ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆಯಡಿ ನಿರ್ವಹಣೆಯಾಗುತ್ತಿರುವ ಹಾಸ್ಟೆಲ್, ವಸತಿ ನಿಲಯಗಳು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಇತ್ತೀಚೆಗೆ ಆರಂಭವಾದ ಹೊಸ ಕಟ್ಟಡಗಳಲ್ಲಿ ತಕ್ಕಮಟ್ಟಿಗೆ ವ್ಯವಸ್ಥೆ ಚೆನ್ನಾಗಿದ್ದರೆ ಹಳೆಯ ಕಟ್ಟಡ ಹಾಗೂ ಬಾಡಿಗೆ ಕಟ್ಟಡಗಳಲ್ಲಿರುವ ಹಾಸ್ಟೆಲ್, ವಸತಿ ಶಾಲೆಗಳಿಗೆ ಸಮಸ್ಯೆಗಳ ಗ್ರಹಣ ಬಡಿದಿದೆ. ಪ್ರಸಕ್ತ ವರ್ಷ ಮಕ್ಕಳಿಗೆ ಸೋಪು, ಎಣ್ಣೆ ಸಹಿತ ದಿನಬಳಕೆ ವಸ್ತುಗಳ ಕಿಟ್ ಸರಬರಾಜು ಆಗಿಲ್ಲ ಎಂಬುದು ಬಹುತೇಕ ಕಡೆ ಕೇಳಿಬಂದಿದ್ದು,ವಿಜಯವಾಣಿರಿಯಾಲಿಟಿ ಕಂಡು ಬಂದ ಚಿತ್ರಣವನ್ನು ಇಲ್ಲಿ ಕೊಡಲಾಗಿದೆ.
ಬೇಕಿದೆ 11000 ಕಂಪ್ಯೂಟರ್ಕ್ರೖೆಸ್ ಸಂಸ್ಥೆ ಅಧೀನದ ವಸತಿ ಶಾಲೆಗಳಿಗೆ 11,174 ಕಂಪ್ಯೂಟರ್ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ. 536 ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ, 45 ಶಾಲೆಗಳಲ್ಲಿ ಮಾತ್ರ 20 ಕಂಪ್ಯೂಟರ್ ಇದೆ. 155 ಶಾಲೆಗಳಿಗೆ ಇಂಟರ್ ನೆಟ್ ಸೌಲಭ್ಯ ಬಯಸುತ್ತಿವೆ. 10ನೇ ತರಗತಿವರೆಗೂ ಕಂಪ್ಯೂಟರ್ ತರಬೇತಿ ನೀಡುತ್ತಿದ್ದು, ಹಲವಾರು ಶಾಲೆಗಳಲ್ಲಿ ಕಂಪ್ಯೂಟರ್ ಮತ್ತು ಶಿಕ್ಷಕರೂ ಇಲ್ಲ.
ವಾರ್ಡನ್ ಕೊರತೆವಿದ್ಯಾರ್ಥಿನಿಯರು ಇರುವ 209 ವಸತಿ ಶಾಲೆಗಳಲ್ಲಿ ಕೇವಲ 93 ಮಹಿಳಾ ವಾರ್ಡನ್​ಗಳು ಇರುವುದು ಅತ್ಯಂತ ಶೋಚನೀಯ. ಒಬ್ಬೊಬ್ಬರಿಗೆ ಎರಡು ಮೂರು ವಸತಿ ಶಾಲೆಗಳಲ್ಲಿ ಅಧಿಕ ಪ್ರಭಾರ ವಹಿಸಿರುವುದರಿಂದ ಹೆಣ್ಣು ಮಕ್ಕಳ ರಕ್ಷಣೆಗೆ ತೊಂದರೆಯಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿರುವ 1256 ಹಾಸ್ಟೆಲ್​ಗಳಲ್ಲಿ 1250 ವಾರ್ಡನ್ ಹುದ್ದೆ ಖಾಲಿ ಇವೆ.
ಗೋದಾಮಿನಲ್ಲಿ ಆಶ್ರಯಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಹಚ್ಚೊಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಗೋದಾಮಿನಲ್ಲಿ ನಡೆಯುತ್ತಿದೆ. ಸಂಡೂರಿನಲ್ಲಿ ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಹಳೇ ದರೋಜಿ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ಶಾಲೆಗೆ ನಿವೇಶನ ಮಂಜೂರಾಗಿದ್ದು, ಕಟ್ಟಡ ನಿರ್ವಣಗೊಳ್ಳಬೇಕಿದೆ. ಕಂಪ್ಲಿ ವಸತಿ ಶಾಲೆಯಲ್ಲಿ ಮಲಗಲು ಮಂಚದ ಕೊರತೆ ಇದೆ.
