|ಚೇತನ್ ನಾಡಿಗೇರ್
‘ಗುಮಾಸ್ತನಾದರೆ ಸಾಕು ಅಂತ ಬಂದವನು ನಾನು. ಹೆಚ್ಚು ಬುದ್ಧಿವಂತನಲ್ಲ. ಮೇಲಾಗಿ ಕೀಳರಿಮೆ ಇತ್ತು. ಇಂಗ್ಲೀಷ್ ಭಾಷಾಜ್ಞಾನ ಇರಲಿಲ್ಲ. ಯಾವ ಶಕ್ತಿಯೂ ಇರಲಿಲ್ಲ. ಅಂಥದ್ದರಲ್ಲಿ ಇಷ್ಟು ದೂರ ನಡೆದು ಬಂದಿದ್ದು ನಿಜಕ್ಕೂ ತೃಪ್ತಿ ಇದೆ…’- ಖುಷಿಯಿಂದ ಹೇಳಿಕೊಳ್ಳುತ್ತಾರೆ ಹಿರಿಯ ನಟ, ರಂಗಕರ್ವಿು, ರಾಜಕಾರಣಿ ಡಾ. ಮುಖ್ಯಮಂತ್ರಿ ಚಂದ್ರು (ಮೂಲ ಹೆಸರು ಚಂದ್ರಶೇಖರ). ಕರ್ನಾಟಕದ ‘ಖಾಯಂ ಮುಖ್ಯಮಂತ್ರಿ’ ಎಂದೇ ಜನಪ್ರಿಯರಾಗಿರುವ ಅವರು ಇತ್ತೀಚೆಗಷ್ಟೇ 70ಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ, ‘ರಂಗವನದ ಚಂದ್ರತಾರೆ’ ಎಂಬ ಆತ್ಮಕಥನವನ್ನೂ ಬರೆದಿದ್ದಾರೆ. ಮೈಸೂರಿನ ಕವಿತಾ ಪ್ರಕಾಶನದಿಂದ ಈ ಕೃತಿ ಪ್ರಕಟಗೊಂಡಿದ್ದು ಸೋಮವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಯಲ್ಲಿ ತಮ್ಮ ಬಾಲ್ಯ, ಕಾಲೇಜು ಜೀವನ, ರಂಗಭೂಮಿ, ರಾಜಕೀಯ, ಸಿನಿಮಾ, ಸಂಸಾರ, ವಿದೇಶ ಪ್ರವಾಸ ಮುಂತಾದ ಹಲವು ಮಜಲುಗಳ ಕುರಿತಾದ ಹಲವು ಸ್ವಾರಸ್ಯಕರ ಘಟನೆಗಳನ್ನು ಅವರು ಹಿಡಿದಿಟ್ಟಿದ್ದಾರೆ.
ಚಂದ್ರು ಅವರ ವೃತ್ತಿಬದುಕಿಗೆ ತಿರುವು ನೀಡಿದ್ದು ‘ಮುಖ್ಯಮಂತ್ರಿ’ ನಾಟಕ. ಈ ನಾಟಕದಲ್ಲಿನ ಮುಖ್ಯಮಂತ್ರಿ ಪಾತ್ರ ಅವರಿಗೆ ಅದೆಷ್ಟು ಜನಪ್ರಿಯತೆ ತಂದುಕೊಟ್ಟಿತು ಎಂದರೆ ಜನ ಅವರನ್ನು ಸದಾ ‘ಮುಖ್ಯಮಂತ್ರಿ’ ಎಂದೇ ಗುರುತಿಸುತ್ತಾರೆ. ಈ ನಾಟಕದಲ್ಲಿ ಅವರು ನಟಿಸಿದ್ದೇ ಆಕಸ್ಮಿಕವಂತೆ. ‘ಮುಖ್ಯಮಂತ್ರಿ’ ನಾಟಕದ ಕುರಿತೇ ಆತ್ಮಚರಿತ್ರೆಯಲ್ಲಿ ಒಂದು ಅಧ್ಯಾಯವನ್ನು ಚಂದ್ರು ಬರೆದಿದ್ದಾರೆ. ಮುಂಚೆ ಮುಖ್ಯಮಂತ್ರಿ ಪಾತ್ರವನ್ನು ಟಿ.ಎಸ್. ಲೋಹಿತಾಶ್ವ ಮಾಡಬೇಕಿತ್ತಂತೆ. ಚಂದ್ರು ನಿರ್ದೇಶಿಸಬೇಕಿತ್ತಂತೆ. ಆದರೆ, ಅನಾರೋಗ್ಯದಿಂದಾಗಿ ಲೋಹಿತಾಶ್ವ ಅವರಿಗೆ ನಟಿಸುವುದಕ್ಕೆ ಸಾಧ್ಯವಾಗದಿದ್ದರಿಂದ, ಅನಿವಾರ್ಯವಾಗಿ ಮುಖ್ಯಮಂತ್ರಿ ಪಾತ್ರವನ್ನು ಮಾಡುವುದಕ್ಕೆ ಚಂದ್ರು ಒಪ್ಪಬೇಕಾಯಿತಂತೆ.
