ಉಡುಪಿ:ಜಿಲ್ಲೆಯಲ್ಲಿ ಮಲೇರಿಯಾ, ಡೆಂಘೆ, ಕೋವಿಡ್ ಪ್ರಕರಣ ಇಳಿಕೆಯಾಗುತ್ತಿರುವ ಮಧ್ಯೆಯೇ ಇಲಿ ಜ್ವರ ಪ್ರಕರಣ ಹೆಚ್ಚುತ್ತಿದೆ. ಈ ವರ್ಷ ಜಿಲ್ಲೆಯಲ್ಲಿ ಜನವರಿಯಿಂದ ಸೆಪ್ಟೆಂಬರ್‌ವರೆಗೆ 173 ಪ್ರಕರಣ ಪತ್ತೆಯಾಗಿದ್ದು, ಉಡುಪಿ ತಾಲೂಕಿನಲ್ಲಿ 85, ಕುಂದಾಪುರ ತಾಲೂಕಿನಲ್ಲಿ 54, ಕಾರ್ಕಳ ತಾಲೂಕಿನಲ್ಲಿ 34 ವರದಿಯಾಗಿದೆ. ಅಕ್ಟೋಬರ್‌ವರೆಗೆ 203 ಪ್ರಕರಣ ಪತ್ತೆಯಾಗಿದೆ.
ಜನವರಿಯಲ್ಲಿ 559 ಮಂದಿಯನ್ನು ಪರೀಕ್ಷಿಸಲಾಗಿದ್ದು, 24 ಮಂದಿ ಜ್ವರ ಲಕ್ಷಣ ಹೊಂದಿದ್ದರು. ಫೆಬ್ರವರಿಯಲ್ಲಿ 26, ಮಾರ್ಚ್‌ನಲ್ಲಿ 12, ಏಪ್ರಿಲ್‌ನಲ್ಲಿ 4, ಮೇನಲ್ಲಿ 5, ಜೂನ್ 11, ಜುಲೈ 32, ಆಗಸ್ಟ್‌ನಲ್ಲಿ 25 ಮಂದಿಗೆ ಜ್ವರ ತಗುಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು 34 ಪ್ರಕರಣ ದಾಖಲಾಗಿದೆ. ಇದರಲ್ಲಿ ಉಡುಪಿ ತಾಲೂಕಿನವರೇ 17 ಮಂದಿ. ಕುಂದಾಪುರ 11, ಕಾರ್ಕಳದಲ್ಲಿ 6 ಪ್ರಕರಣಗಳಿದ್ದವು. 2018ರಲ್ಲಿ 330, 2019ರಲ್ಲಿ 344 ಮಂದಿಯಲ್ಲಿ ವೈರಸ್ ಕಾಣಿಸಿಕೊಂಡಿತ್ತು. ಕಳೆದ 2 ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಕರಣ ಕಡಿಮೆ.ಸಾಮಾನ್ಯವಾಗಿ ಭತ್ತ ಕಟಾವಿಗೆಂದು ರೈತರು ಗದ್ದೆಗೆ ಇಳಿಯುವ ಸಂದರ್ಭ ಸೋಂಕಿತ ಇಲಿಗಳ ಮಲಮೂತ್ರಗಳಿಂದ ವೈರಸ್ ಹರಡುವುದರಿಂದ ಕಟಾವು ಅವಧಿಯಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತವೆ. ಲಾಕ್‌ಡೌನ್ ಅವಧಿಯ ನಾಲ್ಕು ತಿಂಗಳು ಇಲಿಜ್ವರ ಪ್ರಕರಣ ತೀರ ಇಳಿಕೆಯಾಗಿತ್ತು.
