ಉಜ್ಜಯಿನಿ:ದುಷ್ಕರ್ವಿುಯೊಬ್ಬ ಮಹಿಳೆಯೊಬ್ಬಳಿಗೆ ಮದ್ಯ ಕುಡಿಸಿ ರಸ್ತೆ ಬದಿಯಲ್ಲೇ ಅತ್ಯಾಚಾರ ನಡೆಸಿದ್ದು, ಅಲ್ಲಿ ನೆರೆದಿದ್ದ ಜನರು ಆ ಕೃತ್ಯವನ್ನು ತಡೆಯುವ ಬದಲು ವಿಡಿಯೋ ಮಾಡುವಲ್ಲಿ ನಿರತರಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಅತ್ಯಾಚಾರಕ್ಕೀಡಾದ ಮಹಿಳೆ ಉಜ್ಜಯಿನಿಯ ಅಗರ್ ನಾಕಾ ಪ್ರದೇಶದಲ್ಲಿ ಚಿಂದಿ ಆಯುವವಳು. ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರವೇ ಘಟನೆ ಪೊಲೀಸರ ಗಮನಕ್ಕೆ ಬಂದಿದೆ. ಮಹಿಳೆ ದೂರು ನೀಡಿದ್ದು, ಅತ್ಯಾಚಾರ ಎಸಗಿದ ಲೋಕೇಶ್ ಎಂಬ ದುಷ್ಕರ್ವಿುಯನ್ನು ಬಂಧಿಸಲಾಗಿದೆ.
ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಆಕೆ ತನ್ನ ಮನೆಯಲ್ಲಿದ್ದಾಳೆ. ಲೋಕೇಶ್ ಆಕೆಗೆ ಮದುವೆಯಾಗುವುದಾಗಿ ನಂಬಿಸಿದ್ದ. ಕಳೆದ ಬುಧವಾರ ಮದ್ಯ ಕುಡಿಸಿ ಕೃತ್ಯ ಎಸಗಿದ್ದಾನೆ. ಹತ್ತಿರದಲ್ಲಿ ಹಾದು ಹೋಗುತ್ತಿದ್ದವರು ಈ ದುಷ್ಕೃತ್ಯವನ್ನು ತಡೆಯುವ ಬದಲು ವಿಡಿಯೋ ಮಾಡಿದ್ದಾರೆ. ಆಗ ಲೋಕೇಶ್ ಸ್ಥಳದಿಂದ ಪರಾರಿ ಆಗಿದ್ದಾನೆ. ವಿಡಿಯೋ ಮಾಡಿದ ನಾಲ್ವರ ಗುರುತು ಪತ್ತೆಯಾಗಿದ್ದು, ಎಲ್ಲರೂ ಬೇರೆ ಬೇರೆ ಸ್ಥಳಗಳ ನಿವಾಸಿಗಳು. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕೊತ್ವಾಲಿ ಪ್ರದೇಶದ ಎಸ್​ಪಿ ಓಂಪ್ರಕಾಶ್ ಮಿಶ್ರಾ ತಿಳಿಸಿದ್ದಾರೆ.
ಕೋಲ್ಕತ:ಟ್ರೖೆನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ನಡೆದ ಇಲ್ಲಿನ ಆರ್​ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಹಾಗೂ ಅವರ ಹಲವು ಸಹಚರರ ಮನೆಗಳ ಮೇಲೆ ಹಣಕಾಸು ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದರು. ಘೋಷ್ ಅವರ ಆಪ್ತನೆನ್ನಲಾದ ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜ್​ನ ಡೇಟಾ ಆಪರೇಟರ್ ಪ್ರಸುನ್ ಚಟ್ಟೋಪಾಧ್ಯಾಯ ಎಂಬಾತನನ್ನು ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಘೋಷ್ ಅರ್ಜಿ ವಜಾ:ಈ ನಡುವೆ, ಸಂಸ್ಥೆಯ ಆರೋಪಿತ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನನ್ನೂ ಪಾರ್ಟಿ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ತಿರಸ್ಕರಿಸಿದ್ದನ್ನು ಪ್ರಶ್ನಿಸಿದ್ದ ಘೋಷ್ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾ ಮಾಡಿದೆ.
ರಸ್ತೆ ತಡೆ:ರೇಪ್-ಮರ್ಡರ್ ಪ್ರಕರಣ ಖಂಡಿಸಿ ಹಾಗೂ ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆ ಒತ್ತಾಯಿಸಿ ಪಶ್ಚಿಮ ಬಂಗಾಳ ಬಿಜೆಪಿ ಘಟಕ ಶುಕ್ರವಾರ ರಾಜ್ಯದಾದ್ಯಂತ ರಸ್ತೆ ತಡೆ ಚಳವಳಿ ನಡೆಸಿತು.
2026ರ ಅಂತ್ಯಕ್ಕೆ ಎತ್ತಿನಹೊಳೆ ಯೋಜನೆಯ ಕಾಮಗಾರಿ ಪೂರ್ಣ: ಸಿಎಂ ಸಿದ್ದರಾಮಯ್ಯ ಭರವಸೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:1 × four =
Remember me
