ಬೆಂಗಳೂರು:ಚಿಲುಮೆ ಸಂಸ್ಥೆಯಿಂದ ಅಕ್ರಮವಾಗಿ ಮತದಾರರ ಖಾಸಗಿ ಮಾಹಿತಿ ಸಂಗ್ರಹ ಮಾಡಿದ ಆರೋಪ ರಾಜ್ಯ ರಾಜಕೀಯದಲ್ಲೇ ಸಂಚಲನ ಸೃಷ್ಟಿಸಿದೆ. ಚಿಲುಮೆ ಸಂಸ್ಥೆಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ ಆರೋಪ ಸಂಬಂಧ ಹಲಸೂರ್ ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಅದರ ನಡುವೆ ವಿಚಾರಣೆಯಲ್ಲಿ ಐಎಎಸ್​ ಅಧಿಕಾರಿ ರಂಗಪ್ಪ ಯಾವುದಕ್ಕೂ ಸಮರ್ಪಕ ಉತ್ತರ ಕೊಡುತ್ತಿಲ್ಲ ಎನ್ನುವುದು ತಿಳಿದು ಬಂದಿದೆ.
ಅಮಾನತ್ತಾಗಿರುವ ಐಎಎಸ್ ಅಧಿಕಾರಿ ರಂಗಪ್ಪ ವಿಚಾರಣೆ ನಡೆಯುತ್ತಿದೆ. ಸುಮಾರು‌ ನಾಲ್ಕು ಗಂಟೆಗಳ ಕಾಲ ಡಿಸಿಪಿ ಶ್ರೀನಿವಾಸ್​ ಗೌಡ ವಿಚಾರಣೆ ಮಾಡಿದ್ದಾರೆ. ಆದರೆ ರಂಗಪ್ಪನಿಂದ ಪೊಲೀಸರಿಗೆ ಸರಿಯಾದ ಉತ್ತರವೇ ಸಿಗುತ್ತಿಲ್ಲ. ‘ಮೇಲಿನವರು ಆದೇಶ ಮಾಡಿದ್ದು ಕೆಳಗಿನವರು ಪಾಲನೆ ಮಾಡಿದ್ದಾರೆ ಅಷ್ಟೆ’ ಎಂದು ಉತ್ತರ ನೀಡುತ್ತಿದ್ದಾರೆ.
ಸದ್ಯ ರಂಗಪ್ಪನ ಅಸ್ಪಷ್ಟ ಉತ್ತರಗಳಿಂದ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಪೊಲೀಸರು 45 ಪ್ರಶ್ನೆಗಳನ್ನು ಕೇಳಿದ್ರೂ ಯಾವುದಕ್ಕೂ ಇಲ್ಲ ಸರಿಯಾದ ಉತ್ತರ ನೀಡಿಲ್ಲ. ಹೀಗಾಗಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ರಂಗಪ್ಪಗೆ ನೊಟೀಸ್ ನೀಡಲಾಗಿದೆ. ಇನ್ನು ವಿಚಾರಣೆಗೆ ಹಾಜರಾಗುವಾಗ ಮೇಲಿನ ಅಧಿಕಾರಿಗಳ ಅದೇಶ ಸಂಬಂಧ ದಾಖಲೆ ತರುವಂತೆ ಸೂಚನೆ ನೀಡಲಾಗಿದೆ.
ಇನ್ನು ಈ ಪ್ರಕರಣದಲ್ಲಿ ಬಿಬಿಎಂಪಿ ಆಯುಕ್ತರ ವಿಚಾರಣೆ ಒಂದೇ ಬಾಕಿ ಎಂದು ಹೇಳಲಾಗುತ್ತಿದೆ. ಸದ್ಯ ಅನಾರೋಗ್ಯದಿಂದ ಬಿಬಿಎಂಪಿ ಕಮಿಷನರ್​ ತುಷಾರ್ ಗಿರಿನಾಥ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುಣಮುಖ ಆದ ಬಳಿಕ ಬಿಬಿಎಂಪಿ ಕಮೀಷನರ್ ವಿಚಾರಣೆ ನಡೆಸಲಾಗುವುದು. ಶೀಘ್ರವೇ ತುಷಾರ್ ಗಿರಿನಾಥ್ ಗೆ ಪೊಲೀಸರು ನೊಟೀಸ್ ಕೊಟ್ಟು ವಿಚಾರಣೆ ಮಾಡಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + ten =
Remember me
