ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ)ನ ವಿತ್ತೀಯ ನೀತಿ ಸಮಿತಿ (ಎಂಪಿಸಿ)ಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ವಿವರಿಸಿದ್ದಾರೆ. ಇಂದು ಹೊಸ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ಆಗಸ್ಟ್ 8ರಿಂದ 10ರವರೆಗೆ ನಡೆದ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು ಸ್ಥಿರವಾಗಿಡಲು ಮತ್ತೊಮ್ಮೆ ನಿರ್ಧರಿಸಲಾಗಿದೆ.
ಮೂರನೇ ಬಾರಿಗೆ ರೆಪೋ ದರ ಸ್ಥಿರಸತತವಾಗಿ ಎಂಪಿಸಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿಟ್ಟಿರುವುದು ಇದು ಮೂರನೇ ಬಾರಿ. ಈ ಹಿಂದೆ ಏಪ್ರಿಲ್ ಮತ್ತು ಜೂನ್‌ನಲ್ಲಿ ನಡೆದ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು ಸ್ಥಿರವಾಗಿ ಇರಿಸಲಾಗಿತ್ತು.
ಇಂದು ಮತ್ತೊಮ್ಮೆ ಗವರ್ನರ್ ಶಕ್ತಿಕಾಂತ ದಾಸ್ ಅವರು ಸದ್ಯಕ್ಕೆ ರೆಪೋ ದರವು ಶೇ.6.5ರಷ್ಟು ಇರಲಿದೆ ಎಂದು ಹೇಳಿದ್ದಾರೆ. ರೆಪೋ ದರದ ಹೊರತಾಗಿ, ದೇಶದಲ್ಲಿ ಏರುತ್ತಿರುವ ಹಣದುಬ್ಬರ, ಆರ್ಥಿಕತೆ ಮುಂತಾದ ಹಲವು ಸಮಸ್ಯೆಗಳಿದ್ದು, ಈ ಸಭೆಯು ಬಹಳ ಮಹತ್ವದ್ದಾಗಿದೆ ಎಂದು ವರದಿಯಾಗಿದೆ.
ರೆಪೋ ದರದಲ್ಲಿ ಕೊನೆಯ ಬದಲಾವಣೆ ಯಾವಾಗ?ಆರ್​​​ಬಿಐ ಕೊನೆಯ ಬಾರಿಗೆ ರೆಪೋ ದರವನ್ನು ಫೆಬ್ರವರಿ 2023 ರಲ್ಲಿ ಬದಲಾಯಿಸಿತು. ಫೆಬ್ರವರಿಯಲ್ಲಿ ಎಂಪಿಸಿ ರೆಪೋ ದರವನ್ನು ಶೇ.0.25ರಷ್ಟು ಹೆಚ್ಚಿಸಲು ನಿರ್ಧರಿಸಿತ್ತು. ರೆಪೋ ದರವನ್ನು 250 ಬೇಸಿಸ್ ಪಾಯಿಂಟ್‌ಗಳಿಂದ ಅಂದರೆ 2.5 ಪ್ರತಿಶತದಷ್ಟು ಮೇ 2022 ರಿಂದ ಫೆಬ್ರವರಿ 2023 ರವರೆಗೆ ಹೆಚ್ಚಿಸಲಾಗಿದೆ.
ನವೋದಯ ವಿದ್ಯಾಲಯ:6ನೇ ತರಗತಿ ದಾಖಲಾತಿಗಾಗಿ ಆನ್​​​​​​​ಲೈನ್​​​ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 15 =
Remember me
