ಬೆಂಗಳೂರು:ಬೋಗಸ್​ ಕಾರ್ಡ್​ ಪತ್ತೆಗೆ, ಪಡಿತರ ಸೋರಿಕೆ ತಡೆಗೆ ಮುಂದಾದ ಆಹಾರ ಇಲಾಖೆ,ರೇಷನ್​ ಕಾರ್ಡ್​ಗೆ ಆಧಾರ್​ ದೃಢೀಕರಣ(ಇ-ಕೆವೈಸಿ) ಜೋಡಣೆ ಪ್ರಕ್ರಿಯೆ ಮರು ಜಾರಿಗೊಳಿಸಿದೆ.
2019ರ ಜು.19ರಂದು ಪಡಿತರ ಕಾರ್ಡ್​ನ ಪ್ರತಿ ಸದಸ್ಯರು ಇಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶೇ.75ರಷ್ಟು ಕಾರ್ಡ್​ದಾರರು ಇಕೆವೈಸಿ ಮಾಡಿಸಿಕೊಂಡಿದ್ದರು. ಇದೀಗ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಕಡ್ಡಾಯವಾಗಿ ಇಕೆವೈಸಿ ಮಾಡಿಸಬೇಕೆಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ಹಾಗಾಗಿ, ಬಿಪಿಎಲ್​, ಅಂತ್ಯೋದಯ ಕಾರ್ಡ್​ ಹೊಂದಿರುವ ಪ್ರತಿ ಸದಸ್ಯರು ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಕಾರ್ಡ್​ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಕ್ರಿಯೆ ಹೇಗೆ?ರೇಷನ್​ ಕಾರ್ಡ್​ನಲ್ಲಿರುವ ಪ್ರತಿಯೊಬ್ಬರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಧಾರ್​ ದೃಢೀಕರಣ ಮಾಡಿಸಬೇಕು. ಸರ್ಕಾರವು ಪ್ರತಿ ಫಲಾನುಭವಿ ದೃಢೀಕರಣಕ್ಕೆ 5 ರೂ ಮತ್ತು ಒಂದು ಕುಟುಂಬದಲ್ಲಿ ಎಷ್ಟೇ ಫಲಾನುಭವಿ ಇದ್ದರೂ ನೋಂದಾಣಿಗೆ ಗರಿಷ್ಟ 20 ರೂ.ನಂತೆ ನ್ಯಾಯಬೆಲೆ ಅಂಗಡಿಗಳಿಗೆ ಪಾವತಿಸಲಿದೆ. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್​ ಐಡಿಯಲ್ಲೇ ಇಕೆವೈಸಿ ಮಾಡಿಸತಕ್ಕದು. ಕಾರ್ಡ್​ ಸಂಖ್ಯೆ ನಮೂದಿಸಿದರೆ ಎಷ್ಟು ಸದಸ್ಯರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ. ಬಳಿಕ, ಎಲ್ಲರೂ ಆಧಾರ್​ ದೃಢೀಕರಣ ಮಾಡಿಸಬೇಕು. ಫಲಾನುಭವಿ ಮೃತಪಟ್ಟಿರುವ ಮತ್ತು ಬೇರೆ ಸ್ಥಳದಲ್ಲಿ ವಾಸಿಸುತ್ತಿರುವ ಬಗ್ಗೆ ದೃಢೀಕರಣ ವೇಳೆ ಲೆಕ್ಕ ಸಿಗಲಿದೆ.
