ಮಂಗಳೂರು:ಭೂಗತ ಪಾತಕಿ ರವಿ ಪೂಜಾರಿಯ ಅತ್ಯಾಪ್ತ ಸಹಚರ ಗುಲಾಂ ಅಹಮ್ಮದ್​ನನ್ನು ಸಿಸಿಬಿ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ.
ರವಿ ಪೂಜಾರಿ ಜೊತೆ ನಿಕಟ ಸಂಪರ್ಕದಲ್ಲಿದ್ದ ಗುಲಾಂ​ನನ್ನು ಸೆರೆ ಹಿಡಿಯಲು ಸಿಸಿಬಿ ಪೊಲೀಸರು ಬಲೆ ಬೀಸಿದ್ದರು. ಬೆದರಿಕೆ ಪ್ರಕರಣಗಳಲ್ಲಿ ರವಿ ಪೂಜಾರಿಗೆ ಸಹಾಯ ಮಾಡುತ್ತಿದ್ದ ಗುಲಾಂ​ ಹೆಜಮಾಡಿಯ ತನ್ನ ಮನೆಯಲ್ಲಿ ಸಿಸಿಬಿಗೆ ಸಿಕ್ಕಿಬಿದ್ದಿದ್ದು, ಹೆಚ್ಚುವರಿ ತನಿಖೆಗಾಗಿ 10 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಇದನ್ನೂ ಓದಿರಿಸೆಂಟ್ರಲ್ ಜೈಲ್​ ಕ್ವಾಟ್ರಸ್​ನಲ್ಲಿ ಶೌಚಗೃಹಕ್ಕೆ ಹೊರಟಿದ್ದವನ ಬಲಿ ಪಡೆದ ಮರ!
26ಕ್ಕೂ ಹೆಚ್ಚು ವರ್ಷ ಭೂಗತ ಜಗತ್ತು ಆಳಿದ ಗ್ಯಾಂಗ್​ಸ್ಟರ್ ರವಿ ಪೂಜಾರಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಈತನ ವಿರುದ್ಧ ಬೆಂಗಳೂರಿನಲ್ಲೇ 46 ಎಫ್​ಐಆರ್ ದಾಖಲಾಗಿದ್ದು, ಇದರಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ಹಪ್ತಾ ವಸೂಲಿ, ಬೆದರಿಕೆಯಂತಹ 20 ಪ್ರಕರಣಗಳಾದರೆ, ಇನ್ನುಳಿದ 26 ಕೇಸ್​ಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅಪರಾಧ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಇಡಿ ಉನ್ನತ ಮೂಲಗಳು ತಿಳಿಸಿದ್ದವು.
ಇದನ್ನೂ ಓದಿರಿಭೂಗತ ಪಾತಕಿ ರವಿ ಪೂಜಾರಿಯ ಸೆನೆಗಲ್ ಸುಳಿವಿನ ರಹಸ್ಯ ಬಯಲು: ಕೋಳ ತೊಡಿಸಿದ್ದು ಹೋಳಿ ವಿಡಿಯೋ!
ಪಾತಕಿ ಪೂಜಾರಿ ವಿರುದ್ಧ ಮುಂಬೈನಲ್ಲಿ 120ಕ್ಕೂ ಹೆಚ್ಚು ಪ್ರಕರಣಗಳಿದ್ದು, ಮುಂಬೈ ಪೊಲೀಸರು ಈತನಿಗಾಗಿ ಕಾಯುತ್ತಿದ್ದಾರೆ. ರವಿ ಪೂಜಾರಿ ವಿರುದ್ಧ ದೇಶದ ವಿವಿಧೆಡೆ ಹತ್ತಾರು ವರ್ಷಗಳ ಹಿಂದೆ ದಾಖಲಾಗಿ ನಾಮಾವಶೇಷವಾಗಿದ್ದ ಹಲವು ಪ್ರಕರಣಗಳಿಗೆ ಇದೀಗ ಮರುಜೀವ ಬಂದಿದೆ.
ರವಿ ಪೂಜಾರಿ ಆಫ್ರಿಕಾದ ಸೆನಗಲ್​ನಲ್ಲಿ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಮಾಡಿರುವ ವಿಚಾರವನ್ನು ಈಗಾಗಲೇ ಪತ್ತೆಹಚ್ಚಿರುವ ಇಡಿ ಅಧಿಕಾರಿಗಳ ತಂಡ, ಮುಟ್ಟುಗೋಲು ಹಾಕಿಕೊಳ್ಳಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿರಿಭೂಗತ ಪಾತಕಿ ರವಿ ಪೂಜಾರಿಗೆ ಶಾಕ್​ ನೀಡಲು ಇಡಿ ಸಿದ್ಧತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + fourteen =
Remember me
