ಬೆಂಗಳೂರು: ಬರವಣಿಗೆಯಿಂದಲೇ ಬದುಕು ಕಟ್ಟಿಕೊಂಡ, ಬದುಕಿಡೀ ಬರೆದ ಖ್ಯಾತ ಪತ್ರಕರ್ತ ರವಿ ಬೆಳಗೆರೆ, ಬರೆಯುತ್ತಲೇ ಬದುಕು ಮುಗಿಸಿದ್ದಾರೆ. ಹೃದಯಾಘಾತಕ್ಕೆ ಈಡಾಗುವವರೆಗೂ ಪೆನ್ನು ಹಿಡಿದು ಬರೆಯುತ್ತಲೇ ಇದ್ದ ರವಿ ಬೆಳಗೆರೆ, ತಮ್ಮ ನೆಚ್ಚಿನ ಬರವಣಿಗೆಯ ಜತೆಜತೆಗೇ ಇಹಲೋಕ ತ್ಯಜಿಸಿದ್ದಾರೆ.
ರಾಜ್ಯ ರಾಜಕಾರಣದ ಕುರಿತು ರೋಚಕ ಪುಸ್ತಕವೊಂದನ್ನು ಬರೆಯುತ್ತಿದ್ದ ಅವರಿಗೆ ಬರವಣಿಗೆಯಲ್ಲಿ ತೊಡಗಿದ್ದಾಲೇ ಹೃದಯಾಘಾತ ಸಂಭವಿಸಿದೆ. ಹಲವು ರಾಜಕೀಯ ನಾಯಕರ ತೆರೆಮರೆಯ ಸನ್ನಿವೇಶಗಳ ಕುರಿತ ಈ ಕೊನೆಯ ಹಂತದಲ್ಲಿತ್ತು. ಇದರ ಜತೆಗೆ ಬೇರೆ ಪುಸ್ತಕಗಳನ್ನೂ ಬರೆಯುವುದರಲ್ಲಿ ಅವರು ತೊಡಗಿದ್ದರು ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಸದ್ಯದಲ್ಲೇ ರವಿ ಬೆಳಗೆರೆ ಅವರು ಒಟ್ಟೊಟ್ಟಿಗೇ ಕೆಲವು ಪುಸ್ತಕಗಳನ್ನು ಬಿಡುಗಡೆ ಮಾಡಿಬಿಡುತ್ತಿದ್ದರು.
ರಾತ್ರಿ 12.15ರ ಸಮಯದಲ್ಲಿ ಹೃದಯಾಘಾತವಾಗಿದೆ. ನಾನು ಮನೆಯಲ್ಲಿದ್ದೆ, ಅವರು ಆಫೀಸ್​ನಲ್ಲಿದ್ದರು. ವಾದಿರಾಜ್​ ಕರೆ ಮಾಡಿ ವಿಷಯ ತಿಳಿಸಿದ. ನಾವು ಅಲ್ಲಿಗೆ ಹೋಗಿ ನೋಡಿದರೆ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಬಳಿಕ ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದನ್ನು ದೃಢಪಡಿಸಿದ್ದರು ಎಂದು ಅವರ ಪುತ್ರ ಕರ್ಣ ಬೆಳಗೆರೆ ತಿಳಿಸಿದ್ದಾರೆ.
ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − seven =
Remember me