ಈ ಮೀನು 392 ವರ್ಷಗಳಿಂದ ಜೀವಂತವಾಗಿದೆ! ನಿಧಾನವಾಗಿ ಈಜುವುದರಿಂದಲೇ 500 ವರ್ಷ ​​ ಬದುಕುವ ಶಕ್ತಿ ಇವುಗಳಿಗಿದೆ…
ಇಕೆವೈಸಿ ಏಕೆ?ಹಿಂದೊಮ್ಮೆ ಇಲಾಖೆಯಿಂದ ಬೋಗಸ್​ ಕಾರ್ಡ್​ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್​ ಕಾರ್ಡ್​ ಪರಿಶೀಲನೆ ಕಾರ್ಯ ನಡೆದಿತ್ತು. ನಂತರ, ರೇಷನ್​ ಕಾರ್ಡ್​ಗೆ ಆಧಾರ್​ ಜೋಡಣೆ ನಿಯಮ ತರಲಾಗಿತ್ತು. ಶೇ.100 ಆಧಾರ್​ ಜೋಡಣೆಯಾಗಿತ್ತು. ಈ ವೇಳೆ ಲಾಂತರ ಬೋಗಸ್​ ಕಾರ್ಡ್​ ಪತ್ತೆಯಾಗಿತ್ತು. 2019ರಿಂದ 2022ರವರೆಗೆ ನಡೆದ ಇಕೆವೈಸಿ ಪ್ರಕ್ರಿಯೆಯಲ್ಲೂ ಸತ್ತವರ ಹೆಸರಿನಲ್ಲಿ ರೋಷನ್​ ಪಡೆಯುತ್ತಿರುವುದು ಬಹಿರಂಗವಾಗಿತ್ತು. ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ (ಎನ್​ಎ್​ಎಸ್​ಎ) ಹಾಗೂ ಸುಪ್ರೀಂ ಕೋರ್ಟ್​ ಆದೇಶದನ್ವಯ ಪಡಿತರ ಕಾರ್ಡ್​ನ ಪ್ರತಿಯೊಬ್ಬರು ಇಕೆವೈಸಿ ಮಾಡಿಸಿಕೊಳ್ಳಬೇಕೆಂಬ ನಿಯಮವಿದೆ. ಆದ್ದರಿಂದ, ಎಲ್ಲ ಕಾರ್ಡ್​ದಾರರು ಇಕೆವೈಸಿ ಮಾಡಿಸಿಕೊಂಡರೆ ನಕಲಿ ಕಾರ್ಡ್​ಗೆ ಪತ್ತೆಯಾಗುವುದಲ್ಲದೆ ಪಡಿತರ ಸೋರಿಕೆ ತಡೆಗಟ್ಟಬಹುದು. ಜತೆಗೆ, ಕಾರ್ಡ್​ನಲ್ಲಿ ಮೃತ ಸದಸ್ಯರ ಹೆಸರನ್ನು ಡಿಲೀಟ್​ ಮಾಡುವುದಕ್ಕೆ ಅನುಕೂಲವಾಗಲಿದೆ.
ಮುರ್ನಾಲ್ಕು ವರ್ಷದ ಹಿಂದೆ ಇಕೆವೈಸಿ ಮಾಡಿದ್ದಕ್ಕಾಗಿ ನೀಡಬೇಕಿದ್ದ ಹಣವನ್ನು ಆಹಾರ ಇಲಾಖೆ ಬಾಕಿ ಉಳಿಸಿಕೊಂಡಿದೆ. ಸಾಕಷ್ಟು ಬಾರಿ ಮನವಿ ಪತ್ರ ಕೊಟ್ಟರೂ ಈವರೆಗೆ ಇಕೆವೈಸಿ ಹಣ ಬಿಡುಗಡೆ ಮಾಡಿಲ್ಲ. ಇದೀಗ ರೇಷನ್​ ಕಾರ್ಡ್​ಗೆ ಆಧಾರ್​ ದೃಢೀಕರಣ ಮಾಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದಕ್ಕೆ ನಮ್ಮ ವಿರೋಧವಿದೆ. ಸಂಪೂರ್ಣವಾಗಿ ಬಾಕಿ ಹಣ ಬಿಡುಗಡೆ ಮಾಡಬೇಕು ಮತ್ತು ಸರ್ವರ್​ ಸಮಸ್ಯೆ ಬಗೆಹರಿಸಿದರೆ ಮಾತ್ರವೇ ಇಕೆವೈಸಿ ಮಾಡಲಾಗುವುದು.|ಟಿ.ಕೃಷ್ಣಪ್ಪ. ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘದ ಅಧ್ಯಕ್ಷ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