ಒಂದು ಪ್ರದರ್ಶನ ಎಂದು ಶುರುವಾಗಿದ್ದು, ಈಗ ಇಲ್ಲಿಯವರೆಗೂ ಬಂದು ನಿಂತಿದೆ. ‘ಆರಂಭದ ದೃಶ್ಯದಿಂದ ಕೊನೆಯವರೆಗೂ ಬಹುತೇಕ ನಾಟಕದ ಮಾತುಗಳನ್ನು ಮರೆತು ಸಂದಭೋಚಿತವಾಗಿ ನನ್ನ ಮಾತುಗಳನ್ನು ಸೇರಿಸಿ, ಹಾಸ್ಯಲೇಪನ ಮಾಡಿ ನಾಟಕ ಮುಗಿಸಿದೆ. ಅಂತೂ ಕ್ಲಿಕ್ ಆಯಿತು. ಗಂಭೀರವಾದ, ರಾಜಕೀಯ ಕುರಿತ ನಾಟಕವು ನನ್ನ ತಪ್ಪಿನಿಂದ ಹಾಸ್ಯಭರಿತ ನಾಟಕವಾಗಿ ಪ್ರದರ್ಶನ ಕಂಡಿತು. ಇದರಿಂದ ನಾಟಕದ ನಡುವೆ ನಗುವಿನ ಅಲೆ. ಮುಗಿದ ಮೇಲೆ ಚಪ್ಪಾಳೆಗಳ ಸುರಿಮಳೆ. ಇದು ಒಂದು ಪ್ರಯೋಗಕ್ಕಲ್ಲ, ಎಲ್ಲ ಪ್ರದರ್ಶನಗಳಿಗೂ ಸಿಕ್ಕಿತು. ನಾಟಕದ ಕುರಿತು ಎಲ್ಲ ಪತ್ರಿಕೆಗಳಲ್ಲಿ ಒಳ್ಳೆಯ ಸುದ್ದಿಯಾಯಿತು. ಮೊದಲ ಪ್ರದರ್ಶನಕ್ಕೆ ಬಂದಿದ್ದ ಲೋಹಿತಾಶ್ವ ಅವರು ಬೆನ್ನು ತಟ್ಟಿದರು. ನಂತರ ಅವರು ‘ಒಂದು ಮಾತು’ ಎಂದರು. ಏನು ಎಂದು ಅವರತ್ತ ನೋಡಿದೆವು. ‘ಇದು ನಾನು ಬರೆದ ನಾಟಕವಲ್ಲ, ನಿಮ್ಮಿಷ್ಟದ ನಾಟಕ. ತುಂಬಾ ಗಂಭೀರವಾದ ನಾಟಕವನ್ನು ಕೊಂದಿದ್ದೀರಿ. ಆದರೆ, ಪಂಚ್ ಡೈಲಾಗ್ ಮೂಲಕ ಚಪ್ಪಾಳೆ ಹೊಡೆಸಿಕೊಂಡಿದ್ದೀರಿ. ಜನ ಮೆಚ್ಚಿದ್ದು, ಮುಂದುವರಿಸಿಕೊಂಡು ಹೋಗಿ’ ಎಂದು ಹೇಳಿದರು. ‘ಮುಂದೆ ನೀವೇ ಮಾಡಬೇಕಲ್ಲ?’ ಎಂದೆ. ‘ಈ ರೀತಿ ಮಾಡಲು ನನ್ನಿಂದ ಸಾಧ್ಯವಿಲ್ಲ. ಮಾಡುವುದೂ ಇಲ್ಲ. ನೀವೇ ಮುಂದುವರಿಸಿ, ಒಳ್ಳೆಯದಾಗಲಿ ಎಂದು ಹಾರೈಸಿದರು’ ಎಂದು ದಾಖಲಿಸಿದ್ದಾರೆ ಚಂದ್ರು.