ದ.ಕ. ಜಿಲ್ಲೆಯಲ್ಲಿ 111 ಪ್ರಕರಣದ.ಕ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 111 ಇಲಿ ಜ್ವರ ಪ್ರಕರಣ ಪತ್ತೆಯಾಗಿದೆ. ಈ ಪೈಕಿ ಆಗಸ್ಟ್ ತಿಂಗಳಲ್ಲಿ ಒಂದು ಮರಣ ಸಂಭವಿಸಿದೆ. ಏಪ್ರಿಲ್‌ನಲ್ಲಿ 9, ಮೇ 15, ಜೂನ್ 15, ಜುಲೈ 15, ಆಗಸ್ಟ್ 12 ಮತ್ತು ಸೆಪ್ಟೆಂಬರ್ ತಿಂಗಳಲ್ಲಿ 8 ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ 250ರಷ್ಟು ಇಲಿ ಜ್ವರ ವರದಿಯಾಗಿತ್ತು. ಕೋವಿಡ್ -19 ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರಗೆ ಬಾರದ ಕಾರಣ ಈ ಬಾರಿ ಪ್ರಕರಣ ಕಡಿಮೆ. ಇನ್ನೊಂದೆಡೆ ಆಶಾ ಕಾರ್ಯಕರ್ತೆಯರು ಕೋವಿಡ್ -19 ಜಾಗೃತಿಗೆ ಸಂಬಂಧಿಸಿ ಮನೆ ಮನೆಗೆ ಭೇಟಿ ನೀಡುವ ವೇಳೆ ಮಲೇರಿಯಾ, ಡೆಂೆ ಹಾಗೂ ಇಲಿ ಜ್ವರ ಕುರಿತಾಗಿಯೂ ಅರಿವು ಮೂಡಿಸಿದ್ದಾರೆ. ಇದು ಕಡಿಮೆ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಲು ಕಾರಣವಾಯಿತು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಕೆ.‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ವಹಿಸಬೇಕಾದ ಮುನ್ನೆಚ್ಚರಿಕೆನೀರು ಕುದಿಸಿಯೇ ಕುಡಿಯಬೇಕು. ಸಾಕುಪ್ರಾಣಿ, ಕಾಡುಪ್ರಾಣಿಗಳ ಮೂತ್ರ ಸೇರುವ ಸಾಧ್ಯತೆ ಇರುವುದರಿಂದ ಹೊಂಡ, ಸಣ್ಣ ಕೊಳ ಸೇರಿದಂತೆ ನಿಂತ ನೀರಿನಲ್ಲಿ ಸ್ನಾನ ಮಾಡಬಾರದು. ನೀರಿನಲ್ಲಿ ಪ್ರಾಣಿಗಳ ಮೂತ್ರ ಸೇರದಂತೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ಆಹಾರ ಪದಾರ್ಥಗಳು, ಹಣ್ಣು-ತರಕಾರಿ ಇಲಿಗಳಿಗೆ ಸಿಗದಂತೆ ನೋಡಿಕೊಳ್ಳಬೇಕು. ಮನೆ, ಗೋದಾಮು, ಚರಂಡಿ, ಹೊಲ, ಗದ್ದೆ ಪರಿಸರದಲ್ಲಿ ಇಲಿಗಳು ವಾಸ ಮಾಡದಂತೆ ಬಿಲ, ಕಿಂಡಿ ಮುಚ್ಚಿ, ಇಲಿಗಳನ್ನು ನಾಶ ಮಾಡಿ ಸೂಕ್ತವಾಗಿ ವಿಲೇವಾರಿ ಮಾಡಬೇಕು. ತೋಟ, ಹಟ್ಟಿ, ಗದ್ದೆಗೆ ಹೋಗುವಾಗ, ಮನೆಯ ಸುತ್ತಮುತ್ತ ಓಡಾಡುವಾಗ ಗಮ್ ಬೂಟ್ ಧರಿಸಿದರೆ ಉತ್ತಮ. ನಿಂತ ನೀರಿನಲ್ಲಿ, ಕೆಸರಿನಲ್ಲಿ ಕೆಲಸ ಮಾಡಿದರೆ ಬಳಿಕ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು.
ಇಲಿಗಳ ಮಲ, ಮೂತ್ರದಲ್ಲಿರುವ ವೈರಸ್ ಮನುಷ್ಯ ದೇಹ ಪ್ರವೇಶಿಸಿದಾಗ ಜ್ವರ ಕಾಣಿಸಿಕೊಳ್ಳುತ್ತದೆ. ಪ್ರಾರಂಭದಲ್ಲೇ ಇದಕ್ಕೆ ಚಿಕಿತ್ಸೆ ನೀಡಬೇಕು. ಇಲಿ ಜ್ವರಕ್ಕೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧ ದಾಸ್ತಾನು ಇದೆ. ಜಿಲ್ಲೆಯಲ್ಲಿ ಇಲಿ ಜ್ವರದಿಂದ ಮರಣ ಸಂಭವಿಸಿಲ್ಲ.ಡಾ.ಸುಧೀರಚಂದ್ರ ಸೂಡ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 1 =
Remember me
