ಆನೇಕಲ್:ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೆರೆಯೊಂದರಲ್ಲಿ ವಿಚಿತ್ರ ಹಾಗೂ ಅಪರೂಪದ ಮೀನುಗಳು ಬಲಗೆ ಬಿದ್ದಿದ್ದು, ಸ್ಥಳೀಯರನ್ನು ಹುಬ್ಬೇರಿಸುವಂತೆ ಮಾಡಿದೆ.
ಆನೇಕಲ್ ತಾಲೂಕಿನ ಮಾಯಸಂದ್ರ ಕೆರೆಯಲ್ಲಿ ರೆಕ್ಕೆ-ಪುಕ್ಕ ಹೊಂದಿರುವಂತೆ ಕಾಣುವ ಮೀನುಗಳು ಪತ್ತೆಯಾಗಿವೆ. ಬೆಂಗಳೂರು ಹೊರವಲಯದಲ್ಲೇ ಈ ಕೆರೆ ಇದೆ. ಪ್ರತಿ ವಾರದಂತೆ ಈ ವಾರವೂ ಕೆರೆಯಲ್ಲಿ ಮೀನು ಹಿಡಿಯಲು ಟೆಂಡರ್ ಪಡೆದವರು ಬಲೆ ಬೀಸಿದ್ದರು.
ನಿನ್ನೆ ಸಂಜೆ ಬಲೆ ಹಾಕಿದಾಗ ಈ ಚಿತ್ರ ರೀತಿಯ ಮೀನುಗಳು ಪತ್ತೆಯಾಗಿವೆ. ದೇಹದ ಭಾಗ ಕಲ್ಲಿನಂತಿದ್ದು, ಒಂದೊಂದು ಮೀನು ಒಂದೂವರೆಯಿಂದ 2 ಕೆಜಿ ತೂಕ ಇವೆ. ಬಲೆ ಹಾಕಿದಾಗ ನೂರಾರು ಮೀನುಗಳು ಬಿದ್ದಿರುವ ಹಿನ್ನೆಲೆಯಲ್ಲಿ ಆ ಮೀನುಗಳನ್ನು ಮಾರಾಟ ಮಾಡದೆ ಅವುಗಳನ್ನು ಪ್ರತ್ಯೇಕವಾಗಿ ಇಡಲಾಗಿದೆ.
ಇದನ್ನೂ ಓದಿ:ಕುಚಿಕು ಗೆಳೆಯರ ಮನಸ್ತಾಪಕ್ಕೆ ಬ್ರೇಕ್​! ಸಿಕ್ಕೇ ಬಿಡ್ತು ಕಿಚ್ಚ-ದಚ್ಚು ಮತ್ತೆ ಒಂದಾಗುವ ಮುನ್ಸೂಚನೆ
ಈ ಮೀನುಗಳುನ್ನು ಹೈಪೋಸ್ಟೊಮಸ್ ಪ್ಲೆಕೋಸ್ಟೊಮಸ್ ಅಥವಾ ಸಕರ್‌ಮೌತ್ ಕ್ಯಾಟ್‌ಫಿಶ್ ಅಥವಾ ಕಾಮನ್ ಪ್ಲೆಕೊ ಎಂದೂ ಕರೆಯುತ್ತಾರೆ. ಇದು ಶಸ್ತ್ರಸಜ್ಜಿತ ಬೆಕ್ಕುಮೀನು ಕುಟುಂಬಕ್ಕೆ (ಲೋರಿಕಾರಿಡೆ) ಸೇರಿದ ಉಷ್ಣವಲಯದ ಸಿಹಿನೀರಿನ ಮೀನಾಗಿದೆ. ಈ ಸಕರ್‌ಮೌತ್ ಕ್ಯಾಟ್‌ಫಿಶ್ ಅನ್ನು ಹೆಚ್ಚಾಗಿ ಸೇವಿಸುವುದಿಲ್ಲ. ಆದರೂ ಕೆಲವೆಡೆ ಇದನ್ನು ಸೇವಿಸುತ್ತಾರೆ. ಆದರೆ, ಈ ಮೀನುಗಳಿಗೆ ಅಕ್ವೇರಿಯಂ ವ್ಯವಹಾರದಲ್ಲಿ ತುಂಬಾ ಬೇಡಿಕೆ ಇದೆ. ಇವುಗಳನ್ನು ಅಕ್ವೇರಿಯಂ ಬಾಟಮ್​ ಕ್ಲೀನರ್​ ಎಂದು ಕರೆಯಲಾಗುತ್ತದೆ.(ದಿಗ್ವಿಜಯ ನ್ಯೂಸ್​)
ಏಷ್ಯಾಕಪ್​ ವೇಳೆ ಪಾಕಿಸ್ತಾನಕ್ಕೆ ಹೋಗಲಿದ್ದಾರೆ ರೋಜರ್​ ಬಿನ್ನಿ, ರಾಜೀವ್​ ಶುಕ್ಲಾ!

ಡಾಲಿ ತಾರಾ ಹುಟ್ಟುಹಬ್ಬ ; ಯಶ್​, ನಿಖಿಲ್​, ರಕ್ಷಿತ್​, ವಿಜಿ, ಯೋಗಿ ಸೇರಿ ಹಲವು ಸೆಲೆಬ್ರಿಟಿಗಳು ಭಾಗಿ

ಚಿನ್ನದ ಮೇಲೆ ನೀರಜ್​ ಕಣ್ಣು; ಜಾವೆಲಿನ್​ ಎಸೆತದಲ್ಲೂ ಇಂದು ಭಾರತ-ಪಾಕಿಸ್ತಾನ ಸೆಣಸಾಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
