ಕಲಬುರಗಿ:ಶೈಕ್ಷಣಿಕ ಬೆಳವಣಿಗೆ ಸೇರಿ ನಾನಾ ಪ್ಯಾರಾಮೀಟರ್​ಗಳ ಮೌಲ್ಯಮಾಪನ ನಡೆಸಿರುವ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 120 ವಿಶ್ವವಿದ್ಯಾಲಯಗಳಿಗೆ ರ‍್ಯಾಂಕಿಂಗ್ ಘೊಷಿಸಿದೆ. ಈ ಪೈಕಿ ಗುಲ್ಬರ್ಗ ವಿಶ್ವವಿದ್ಯಾಲಯ 99ನೇ ರ್ಯಾಂಕ್​ನಲ್ಲಿದ್ದರೆ, ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ 73ನೇ ರ್ಯಾಂಕಿಂಗ್​ನಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿವೆ. ದೇಶದ 120 ಸರ್ಕಾರಿ ವಿಶ್ವವಿದ್ಯಾಲಯಗಳು ರ‍್ಯಾಂಕಿಂಗ್ ಪಟ್ಟಿಯಲ್ಲಿ ಸೇರಿವೆ. ಈ ಪೈಕಿ ಗುಲ್ಬರ್ಗ ವಿವಿ ಮತ್ತು ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿ ಟಾಪ್-100ರ ಒಳಗಿನ ರ್ಯಾಂಕಿಂಗ್​ನಲ್ಲಿ ಗುರುತಿಸಿಕೊಂಡು ದೇಶದ ಗಮನ ಸೆಳೆದಿವೆ.
ಗುಲ್ಬರ್ಗ ವಿಶ್ವವಿದ್ಯಾಲಯ: ಫಾಕಲ್ಟಿ ಕಾಂಪಿಟೆನ್ಸ್​ನಲ್ಲಿ 150ಕ್ಕೆ 112 ಅಂಕ, ಫಾಕಲ್ಟಿ ಕಲ್ಯಾಣ ಮತ್ತು ಅಭಿವೃದ್ಧಿಯಲ್ಲಿ 100ಕ್ಕೆ 69, ಸಂಶೋಧನೆ ಮತ್ತು ಇನೋವೇಷನ್​ನಲ್ಲಿ 300ಕ್ಕೆ 108, ಕರಿಕ್ಯುಲಮ್ಲ್ಲಿ 100ಕ್ಕೆ 58, ಕೈಗಾರಿಕೆ ಇಂಟರ್​ಫೇಸ್ 100ಕ್ಕೆ 57, ಪ್ಲೇಸ್​ವೆುಂಟ್ 100ಕ್ಕೆ 54, ಮೂಲಸೌಲಭ್ಯ 150ಕ್ಕೆ 100, ಇಂಟರ್​ನ್ಯಾಷನಲಿಸಂ 100ಕ್ಕೆ 62, ಲೀಡರ್​ಶಿಪ್/ಗವರ್ನೆನ್ಸ್ ಕ್ವಾಲಿಟಿ 100ಕ್ಕೆ 59, ಪ್ರೋಗ್ರಾಮ್ ಆಫರ್ಡ್ 100ಕ್ಕೆ 67 ಅಂಕ ಗಳಿಸಿದೆ. ಇನ್ನು ರಾಜ್ಯಮಟ್ಟದಲ್ಲಿ ಗುಲ್ಬರ್ಗ ವಿವಿ 10ನೇ ಸ್ಥಾನ ಪಡೆದಿದೆ. ರಾಜ್ಯಮಟ್ಟದ 1300 ಅಂಕಗಳಿಗೆ ಈ ವಿವಿ 740 ಅಂಕ ಗಳಿಸಿದರೆ, ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿ 800 ಅಂಕ ಗಳಿಸಿದೆ. ಬೆಂಗಳೂರು ವಿವಿ 977, ಮೈಸೂರು ವಿವಿ 884, ಧಾರವಾಡ ಕರ್ನಾಟಕ ವಿವಿ 860 ಅಂಕ ಗಳಿಸಿವೆ. ಗುಲ್ಬರ್ಗ ವಿವಿ ಕಳೆದ 3 ದಶಕಗಳಲ್ಲಿ ಬೆಳವಣಿಗೆಯಲ್ಲಿದ್ದರೂ ಈ ಹಿಂದಿನ ಕುಲಪತಿ ಪ್ರೊ.ಎಸ್.ಆರ್. ನಿರಂಜನ್ ಅವಧಿಯಲ್ಲಿ ಈ ಬೆಳವಣಿಗೆ ಗಣನೀಯವಾಗಿ ಏರಿದೆ. ಶೈಕ್ಷಣಿಕ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ, ಸಮಾವೇಶ ಆಯೋಜನೆ, ವಿಶೇಷವಾಗಿ ಸಂಶೋಧನೆ ಮತ್ತು ಗುಣಮಟ್ಟ ಹೆಚ್ಚಳಕ್ಕೆ ಒತ್ತು ನೀಡಲಾಗಿತ್ತು.