ಸಾಮಾನ್ಯವಾಗಿ ರಂಗಭೂಮಿಯಿಂದ ಸಿನಿಮಾಗೆ ಹೋದವರು ನಂತರ ಪುನಃ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಷ್ಟ. ಆದರೆ, ನಾನು ರಂಗಭೂಮಿಯಿಂದ ಯಾವತ್ತೂ ದೂರವಾಗಿಲ್ಲ. ‘ಮುಖ್ಯಮಂತ್ರಿ’ ನಾಟಕ ಸದ್ಯದಲ್ಲೇ 800 ಪ್ರದರ್ಶನಗಳನ್ನು ಪೂರೈಸಲಿದೆ. ಮೊದಲ ಪ್ರದರ್ಶನದಿಂದ ಇಲ್ಲಿಯವರೆಗೂ ನಿರಂತರವಾಗಿ ಆ ನಾಟಕವನ್ನು ಮಾಡಿಕೊಂಡು ಬಂದಿದ್ದೇನೆ. ಅದರ ಜತೆಗೆ 500ಕ್ಕೂ ಹೆಚ್ಚು ಚಿತ್ರಗಳು, 75ಕ್ಕೂ ಹೆಚ್ಚು ಧಾರಾವಾಹಿಗಳು ಮತ್ತು 70ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದೇನೆ. ಜತೆಗೆ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದೇನೆ. ವ್ಯವಸಾಯವನ್ನೂ ಮಾಡುತ್ತಿದ್ದೇನೆ. ಈ ಪ್ರಯಾಣಕ್ಕೆ ನನ್ನ ಕುಟುಂಬದವರು, 50 ವರ್ಷಗಳ ಒಡನಾಟದ ಬಿ.ವಿ. ರಾಜರಾಂ ಮತ್ತು ನೂರಾರು ಒಡನಾಡಿಗಳು ಕೊಟ್ಟ ಸಹಕಾರ, ಪ್ರೋತ್ಸಾಹವೇ ಕಾರಣ.
|ಮುಖ್ಯಮಂತ್ರಿ ಚಂದ್ರು
ಮೊದಲ ಪ್ರಯೋಗದಿಂದ ಇದುವರೆಗೆ ಈ ಪಾತ್ರವನ್ನು ಪೊರೆದವನು ನಾನೊಬ್ಬನೇ ಎನ್ನುವ ಅವರು, ‘ಈ ದೀರ್ಘ ಪಯಣದಲ್ಲಿ ನಾಟಕದ ಎಲ್ಲ ಪಾತ್ರಗಳು ಬದಲಾಗಿವೆ. 42 ವರ್ಷಗಳಿಂದ ಪಾತ್ರಧಾರಿಗಳು ಮತ್ತು ತಂತ್ರಜ್ಞರು ಸೇರಿದಂತೆ 300ಕ್ಕೂ ಹೆಚ್ಚು ಜನ ತೊಡಗಿಕೊಂಡಿದ್ದಾರೆ. 800 ಪ್ರದರ್ಶನ ಕಂಡರೂ ಮುಖ್ಯಮಂತ್ರಿ ಪಾತ್ರ ಮಾಡಿದ್ದು ನಾನೊಬ್ಬನೇ. ಈ ನಾಟಕವನ್ನು ಕನ್ನಡದಲ್ಲಿ ಮಾಡಿದ್ದು ಕಲಾಗಂಗೋತ್ರಿ ತಂಡವೊಂದೇ. ಇದರ ನಿರ್ದೇಶಕ ಬಿ.ವಿ. ರಾಜಾರಾಂ ಒಬ್ಬರೇ. ಇದೂ ದಾಖಲೆಯೇ. ಕರೊನಾ ಲಾಕ್​ಡೌನ್ ಹೊರತುಪಡಿಸಿ, 42 ವರ್ಷಗಳಿಂದ ಎಲ್ಲ ತಿಂಗಳಲ್ಲೂ ಕನಿಷ್ಠ ಒಂದು ಪ್ರದರ್ಶನದಿಂದ ಗರಿಷ್ಠ ಐದಾರು ಪ್ರದರ್ಶನಗಳನ್ನು ಮಾಡಿದ್ದಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲದೆ, ಬೇರೆ ರಾಜ್ಯಗಳು ಮತ್ತು ಹೊರದೇಶಗಳಲ್ಲೂ ಈ ನಾಟಕ ಆಡಿದ್ದೇವೆ. ಕೆಲವೊಮ್ಮೆ ನಮ್ಮ ತಂಡದ ಬೇರೆ ನಾಟಕಗಳಿಗೆ ದುಡ್ಡು ಬರದಿದ್ದಾಗ, ಈ ನಾಟಕ ಆಡಿ ತಂಡದ ಖರ್ಚುಗಳನ್ನು ತೂಗಿಸಿದ್ದಿದೆ’ ಎನ್ನುತ್ತಾರೆ ಚಂದ್ರು.
