ಬೆಂಗಳೂರು:ಟಿಕೆಟ್ ಗೊಂದಲ ಕೆಲ ದಿನಗಳ ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಟಿಕೆಟ್ ಗಳು ಬಹುತೇಕ ಘೋಷಣೆ ಆದ ಬಳಿಕ ಬಂಡಾದ ಬಿಸಿ ಶುರುವಾಗಿದೆ. ಇನ್ನೂ ನಡೆಯುತ್ತಲೇ ಇದೆ. ಇದೀಗ ಅದೇ ರೀತಿಯ ಬೆಳವಣಿಗೆ ಕ್ರೀಡಾ ಲೋಕದಲ್ಲೂ ಕಂಡು ಬಂದಿದೆ. ಇಂತಹ ಬೆಳವಣಿಗೆ ಕಂಡುಬಂದದ್ದು ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಲ್ಲಿ. ನಾಳೆ RCB V/s CSK ಪಂದ್ಯ
ಚಿನ್ನಸ್ವಾಮಿ ಕ್ರೀಡಾಂಗಂಣದ ಬಳಿ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದು ಅವರ ನಡುವೆ ಟಿಕೆಟ್ ಗೊಂದಲ ಶುರುವಾಗಿದೆ. ಅನೇಕ ಜನರು ರಾತ್ರಿಯೇ ಬಂದು ಟಿಕೆಟ್ ಗಾಗಿ ಬಂದು ನಿಂತಿದ್ದರು. ಈ ನಡುವೆ ಒಮ್ಮಿಂದೊಮ್ಮೆಲೆ ಕ್ರೀಡಾಂಗಣದ ವ್ಯವಸ್ಥಾಪಕ ಸಮಿತಿ ಎಲ್ಲಾ ಟಿಕೆಟ್ ಬಿಕರಿ ಆಗಿವೆ ಎಂದಿದ್ದು ಇದರಿಂದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.
ಇಂದು ಟಿಕೆಟ್ ನೀಡುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ವೈರಲ್ ಆಗಿತ್ತು. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ವೈರಲ್ ಪೋಸ್ಟ್ ನಂಬಿಕೊಂಡು ರಾತ್ರಿಯೆ ಸ್ಟೇಡಿಯಂ ಬಳಿ ಬಂದಿದ್ದರು. ಬಂದಮೇಲೆ ಟೆಕೆಟ್ ಇಲ್ಲ ಎಂಬ ವಿಷಯ ತಿಳಿದು ಅಭಿಮಾನಗಳ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಅಭಿಮಾನಿಗಳು ಏಕಾಏಕಿ ನುಗ್ಗಿ ಬರುತ್ತಿದ್ದು ಅವರ ಮೇಲೆ ಪೊಲೀಸರಿಂದ ಲಾಠಿಚಾರ್ಜ್ ಕೂಡ ನಡೆದಿದೆ
ನಾಳಿನ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಇಂದೇ ರಂಗೇರಿದ್ದು ಟಿಕೆಟ್ ಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಜನಸಾಗರ ಹರಿದು ಬಂದಿದೆ. ಅಂದ ಹಾಗೆ ನಾಳೆ RCB V/S CSK ಮ್ಯಾಚ್ ಇದ್ದು ಇದಕ್ಕಾಗಿಯೇ ಇಂದು ಬೆಳಿಗ್ಗೆಯಿಂದ ಅಭಿಮಾನಿಗಳು ಕಾದು ಕುಳಿತಿದ್ದರು.
ಟೀಕೆಟ್ ಸಿಕ್ಕಿಲ್ಲ, ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು ಜನರನ್ನು ನಿಯಂತ್ರಿಸಲು ಪೋಲಿಸರು ಲಾಠಿಚಾಜ್೯ ಕೂಡ ಮಾಡಿದ್ದಾರೆ! ಅದರ ನಡುವೆ ಇಂದಿನಿಂದಲೇ ಅಭಿಮಾನಿಗಳು RCB ನಾಮ ಜಪ ಶುರು ಮಾಡಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seventeen − 4 =
Remember me
