ಚಿಕ್ಕಮಗಳೂರು:ಮದುವೆ ನಿಶ್ಚಿತಾರ್ಥ ಅಂದ್ರೆ ಮಧುಮಗ-ಮಧುಮಗಳು ಉಂಗುರ ಬದಲಿಸಿಕೊಳ್ತಾರೆ, ಹೂವಿನ ಮಾಲೆ ಹಾಕುತ್ತಾರೆ, ಎರಡೂ ಕುಟುಂಬಸ್ಥರು ತಾಂಬೂಲ ಬದಲಾಯಿಸಿಕೊಂಡು ಒಟ್ಟಾಗಿ ಸಿಹಿಯೂಟ ಮಾಡುವುದು ರೂಢಿ. ಇಲ್ಲಿ ಅವರವರ ಆರ್ಥಿಕತೆಯ ಅನುಕೂಲಕ್ಕೆ ತಕ್ಕಂತೆ ಅದ್ದೂರಿತನವೂ ಮೇಳೈಸಲಿದೆ. ಆದರೆ ಚಿಕ್ಕಮಗಳೂರು ನಗರದ ಯುವಜೋಡಿ ಇಂದು(ಫೆ.14) ಮದುವೆ ನಿಶ್ಚಿತಾರ್ಥ ಮಾಡಿಕೊಂಡ ಪರಿ ಮಾತ್ರ ಎಲ್ಲರಿಗೂ ಮಾದರಿ.
ಹೌದು, ಫೆ.14 ಪ್ರೇಮಿಗಳ ದಿನ. ಈ ದಿನಕ್ಕಾಗಿಯೇ ಕಾದು ಬಹುತೇಕರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಕ್ಷಾಂತರ ಮಂದಿ ಪ್ರಿಯಕರ/ಪ್ರಿಯತಮೆ ಬಳಿ ಪ್ರೇಮನಿವೇದನೆಗೆ ಹವಣಿಸಿದ್ದಾರೆ. ಲಕ್ಷಾಂತರ ಮಂದಿ ನಿಶ್ಚಿತಾರ್ಥವನ್ನೂ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಆದರೆ, ಚಿಕ್ಕಮಗಳೂರು ನಗರದ ಹೊರವಲಯದ ಹಿರೇಮಗಳೂರಿನಲ್ಲಿ ರವೀಶ್ ಪಟೇಲ್ ಹಾಗೂ ವಿದ್ಯಾಶ್ರೀ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಮಾತ್ರ ಭಾರತೀಯರ ಪಾಲಿಗೆ ವಿಶೇಷವೇ ಸರಿ. ಬೆಂಗಳೂರಿನಲ್ಲಿ ಇಂಜಿನಿಯರ್​ ಕೆಲಸ ಮಾಡುತ್ತಿರುವ ಈ ಜೋಡಿಯ ನಿಶ್ಚಿತಾರ್ಥದ ವಿಶೇಷತೆ ಏನು ಗೊತ್ತಾ?ಇದನ್ನೂ ಓದಿರಿPHOTOS| ಡಿಕೆಶಿ ಪುತ್ರಿ ಐಶ್ವರ್ಯಾ ಅದ್ಧೂರಿ ವಿವಾಹದ ಎಕ್ಸ್​ಕ್ಲೂಸಿವ್​ ಫೋಟೋಗಳು..!
ವಿದ್ಯಾಶ್ರೀ ಮತ್ತು ರವೀಶ್​ ನಿಶ್ಚಿತಾರ್ಥ ಕಾರ್ಯಕ್ರಮ ವಧುವಿನ ಸ್ವಗೃಹದಲ್ಲಿ ಗುರುಹಿರಿಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತು. ಈ ವೇಳೆ ಉಂಗುರ ಹಾಕುವ ಬದಲು ಭಾರತಾಂಬೆಯ ಫೋಟೋವನ್ನ ಪರಸ್ಪರ ಬದಲಿಸಿಕೊಂಡು ಪ್ರೇಮಿಗಳ ದಿನವನ್ನ ‘ಭಾರತಾಂಬೆಯ ದಿನ’ವೆಂದು ವಿಭಿನ್ನವಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಮಕ್ಕಳ ನಡೆಗೆ ಪಾಲಕರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೇಮಿಗಳ ದಿನ ಎಂಬುದು ನಮ್ಮ ಸಂಸ್ಕೃತಿಯಲ್ಲ. ಫೆ.14 ಪುಲ್ವಾಮ ದಾಳಿಯನ್ನ ನೆನಪಿಸುತ್ತೆ. ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯ ದೇಶದೆಲ್ಲಡೆ ನಡೆಯುತ್ತಿದೆ. ಈ ನಡುವೆ ಟೆಕ್ಕಿಗಳಾದ ರವೀಶ್​ ಮತ್ತು ವಿದ್ಯಾಶ್ರೀ ನಡೆ ಎಂತಹವರಿಗೂ ಮಾದರಿ.
ಪ್ರೇಮಿಗಳ ದಿನದಂದು ಸತಿಪತಿಗಳಾದ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ತಾರಾ ಜೋಡಿ

ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
