ಬೆಂಗಳೂರು:ನಾಡಿನ ಕೋಟಿ ಕುಟುಂಬಗಳು ಎದುರು ನೋಡುತ್ತಿರುವ ‘ಗೃಹಲಕ್ಷ್ಮೀ’ ಯೋಜನೆಯನ್ನು ಗೊಂದಲ ರಹಿತವಾಗಿ ಮತ್ತು ವ್ಯವಸ್ಥಿತವಾಗಿ ಅನುಷ್ಠಾನ ಮಾಡಲು ನಾವು ಸಜ್ಜಾಗುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೊಗ ಹೊತ್ತ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೊಂಡಿದ್ದಾರೆ.
ವಿಜಯವಾಣಿ ಸಂಪಾದಕೀಯ ತಂಡದ ಜತೆ ನಡೆಸಿದ ಸಂವಾದದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಇದೊಂದು ಬಹಳ ದೊಡ್ಡ ಯೋಜನೆಯಾಗಿದ್ದು, ಸವಾಲು ತುಂಬ ಇದೆ. 1.10 ಕೋಟಿ ಕುಟುಂಬ ಇದರ ವ್ಯಾಪ್ತಿಯಲ್ಲಿ ಬರಲಿದೆ ಎಂದರು.
ಬಿಪಿಎಲ್, ಎಪಿಎಲ್ ಕಾರ್ಡ್​ದಾರರನ್ನು ಗುರುತಿಸಿದ್ದು, ಅನುಷ್ಠಾನಕ್ಕೆ ಕಂದಾಯ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಜೋಡಿಸಿ ಸಭೆ ಮಾಡಲಾಯಿತು. ಆದರೆ, ಬೇರೆ ಇಲಾಖೆಯ ಮೇಲೆ ಒತ್ತಡ ಇರಲಿದೆ. ಹೀಗಾಗಿ ವಾರ್ಷಿಕ 25-30 ಸಾವಿರ ಕೋಟಿ ರೂ. ಯೋಜನೆಯನ್ನು ನೇರವಾಗಿ ನಮ್ಮ ಇಲಾಖೆಯಿಂದಲೇ ಅನುಷ್ಠಾನ ಮಾಡೋಣ ಎಂದು ನಿರ್ಧರಿಸಿದ್ದೇವೆ. ಸಿಡಿಪಿಒ, ಗ್ರಾಮ ಒನ್, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅನುಷ್ಠಾನ ಮಾಡಿಸಲು ತೀರ್ಮಾನ ಮಾಡಿದ್ದೇವೆ ಎಂದರು. ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಜನರು ಬಹಳ ಪ್ರೀತಿಯಿಂದ ಸ್ವೀಕರಿಸಿದ್ದು, ಪ್ರಸ್ತುತ ಯೋಜನೆ ಡಿಸೈನಿಂಗ್​ನಲ್ಲಿ ತೊಡಗಿಕೊಂಡಿದ್ದೇನೆ ಎಂದ ಅವರು ತೆರಿಗೆದಾರರು, ಜಿಎಸ್ಟಿ ಕಟ್ಟುವವರನ್ನು ಈ ಯೋಜನೆ ವ್ಯಾಪ್ತಿಗೆ ತರುವ ಬಗ್ಗೆ ಮುಂದೆ ಯೋಚಿಸುತ್ತೇವೆ. ಅವರಿಗೂ ಮುಂದೆ ಅವಕಾಶ ನೀಡಲಾಗುವುದು. ಬಿಪಿಎಲ್, ಎಪಿಎಲ್ ಕಾರ್ಡ್ ಇಲ್ಲದವರು ಕೆಲವು ದಿನ ಕಾಯಬೇಕಾಗಬಹುದು ಎಂದು ಹೇಳಿದರು.
ಅಪೌಷ್ಟಿಕತೆ ನಿವಾರಣೆಗೆ ಕ್ರಮ:ಪೌಷ್ಟಿಕ ಆಹಾರ ವಿತರಣೆಯಲ್ಲಿ ವ್ಯತ್ಯಾಸ ಆಗುತ್ತಿರುವ ಕೆಲವು ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ ಜಾಸ್ತಿ ಇದೆ. ಮಕ್ಕಳ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಕೊಡುತ್ತಿಲ್ಲ, ಪೊ›ಟೀನ್ ಪೌಡರ್ ಕೊಡಬೇಕಾಗಬಹುದು. ಬಜೆಟ್​ನಲ್ಲಿ ಈ ವಿಚಾರ ತರಲು ಸಿಎಂ ಜತೆ ಮಾತನಾಡಲಾಗುವುದು ಎಂದರು. ಆಹಾರ ವಿತರಣೆ ಗುತ್ತಿಗೆ ಸಂಬಂಧ ಕೋರ್ಟ್ ನಿರ್ದೇಶನ ಬಂದಿದೆ. ಗುರುವಾರ ಕಾನೂನು ಸಚಿವರ ಜತೆ ಚರ್ಚೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುವುದು. ಈಗಾಗಲೆ ಸಭೆ ನಡೆಸಿದ್ದು ಕೇಂದ್ರೀಕೃತ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸುವ ಮೂಲಕ ಸಮಗ್ರ ಬದಲಾವಣೆ ಸುಳಿವು ನೀಡಿದರು.
