಂದ ಮಕ್ಕಳಿಗೆ ಅನುಕೂಲವಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ರಾಜ್ಯಾದ್ಯಂತ ದಿಢೀರ್ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
70ರಿಂದ 80 ಸಾವಿರ ಮಕ್ಕಳ ಪರಿಶೀಲನೆ:ರಾಜ್ಯಾದ್ಯಂತ 1ರಿಂದ 10ನೇ ತರಗತಿ ವರೆಗೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಸೇರಿ ಒಟ್ಟಾರೆ 1.6 ಕೋಟಿ ಮಕ್ಕಳಿದ್ದಾರೆ. ಈ ಪೈಕಿ ಸರ್ಕಾರಿ ಶಾಲೆಗಳಲ್ಲಿ 55 ಲಕ್ಷಕ್ಕೂ ಹೆಚ್ಚಿನ ಮಕ್ಕಳಿದ್ದಾರೆ. ಇದರಲ್ಲಿ ಸುಮಾರು 70ರಿಂದ 80 ಸಾವಿರ ಮಕ್ಕಳಿಂದ ಕಲಿಕಾ ಚೇತರಿಕೆ ಕಾರ್ಯಕ್ರಮ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮಕ್ಕಳು ನೀಡುವ ಮಾಹಿತಿ ಮತ್ತು ಮಕ್ಕಳಲ್ಲಿನ ಕಲಿಕಾ ಮಟ್ಟವನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
ಜಿಲ್ಲೆಗೊಬ್ಬರು ನೋಡಲ್ ಅಧಿಕಾರಿ:ಜಿಲ್ಲೆಗೊಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಅಧಿಕಾರಿಗಳು ಸ್ಥಳೀಯ ಸಿಆರ್​ಪಿ/ಬಿಏರ್​ಪಿ ಗಳೊಂದಿಗೆ ಭೇಟಿ ನೀಡಲಿದ್ದಾರೆ. ಶಾಲೆಯಲ್ಲಿನ ಮೂಲಸೌಕರ್ಯ, ಬಿಸಿಯೂಟ ಯೋಜನೆ ಅನುಷ್ಠಾನ, ಮಕ್ಕಳ ಶಿಕ್ಷಣದ ಕುರಿತ ಮಾಹಿತಿ ಸಂಗ್ರಹಿಸಲಿದ್ದಾರೆ. ಇದರ ಜತೆಗೆ ‘ಕಲಿಕಾ ಚೇತರಿಕೆ’ಯನ್ನು ಸಹ ಪರಿ ಶೀಲಿಸಿ ಮಾಹಿತಿ ಪಡೆಯಲಿದ್ದಾರೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಯಾವ ಉದ್ದೇಶದಿಂದ ಸಂಗ್ರಹ?:ಕರೊನಾ ಸಮಯದಲ್ಲಿ ಸತತ ಎರಡು ವರ್ಷ ಮಕ್ಕಳು ಮನೆಯಲ್ಲಿಯೇ ಉಳಿದಿದ್ದರು. ಈ ವೇಳೆ ನಿರಂತರವಾಗಿ ಎರಡು ವರ್ಷ ಕಲಿಕೆಗೆ ಅಡ್ಡಿಯಾಗಿದೆ. ದೂರದರ್ಶನದ ಮೂಲಕ, ಆನ್​ಲೈನ್ ಕಲಿಕೆ, ಯೂಟ್ಯೂಬ್ ಪಾಠಗಳು, ಪಾಳಿ ಪದ್ಧತಿಯಲ್ಲಿ ಕಲಿಕೆ ಹೀಗೆ ಹತ್ತಾರು ರೀತಿಯಲ್ಲಿ ಮಕ್ಕಳ್ನು ತಲುಪುವ ಶಿಕ್ಷಣ ಇಲಾಖೆ ಪ್ರಯೋಗ ಪೂರ್ಣಪ್ರಮಾಣದಲ್ಲಿ ಸಫಲವಾಗಿಲ್ಲ. ಈ ಕಾರಣದಿಂದಲೇ ಶಿಕ್ಷಣ ಇಲಾಖೆಯು 2022-23ನೇ ಶೈಕ್ಷಣಿಕ ವರ್ಷದ ಅರಂಭದಿಂದಲೇ ‘ಕಲಿಕಾ ಚೇತರಿಕೆ’ ಕಾರ್ಯವನ್ನು ದೇಶದಲ್ಲಿಯೇ ಮಾದರಿಯಾಗಿ ಆರಂಭಿಸಿತು. ಈ ಕಾರ್ಯಕ್ರಮವು ಎಷ್ಟರ ಮಟ್ಟಿಗೆ ಪ್ರಯೋಜನವಾಗಿದೆ ಎಂಬುದನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದಕ್ಕಾಗಿ ರಾಜ್ಯಾ ದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದೆ.