ಈ ನಾಟಕ ಎಷ್ಟು ಜನಪ್ರಿಯವಾಯಿತೆಂದರೆ, ಕಳೆದ ವರ್ಷ ಏಪ್ರಿಲ್ 4ರಂದು ನಡೆದ ಕಲಾ ಗಂಗೋತ್ರಿ ರಂಗತಂಡದ ಸುವರ್ಣ ರಂಗ ಹಬ್ಬದ ಪ್ರಯುಕ್ತ ‘ಮತ್ತೆ ಮುಖ್ಯಮಂತ್ರಿ’ ಎಂಬ ಇನ್ನೊಂದು ನಾಟಕವನ್ನು ಪ್ರದರ್ಶಿಸಲಾಯಿತು. ಈ ನಾಟಕವನ್ನು ಡಾ.ಕೆ.ವೈ. ನಾರಾಯಣಸ್ವಾಮಿ ರಚಿಸಿದ್ದು, ಹಿರಿಯ ರಂಗಕರ್ವಿು ಡಾ.ಬಿ.ವಿ. ರಾಜಾರಾಂ ನಿರ್ದೇಶನ ಮಾಡಿದ್ದಾರೆ.
ಕಲಾಗಂಗೋತ್ರಿ ತಂಡವು ಕಳೆದ 50 ವರ್ಷಗಳಿಂದ ನಿರಂತರವಾಗಿ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಈ ಸಂಬಂಧ ನಾಳೆ (ಸೆ.5) ರವೀಂದ್ರ ಕಲಾಕ್ಷೇತ್ರದಲ್ಲಿ 3 ಇನ್ ಒನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲಿಗೆ ಸಂಜೆ 4ರಿಂದ 5.30ರವರೆಗೆ ‘ಮುಖ್ಯಮಂತ್ರಿ’ ಹಾಗೂ ‘ಮತ್ತೆ ಮುಖ್ಯಮಂತ್ರಿ’ ರಾಜಕೀಯ ನಾಟಕಗಳ ವಿಶ್ಲೇಷಣೆ ನಡೆಯಲಿದೆ. ನಂತರ ಕಲಾ ಗಂಗೋತ್ರಿಯ 50ನೇ ವರ್ಷದ ರಂಗಹಬ್ಬವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರ 70ನೇ ಜನ್ಮದಿನ ಸಂದರ್ಭದಲ್ಲಿ ಅವರ ಆತ್ಮಕಥೆ ‘ರಂಗವನದ ಚಂದ್ರತಾರೆ’ ಬಿಡುಗಡೆಯಾಗಲಿದೆ. ಸಂಜೆ 7ಕ್ಕೆ, ‘ಮತ್ತೆ ಮುಖ್ಯಮಂತ್ರಿ’ ನಾಟಕದ ಪ್ರದರ್ಶನ ನಡೆಯಲಿದೆ.
ಬರ್ತ್​​ಡೇಗೆ ಕೇಕು-ಹೂಗುಚ್ಛ ಬೇಡ, 18 ಪದಗಳೇ ಸಾಕು: ಅಭಿಮಾನಿಗಳಲ್ಲಿ ವಿಶಿಷ್ಟ ಬೇಡಿಕೆ ಇಟ್ಟ ಉಪೇಂದ್ರ!

ಸ್ಮಶಾನ ಇಲ್ಲದ್ದಕ್ಕೆ ಗ್ರಾಮ ಪಂಚಾಯತ್ ಚಾವಡಿ ಮೇಲೇ ಸಂಸ್ಕಾರಕ್ಕೆ ಸಿದ್ಧತೆ; ಕೊನೇಲಿ ಆಗಿದ್ದೇ ಬೇರೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + ten =
Remember me