ಸೋರಿಕೆಗೆ ಬ್ರೇಕ್ ಹಾಕುವೆ:ಹಿಂದಿನಿಂದಲೂ ಇಲಾಖೆ ಜವಾಬ್ದಾರಿ ತೆಗೆದುಕೊಂಡವರು ಎಷ್ಟು ಸಾಧ್ಯವೋ ಅಷ್ಟು ಸುಧಾರಣೆಗೆ ಪ್ರಯತ್ನಿಸಿದ್ದಾರೆ. ಇಲಾಖೆಯಲ್ಲಿ ಸೋರಿಕೆಯಾಗುತ್ತಿದೆ ಎಂಬುದು ಗಮನದಲ್ಲಿದೆ. ಚುರುಕು ಮುಟ್ಟಿಸುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಕ್ತವಾಗಿ ಅನಿಸಿಕೆ ಹಂಚಿಕೊಂಡರು. ಇಲಾಖೆ ಒಂದೇ ದಿನಕ್ಕೆ ಸ್ವಚ್ಛವಾಗಲ್ಲ ಎಂಬ ಅರಿವಿದೆ. ಆದರೆ ಸ್ವಚ್ಛಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಲಿದೆ ಎಂದರು.
ಸ್ಮೃತಿ ಜತೆ ಚರ್ಚೆ:ನಿರ್ಭಯಾ ಫಂಡ್ ಬಳಕೆ ಮಾಡಲು ಕೆಲವು ಕಟ್ಟುಪಾಡು ಇದೆ. ನಿಧಿಯ ಸಮರ್ಪಕ ಬಳಕೆಗೆ ಕೇಂದ್ರ ಸಚಿವೆ ಸ್ಮೃ ಇರಾನಿ ಭೇಟಿ ಮಾಡಿ ಅವರ ಜತೆ ಚರ್ಚೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಯಾವುದೇ ಇಲಾಖೆ ಕೊಟ್ಟರೂ ನಿಭಾಯಿಸಬಲ್ಲ ಆತ್ಮವಿಶ್ವಾಸಬೇಕು. ನಾನು ರಾಜಕೀಯಕ್ಕೆ ಪ್ಯಾರಾಚೂಟ್ ಲ್ಯಾಂಡಿಂಗ್ ಮಾಡಿಲ್ಲ, ತಳಮಟ್ಟದಿಂದ ರಾಜಕೀಯದಲ್ಲಿ ಬಂದಿದ್ದೇನೆ. ಖುಷಿಯಿಂದ ಇಲಾಖೆ ಸ್ವೀಕರಿಸಿದ್ದೇನೆ. ಮೊದಲಿಗೆ ಸಮಗ್ರವಾಗಿ ಅಧ್ಯಯನ ಮಾಡುತ್ತಿದ್ದೇನೆ.
| ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
ಇದು ಸ್ಪರ್ಧಾತ್ಮಕ ಯುಗ. ಸ್ವಸಹಾಯ ಸಂಘಗಳು ಉತ್ಪಾದನೆ ಮಾಡುವ ಪ್ರತಿಯೊಂದು ವಸ್ತುವನ್ನೂ ಬ್ರಾಂಡಿಂಗ್ ಮಾಡುವ ಅಗತ್ಯವಿದೆ. ಆದರೆ, ಅದರಲ್ಲಿ ಅಷ್ಟು ಸಕ್ಸಸ್ ರೇಟ್ ಇಲ್ಲ. ಅಲ್ಲದೇ ಸ್ವಸಹಾಯ ಸಂಘಗಳಿಗೆ ಜಾಸ್ತಿ ಹಣವೂ ಕೊಡಲ್ಲ. ನೆರೆ, ಕೋವಿಡ್​ನಿಂದ ಮೂರು ವರ್ಷ ನೆರವು ಕೂಡ ಕೊಟ್ಟಿಲ್ಲ. ಸ್ವಸಹಾಯ ಸಂಘಗಳಿಗೆ ಸಬ್ಸಿಡಿ ಬದಲು ಶೂನ್ಯ ಬಡ್ಡಿದರದಲ್ಲಿ ಹೆಚ್ಚು ಹಣ ಕೊಡಬೇಕೆಂಬ ಆಶಯವಿದೆ. ಒಂದು ಸಂಘಕ್ಕೆ ಒಂದು ಲಕ್ಷ, ಒಂದೂವರೆ ಲಕ್ಷ ಕೊಟ್ಟರೆ ಪ್ರಾಕ್ಟಿಕಾಲಿಟಿ ಉಪಯೋಗವಾಗಲ್ಲ ಎಂದು ಅಭಿಪ್ರಾಯಪಟ್ಟರಲ್ಲದೇ ಹೆಚ್ಚಿನ ಹಣ ಶೂನ್ಯ ಬಡ್ಡಿ ದರದಲ್ಲಿ ಕೊಡಬೇಕೆಂಬ ಆಶಯವಿದೆ ಎಂದರು.
ಕಾರ್ಯಕರ್ತೆಯರ ವೇತನ ಹೆಚ್ಚಳ:ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ ಈ ಬಜೆಟ್​ನಲ್ಲಿ ಮಂಡನೆ ಮಾಡಬೇಕೆಂಬ ಒತ್ತಾಯವಿದೆ. ನಾನೂ ಕೂಡ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದೇನೆ ಎಂದು ಸಚಿವರು ತಿಳಿಸಿದರು.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eleven =
Remember me