ಜಿಲ್ಲಾ ನೋಡಲ್ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಕಲಿಕಾ ಚೇತರಿಕೆ ಕಾರ್ಯಕ್ರಮ ಪರಿಶೀಲನೆ ಮಾಡುತ್ತಿದ್ದಾರೆ. ಕಾರ್ಯಕ್ರಮದಿಂದ ಮಕ್ಕಳಿಗೆ ಸಹಾಯವಾಗಿದೆಯೇ ಎಂಬ ತಿಳಿಯುವ ಪ್ರಯತ್ನ ಮಾಡಲಾಗುತ್ತಿದೆ.
|ಎಂ. ಪ್ರಸನ್ನಕುಮಾರ್ಪ್ರಾಥಮಿಕ ಶಿಕ್ಷಣ ನಿರ್ದೇಶಕ
ಮಾಹಿತಿ ಸಂಗ್ರಹದ ಪ್ರಯೋಜನವೇನು?:ಕಾರ್ಯಕ್ರಮ ಅನುಷ್ಠಾನದಲ್ಲಿ ಹಿಂದುಳಿದಿ ರುವ ಜಿಲ್ಲೆಗಳು/ತಾಲ್ಲೂಕುಗಳು, ವಿದ್ಯಾರ್ಥಿಗಳ ಮಾಹಿತಿಯನ್ನು ಕ್ರೋಢೀಕರಿಸಲಾಗುತ್ತದೆ.ರಾಜ್ಯಾದ್ಯಂತ ಸಂಗ್ರಹಿಸಿದ ಮಾಹಿತಿಯನ್ನು ಇಲಾಖೆ ಹಂತದಲ್ಲಿ ರ್ಚಚಿಸಲಾಗುತ್ತದೆ. ಬಳಿಕ ಸಾಧಕ/ಬಾಧಕಗಳನ್ನು ತಿಳಿದು ಮುಂದಿನ ವರ್ಷದಿಂದ ಕಾರ್ಯಕ್ರಮ ಅನುಷ್ಠಾನದಲ್ಲಿ ಬದಲಾವಣೆ ಮಾಡಲು ಅಥವಾ ಮತ್ತಷ್ಟು ಉನ್ನತೀಕರಿಸಲು ಸಾಧ್ಯವಾಗಲಿದೆ ಎಂಬುದು ಇಲಾಖೆ ಆಶಯವಾಗಿದೆ.
ಕಲಿಕಾ ಚೇತರಿಕೆಗಾಗಿ ಕೈಗೊಂಡಿರುವ ಕ್ರಮ:ಕಾರ್ಯಕ್ರಮದಡಿ ವಿದ್ಯಾರ್ಥಿ ಗಳಿಗಾಗಿ ಕಲಿಕಾ ಹಾಳೆಗಳು/ಚಟುವಟಿಕೆ ಪುಸ್ತಕಗಳು, ಶಿಕ್ಷಕರಿಗೆ ಕೈಪಿಡಿಗಳನ್ನು ತರಗತಿವಾರು ಮತ್ತು ವಿಷಯವಾರು ಸಿದ್ಧಪಡಿಸಿ, ಮುದ್ರಿಸಿ ಎಲ್ಲ ಶಾಲೆಗಳಿಗೂ ಇಲಾಖೆ ವತಿಯಿಂದಲೇ ಒದಗಿಸಿತ್ತು. ಕಾರ್ಯಕ್ರಮ ಅನುಷ್ಠಾನಗೊಳಿಸಲು ಶಿಕ್ಷಕರಿಗೆ ತರಬೇತಿಯನ್ನು ಸಹ ನೀಡಿದೆ.
ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

Video | ಸ್ಟ್ರೆಚರ್​ನಲ್ಲಿ ರೋಗಿಯ ಕರೆದೊಯ್ಯುವಾಗ ನಡೆಯಿತು ಭೀಕರ ಘಟನೆ; ಕುಸಿದ ಲಿಫ್ಟಲ್ಲಿ ಸಿಕ್ಕಿಕೊಂಡ ಸ್ಟ್ರೆಚರ್​, ಕೆಳಕ್ಕೆ ಬಿದ್ದ ರೋಗಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