ಒಡಂಬಡಿಕೆ
ವಿಶ್ವವಿದ್ಯಾಲಯಗಳು, ಪ್ರತಿಷ್ಠಿತ ಸಂಸ್ಥೆ ಸೇರಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಹೈದರಾಬಾದ್​ನ ಐಸಿಟಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ಮೂಲಕ ವಿವಿ ವಿದ್ಯಾರ್ಥಿ ಮತ್ತು ಫಾಕಲ್ಟಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿ ಮತ್ತು ಬೋಧಕರು ಒಡಂಬಡಿಕೆ ಮಾಡಿಕೊಂಡಿರುವ ಸಂಸ್ಥೆಗೆ ಹೋಗಿ ಅಧ್ಯಯನ ಮಾಡಬಹುದು. ಅವರು ವಿವಿಗೆ ಆಗಮಿಸಿ ಸಂಬಂಧಿಸಿದ, ಮಹತ್ವದ ವಿಷಯ ವಿನಿಮಯ ಮಾಡಿಕೊಳ್ಳಬಹುದು. ಕೌಶಲ ಅಭಿವೃದ್ಧಿಗೆ ಒತ್ತು, ಖ್ಯಾತ ವಿಜ್ಞಾನಿಗಳನ್ನು ಆಹ್ವಾನಿಸಿ ಉಪನ್ಯಾಸಗಳ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿರುವುದು, ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ನೀಡುವ ಮೂಲಕ ಅಪ್​ಗ್ರೇಡ್ ಮಾಡಿದ್ದು ಹೀಗೆ ಎಲ್ಲ ಮಾನದಂಡ ಪರಿಗಣಿಸಿ ರ‍್ಯಾಂಕಿಂಗ್ ಘೊಷಿಸಲಾಗಿದೆ.
ಕ್ಯಾಂಪಸ್ ಅಭಿವೃದ್ಧಿ
ವಿವಿಯ ವಿಶಾಲ ಜಾಗದಲ್ಲಿ 30 ಸಾವಿರಕ್ಕೂ ಅಧಿಕ ಸಸಿ ನಡೆಸಲಾಗಿದ್ದು, ಇದೀಗ ದೊಡ್ಡ ಪ್ರಮಾಣದಲ್ಲಿ ಬೆಳೆದಿವೆ. ಗಾರ್ಡನ್ ಅಭಿವೃದ್ಧಿ ಮಾಡಲಾಗಿದೆ. ರೂಸಾ ಅನುದಾನದ ಮೂಲಕ ಸಂಶೋಧನೆಗೆ ಅತ್ಯಾಧುನಿಕ ಉಪಕರಣ ಒದಗಿಸಲಾಗಿದೆ.
ಕ್ರೀಡೆಯಲ್ಲೂ ಬಹುಮಾನ
ದೈಹಿಕ ಶಿಕ್ಷಣ ವಿಭಾಗದಲ್ಲಿ ದಕ್ಷಿಣ ವಲಯ, ರಾಜ್ಯ-ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ, ಯುವಜನೋತ್ಸವದಲ್ಲಿ ವಿವಿ ವಿದ್ಯಾರ್ಥಿಗಳು ದಕ್ಷಿಣ ವಲಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಗಿಟ್ಟಿಸಿದ್ದಾರೆ. ವಿಶ್ವವಿದ್ಯಾಲಯದಲ್ಲಿ ವೈಫೈ ಸೌಲಭ್ಯ, ವೆಬ್ ಆಧಾರಿತ ಶಿಕ್ಷಣ ನೀಡುವುದಕ್ಕೆ ಒತ್ತು, ಐಸಿಟಿ, ಗ್ರಂಥಾಲಯದ ಬೆಳವಣಿಗೆ, ಈ ಮೂಲಕ ಇ-ಬುಕ್ಸ್, ಇ-ಜರ್ನಲ್ಸ್ ಸೌಲಭ್ಯ ಒದಗಿಸಿ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಒಲವು ಮೂಡಿಸಲು ಒತ್ತು ನೀಡಲಾಗಿದೆ.
| ಜಯತೀರ್ಥ ಪಾಟೀಲ
ರಾಜ್ಯ ಸರ್ಕಾರದಿಂದ 5ನೇ ಹಂತದ ಲಾಕ್​ಡೌನ್​ ಮಾರ್ಗಸೂಚಿ ಪ್ರಕಟ: ಯಾರಿಗೆಲ್ಲಾ ಗುಡ್​ ನ್ಯೂಸ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 2 =
Remember me
