ಮೈಸೂರು:ರಂಗೋಲಿ ಬಿಡಿಸುವುದೂ ನಮ್ಮ ಸಂಸ್ಕೃತಿಯ ಭಾಗ. ದೇವರಿಗೆ ನೈವೇದ್ಯ ಇಡುವಾಗಲೂ ಅದರ ಕೆಳಗೆ ರಂಗೋಲಿ ಹಾಕಲಾಗುತ್ತದೆ. ಇದರಿಂದಲೇ ರಂಗೋಲಿಯ ಮಹತ್ವ ಅರಿವಾಗುತ್ತದೆ. ಈ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ. ಆದ್ದರಿಂದ ಈ ಕಲೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನ್ನೆಲೆಯಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.21ರಿಂದ 23ರವರೆಗೆ ಆಯೋಜಿಸಿರುವ ರಾಜ್ಯಮಟ್ಟದ ‘ಕೃಷಿ ಮೇಳ’ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಬಿಡಿಸುವ ಸ್ಪರ್ಧೆ ಆಯೋಜಿಸಿದೆ. ಈ ಮೂಲಕ ರಂಗೋಲಿ ಬಿಡಿಸುವ ಕಲೆಯನ್ನು ಉಳಿಸುವ ಪ್ರಯತ್ನ ಮಾಡಲಾಗá-ತ್ತಿದೆ.
ರಂಗೋಲಿ ಬಿಡಿ ಸಲು 2 ಗಂಟೆ ಕಾಲ ನಿಗದಿ ಮಾಡಲಾಗಿದೆ. ನೋಂದಣಿ ಮಾಡಿಕೊಂಡ ಸ್ಪರ್ಧಿಗಳ ಹೆಸರು ಖಚಿತವಾದವರು ಸ್ಪರ್ಧೆ ನಡೆಯುವ ದಿನ ಅರ್ಧಗಂಟೆ ಮುಂಚೆಯೇ ಸ್ಥಳದಲ್ಲಿ ಹಾಜರಿರಬೇಕು. ಪ್ರಕೃತಿ, ರೈತ, ವ್ಯವಸಾಯ, ಸೈನಿಕ ದೇಶಾಭಿಮಾನ ವಿಷಯಗಳಿಗೆ ಸಂಬಂಧಿಸಿದ ವಿಷಯವನ್ನು ರಂಗೋಲಿಯಲ್ಲಿ ಬಿಡಿಸಬೇಕು. ಭಾಗವಹಿಸುವರು ರಂಗೋಲಿ ಪುಡಿ ಸೇರಿ ಅಗತ್ಯ ವಸ್ತುಗಳನ್ನು ತರಬೇಕು ಮತ್ತು ಒಂದೇ ಮಾದರಿಯನ್ನು ಬಳಸಬೇಕು. ಬಣ್ಣಗಳು, ಪುಷ್ಪ ದಳಗಳು, ಪುಡಿ, ಧಾನ್ಯಗಳು, ಅಕ್ಕಿ ಇತ್ಯಾದಿಗಳ ಪೈಕಿ ಒಂದು ವಸ್ತುವನ್ನು ಮಾತ್ರ ಬಳಸಿ ರಂಗೋಲಿ ಹಾಕಬೇಕು. ಸಂಘಟಕರು ನಿಗದಿಪಡಿಸá-ವ ಸ್ಥಳದಲ್ಲೇ ರಂಗೋಲಿ ಸಿದ್ಧ ಪಡಿಸಬೇಕು. ಕೊರೆಯಚ್ಚನ್ನು ಬಳಸುವಂತಿಲ್ಲ. ಇದು ವೈಯಕ್ತಿಕ ಸ್ಪರ್ಧೆಯಾಗಿದ್ದು, ಯಾರ ಸಹಾಯವನ್ನೂ ಪಡೆಯುವಂತಿಲ್ಲ. ಒಂದೇ ಸುತ್ತಿನಲ್ಲಿ ಸ್ಪರ್ಧೆ ಮುಗಿಯಲಿದ್ದು, ಸ್ಪರ್ಧಿಗಳು ರಂಗೋಲಿ ಬಿಡಿಸಲು ಯಾವುದೇ ಮುದ್ರಿತ ವಸ್ತುಗಳನ್ನು ಬಳಸುವಂತಿಲ್ಲ. ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ. ತೀರ್ಪಗಾರರ ತೀರ್ವನವೇ ಅಂತಿಮವಾಗಿರುತ್ತದೆ.
ರಾಜ್ಯ ಮಟ್ಟದ ‘ಕೃಷಿ ಮೇಳ’ ಅಂಗವಾಗಿ ಯುವಕ- ಯುವತಿಯರಿಗೆ ಸಾಂಪ್ರದಾಯಿಕ ಉಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕೊಡವ, ಕರಾವಳಿ, ಮಂಡ್ಯ, ಮೈಸೂರು, ಲಂಬಾಣಿ, ಉತ್ತರ ಕನ್ನಡ ಸೇರಿ ರಾಜ್ಯದ ವಿವಿಧ ಸಂಸ್ಕೃತಿ ಬಿಂಬಿಸುವ ಧಿರಿಸು ತೊಟ್ಟು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 8884432049, 8884432030 ಸಂರ್ಪಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + sixteen =
Remember me
