ಬೆಂಗಳೂರು:ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ ಚಾಲಕನ ಲೈಂಗಿಕ ಕಿರುಕುಳವನ್ನು ತಾಳಲಾರದೇ ಯುವತಿಯೊಬ್ಬಳು ಬೈಕ್​ನಿಂದ ಜಿಗಿದು ಗಾಯಗೊಂಡಿರುವ ಆತಂಕಕಾರಿ ಘಟನೆ ಯಲಹಂಕ ನ್ಯೂ ಟೌನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನೆ ಇದೇ ತಿಂಗಳು 21ರಂದು ನಡೆದಿದೆ. ಸಂತ್ರಸ್ತ ಯುವತಿ ಬೈಕ್​ನಿಂದ ಜಿಗಿದಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣದ ಆರೋಪಿ ಚಾಲಕ 27 ವರ್ಷದ ದೀಪಕ್​ ರಾವ್​ ಎಂಬಾತನ್ನು ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.ಇದನ್ನೂ ಓದಿ:ಎಲ್ಲಿಯೇ ಕೊಲೆಯಾದರೂ ವಿನಯ್​ ಕುಲಕರ್ಣಿ ಹೆಸರು ಹೇಳುವುದ್ಯಾಕೆ? ಪತ್ನಿ ಶಿವಲೀಲಾ‌ ಪ್ರಶ್ನೆ

ಯಲಹಂಕ ಉಪನಗರದಿಂದ ಇಂದಿರಾನಗರಕ್ಕೆ ತೆರಳಲು ಯುವತಿ ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ ಬುಕ್​ ಮಾಡಿದ್ದರು. ಸುಮಾರು 11.10ರ ಸುಮಾರಿಗೆ ಬೈಕ್ ಸವಾರ ಸ್ಥಳಕ್ಕೆ ಆಗಮಿಸಿದನು. ಬಳಿಕ ಒಟಿಪಿ ಪಡೆಯುವ ನೆಪದಲ್ಲಿ 30 ವರ್ಷದ ಸಂತ್ರಸ್ತ ಯುವತಿಯ ಮೊಬೈಲ್‌ ಅನ್ನು ಸವಾರ ಕಸಿದುಕೊಂಡಿದ್ದ. ಪ್ರಯಾಣ ಆರಂಭಿಸುತ್ತಿದ್ದಂತೆ ಆಕೆಯೊಂದಿಗೆ ಆತ ಅನುಚಿತವಾಗಿ ವರ್ತಿಸತೊಡಗಿದ.

ಇಂದಿರಾ ನಗರಕ್ಕೆ ಆಗಮಿಸುವ ಮಾರ್ಗ ಮಧ್ಯೆ ಆತ ದೊಡ್ಡ ಬಳ್ಳಾಪುರದ ಕಡೆಗೆ ಮಾರ್ಗ ಬದಲಿಸಿದ್ದ. ಅನುಮಾನಗೊಂಡು ಯುವತಿ ಪ್ರಶ್ನೆ ಮಾಡಿದ್ದಕ್ಕೆ ಏನೂ ಉತ್ತರ ನೀಡಿದ ಸವಾರ ಬೈಕ್​ ಅನ್ನು ವೇಗವಾಗಿ ಓಡಿಸಲು ಆರಂಭಿಸಿದ. ಇದರಿಂದ ಆತಂಕಗೊಂಡ ಯುವತಿ ನಾಗೇನಹಳ್ಳಿ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಬೈಕ್​ ವೇಗದಲ್ಲಿರುವಾಗಲೇ ಜಿಗಿದಳು. ಈ ವೇಳೆ ಅಲ್ಲಿಯೇ ಇದ್ದ ಸ್ಥಳೀಯರು ರಕ್ಷಣೆಗೆ ಧಾವಿಸಿದಾಗ ಬೈಕ್​ ಸವಾರ ಪರಾರಿಯಾಗಿದ್ದ. ಬಳಿಕ ಯುವತಿ ಸ್ಥಳೀಯರ ಮೊಬೈಲ್​ ಪಡೆದು ಸ್ನೇಹಿತರಿಗೆ ಕರೆ ಮಾಡಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಿದಳು.

30 ವರ್ಷದ ಸಂತ್ರಸ್ತ ಯುವತಿ ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೈಕ್​ನಿಂದ ಜಿಗಿದ ಪರಿಣಾಮ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಬೈಕ್​ ಟ್ಯಾಕ್ಸಿ ಸವಾರ ದೀಪಕ್​ ರಾವ್​ ಎಂಬಾತನನ್ನು ಬಂಧಿಸಲಾಗಿದೆ.ಇದನ್ನೂ ಓದಿ:ರಕ್ತದಲ್ಲಿ ಬರೆದುಕೊಡುತ್ತೇನೆ, ನಂಬಿಕೆದ್ರೋಹಿ ಶೆಟ್ಟರ್ ಗೆಲ್ಲಲು ಸಾಧ್ಯವಿಲ್ಲ, ಅವರನ್ನು ಸೋಲಿಸುವುದೊಂದೇ ಗುರಿ: ಬಿಎಸ್​ವೈ

ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ದೀಪಕ್​ ವಿರುದ್ಧ ಲೈಂಗಿಕ ಕಿರುಕುಳ, ಅಪಹರಣ, ಹಲ್ಲೆ ಪ್ರಕರಣ ದಾಖಲಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು

ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 10 =
Remember me
