ಬೆಂಗಳೂರು:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಸಂಘಟನೆಯ ಮೇಲೆ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧ ಹೇರಿರುವುದು ಇಂದು ದೇಶದಲ್ಲೇ ದೊಡ್ಡ ಸುದ್ದಿ. ಪಿಎಫ್​ಐ ಸಂಘಟನೆಯನ್ನು ಬ್ಯಾನ್ ಮಾಡಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಸೆಪ್ಟೆಂಬರ್ ಕ್ರಾಂತಿ ಎಂದು ಬಣ್ಣಿಸಿದ್ದಾರೆ.
ಪಿಎಫ್​ಐ ನಿಷೇಧ ಕುರಿತು ಟ್ವೀಟ್ ಮಾಡಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್​ ಅವರು ಭಗವಾನ್ ಕೃಷ್ಣನ ಮಾತನ್ನೂ ಉಲ್ಲೇಖಿಸಿದ್ದಾರೆ. ‘ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ’ (ಸಜ್ಜನರನ್ನು ರಕ್ಷಿಸಿ, ದುರ್ಜನರನ್ನು ಶಿಕ್ಷಿಸಲು) ಎಂಬ ಕೃಷ್ಣನ ಮಾತನ್ನು ಉಲ್ಲೇಖಿಸಿರುವ ಅವರು ಸರ್ಕಾರ ಕೂಡ ಅದನ್ನೇ ಮಾಡಿದೆ ಎಂಬುದನ್ನು ಹೇಳಿದ್ದಾರೆ.
ಜೊತೆಗೆ ಪಿಎಫ್​ಐ ನಿಷೇಧವನ್ನು ಅವರು ಸೆಪ್ಟೆಂಬರ್ ಕ್ರಾಂತಿ ಎಂಬುದಾಗಿ ಬಣ್ಣಿಸಿದ್ದಾರೆ. ಏಕೆಂದರೆ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದ ಸಿಮಿ ಸಂಘಟನೆಯನ್ನೂ 2001ರ ಸೆ. 26ರಂದು ನಿಷೇಧಿಸಲಾಗಿತ್ತು. ಇದೀಗ ಪಿಎಫ್​ಐಯನ್ನು ಕೂಡ ಸೆಪ್ಟೆಂಬರ್​ನಲ್ಲೇ ನಿಷೇಧಿಸಲಾಗಿದೆ ಎಂಬುದನ್ನು ತಾರೀಕು ಸಹಿತ ಉಲ್ಲೇಖಿಸಿರುವ ಅವರು ಇದು ಸೆಪ್ಟೆಂಬರ್ ಕ್ರಾಂತಿ ಎಂಬುದಾಗಿ ಹೇಳಿದ್ದಾರೆ. ಅಲ್ಲದೆ ಜನಹಿತದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಮತ್ತು ನಾವು ಕೇವಲ ಕಾನೂನುಬಾಹಿರ ಚಟುವಟಿಕೆಗಳಿಗಷ್ಟೇ ವಿರುದ್ಧ ಎಂಬುದಾಗಿ ಹೇಳಿಕೊಂಡಿದ್ದಾರೆ.
“September Revolution”# SIMI banned on 26.09.01#PFIbanned on 28.09.22Assure the citizens that we are committed to protect the interests of common citizen ,we are only against unlawful activities“Paritranaaya saadhunaama, vinaashaaya cha dushkritaama”— alok kumar (@alokkumar6994)September 28, 2022
“September Revolution”# SIMI banned on 26.09.01#PFIbanned on 28.09.22Assure the citizens that we are committed to protect the interests of common citizen ,we are only against unlawful activities“Paritranaaya saadhunaama, vinaashaaya cha dushkritaama”
ಪಿಎಫ್​ಐ ಬ್ಯಾನ್ ಕುರಿತು ಅಲೋಕ್​ಕುಮಾರ್ ಅವರ ಈ ಪ್ರತಿಕ್ರಿಯೆ ಜನರಿಂದ ಬಹಳ ಮೆಚ್ಚುಗೆಗೆ ಪಾತ್ರವಾಗುತ್ತಿದ್ದು, ಈ ಟ್ವೀಟ್ ವೈರಲ್ ಆಗಲಾರಂಭಿಸಿದೆ. ಬಹಳಷ್ಟು ಮಂದಿ ಇದರ ಸ್ಕ್ರೀನ್​ಶಾಟ್​ ತೆಗೆದು ಹಂಚಿಕೊಂಡಿದ್ದು, ಕೃಷ್ಣನ ನುಡಿ, ಸರ್ಕಾರ ನಡೆ, ಅಲೋಕ್ ಪ್ರತಿಕ್ರಿಯೆ ಎಲ್ಲದರ ಬಗ್ಗೆಯೂ ಪ್ರಶಂಶೆ ವ್ಯಕ್ತಪಡಿಸುತ್ತಿದ್ದಾರೆ.
ಪಿಎಫ್​ಐ ಸಂಘಟನೆಯನ್ನು ನಿಷೇಧಿಸಿದ್ದೇಕೆ?: ಗೃಹ ಸಚಿವರು ನೀಡಿದ ಸ್ಪಷ್ಟನೆ ಇಲ್ಲಿದೆ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen + 3 =
Remember me