ಮರಗಳೇ ಛಾವಣಿವಿಜಯನಗರ ಜಿಲ್ಲೆಯ 24 ವಸತಿ ಶಾಲೆಗಳಲ್ಲಿ ಒಪ್ಪಂದದಂತೆ ಊಟ ಸಿಗುತ್ತಿಲ್ಲ. ಟೆಂಡರ್ ಹಿಡಿಯುವ ಎನ್​ಜಿಒಗಳು ಮಾತ್ರ ಚಾಟ್ ಪ್ರಕಾರ ಊಟ ನೀಡದೆ ವಂಚಿಸುತ್ತಿವೆ. ಕಮಲಾಪುರದ ಕಸ್ತೂರಿಬಾ ಶಾಲೆ ಸೇರಿ ಇತರ ವಸತಿ ಶಾಲೆಗಳಲ್ಲಿ 6ನೇ ತರಗತಿಯಿಂದ 10ನೇ ತರಗತಿ ನಡೆಸಲು ಅನುಮತಿ ಪಡೆದರು, ಕೊಠಡಿ ವ್ಯವಸ್ಥೆಯಿಲ್ಲದೆ 8ನೇ ತರಗತಿ ನಡೆಯುತ್ತಿವೆ.
ಬೆಡ್-ಕಾಟ್, ಸೊಳ್ಳೆ ಪರದೆ ಸಮಸ್ಯೆ
* ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಾಡ್ಯಾಡಿ ಮತ್ಯಾಡಿ ವಸತಿ ಶಾಲೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಕಾಪು ಕಳತ್ತೂರಿನ ಶಾಲೆಯಲ್ಲಿ ಬೆಂಚ್, ಡೆಸ್ಕ್​ಗಳು ಇಲ್ಲ.
* ಚಿಕ್ಕಮಗಳೂರು ಜಿಲ್ಲೆಯ 95 ವಸತಿ ಶಾಲೆಗಳಲ್ಲಿ ಬೆಡ್ ಹಾಗೂ ಕಾಟ್​ಗಳ ಸಮಸ್ಯೆ ಇದೆ. ಹತ್ತಕ್ಕೂ ಹೆಚ್ಚು ಶಾಲೆಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿವೆ.
* ಬಾಡಿಗೆ ಕಟ್ಟಡದಲ್ಲಿರುವ ದಕ್ಷಿಣ ಕನ್ನಡದ ಸರ್ಕಾರಿ ವಸತಿ ಶಾಲೆಗಳಲ್ಲಿ ಅನೇಕ ಮಕ್ಕಳಿಗೆ ಮಂಚ ಇದ್ದರೆ ಬೆಡ್ ಇಲ್ಲ, ಬೆಡ್ ಇದ್ದರೆ ಮಂಚ ಇಲ್ಲ. ಹಿಂದುಳಿದ ವರ್ಗದ 3 ವಸತಿ ಶಾಲೆಗಳು ಬಾಡಿಗೆ ಕಟ್ಟಡದಲ್ಲಿವೆ. ಟ್ರಂಕ್, ಸೋಪ್ ಕಿಟ್ ತಲುಪಿಲ್ಲ.
* ಖಾಸಗಿ ಕಟ್ಟಡಗಳಲ್ಲಿ ನಡೆಸುತ್ತಿರುವ ಕೋಲಾರದ ವಸತಿ ನಿಲಯಗಳಲ್ಲಿ ಮೂಲಸೌಲಭ್ಯ ಕೊರತೆ ಕಾಡುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್​ಗಳಲ್ಲಿ ಸೊಳ್ಳೆ ಪರದೆ, ಬೆಡ್ ಶೀಟ್, ಸೋಪು, ಬಿಸಿ ನೀರು ಸಿಗುತ್ತಿಲ್ಲ
* ಹಾಸನ ಜಿಲ್ಲೆಯ 12 ವಸತಿ ಶಾಲೆಗಳಲ್ಲಿ ಬೆಡ್, ಇನ್ನಿತರ ಸಮಸ್ಯೆಗಳಿವೆ.
* ಚಿತ್ರದುರ್ಗ ತಾಲೂಕು ಬೊಮ್ಮೇನಹಳ್ಳಿ-ಕಡ್ಲೆಗುದ್ದು ವಸತಿ ಶಾಲೆಗೆ ಕಾಂಪೌಂಡ್ ನಿರ್ವಣವಾಗಬೇಕಿದೆ. ವಾರ್ಡನ್ ಹುದ್ದೆ ಭರ್ತಿಯಾಗಿಲ್ಲ. ಮೆದೇಹಳ್ಳಿ ಡಾ.ಎಪಿಜೆ ಅಬ್ದುಲ್​ಕಲಾಂ ವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಟ್ಟಿಲ್ಲ.
* ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್(ಕೆ) ಸಮೀಪದ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್​ಪೂರ್ವ ಬಾಲಕರ ವಸತಿನಿಲಯ ವಿದ್ಯಾರ್ಥಿಗಳಿಗೆ ಮಂಚ, ಬೆಡ್ ಇಲ್ಲವಾಗಿದೆ. ಔರಾದ್​ನ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಮಂಚಗಳಿಲ್ಲ.
ಸಮುದಾಯ ಭವನವೇ ವಸತಿ ಶಾಲೆತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರಕ್ಕೆ ಮಂಜೂರಾಗಿದ್ದ ಅಂಬೇಡ್ಕರ್ ವಸತಿ ಶಾಲೆ ತುರುವೇಕೆರೆ ಸಂತೆ ಮೈದಾನ ಬಳಿಯ ಪಪಂ ಸಮುದಾಯ ಭವನದಲ್ಲಿ ನಡೆಯುತ್ತಿದೆ. ಭವನದಲ್ಲೇ ತಾತ್ಕಾಲಿಕ ಕಂಪಾರ್ಟ್​ವೆುಂಟ್​ಗಳನ್ನು ರೂಮ್ಳನ್ನಾಗಿ ಪರಿವರ್ತಿಸಲಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಮುರಾರ್ಜಿ ವಸತಿಶಾಲೆಗೆ ಕಾಂಪೌಂಡ್, ಸರಿಯಾದ ರಸ್ತೆ ಇಲ್ಲ. ಕುಣಿಗಲ್ ತಾಲೂಕಿನ ದೊಡ್ಡಮಧುರೆಯ ಕಸ್ತೂರಬಾ ಗಾಂಧಿ ಬಾಲಿಕ ವಸತಿ ಶಾಲೆಯಲ್ಲೂ ಸಮಸ್ಯೆಗಳು ತುಂಬಿವೆ. ಜಿಲ್ಲೆಯಲ್ಲಿ ವಸತಿ ಶಾಲೆಗಳು 9 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.
ರಾಮನಗರದಲ್ಲಿ ಬಯಲಲ್ಲೇ ಪಾಠರಾಮನಗರ ಜಿಲ್ಲೆಯಲ್ಲಿ 102 ಹಾಸ್ಟೆಲ್​ಗಳು ಕಾರ್ಯನಿರ್ವಹಿಸುತ್ತಿದ್ದು ಬಾಡಿಗೆ ಕಟ್ಟಡದಲ್ಲಿರುವ ಹಾಸ್ಟೆಲ್​ಗಳಲ್ಲಿ ಮೂಲಸೌಕರ್ಯಗಳ ಕೊರತೆ ಜತೆಗೆ ಬಯಲಲ್ಲೇ ಪಾಠ ಕೇಳಬೇಕಾದ ಅನಿವಾರ್ಯತೆ ಇದೆ. ಕೆಲವು ಕಡೆಗಳಲ್ಲಿ ಕಾಂಪೌಂಡ್ ಇಲ್ಲದ ಕಾರಣ ಹೊರಗಿನವರ ಉಪಟಳವೂ ಇದೆ. ಚನ್ನಪಟ್ಟಣದ ಎಲೇಕೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳು ಬಯಲ್ಲಿಯೇ ಪಾಠ ಕೇಳಬೇಕಿದೆ. ಸಾತನೂರಿನ ಬೋರೇಗೌಡನದೊಡ್ಡ ಬಳಿ ಇರುವ ಹಾಸ್ಟೆಲ್​ನಲ್ಲಿ ಪಾಠ ಕೇಳುವ, ಮಲಗುವ ಕೊಠಡಿ ಎರಡೂ ಒಂದೇ ಆಗಿದೆ.
ಸಿಬ್ಬಂದಿ ಇಲ್ಲ
* ಚಿಕ್ಕಬಳ್ಳಾಪುರದಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಬಹುತೇಕ ವಿದ್ಯಾರ್ಥಿನಿಲಯಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿವೆ. ಬಹುತೇಕ ನಿಲಯಗಳಿಗೆ ಸಾರಿಗೆ ಕೊರತೆ ಕಾಡುತ್ತಿದೆ.
* ಬೆಂ. ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕಿನ ನಂದಗುಡಿ ಕಿತ್ತೂರು ರಾಣಿ ವಸತಿ ಶಾಲೆಯಲ್ಲಿ 8 ಮೇಲ್ವಿಚಾರಕರು, ಕೆಲವೆಡೆ ಅಡುಗೆ ಸಿಬ್ಬಂದಿ ಕೊರತೆ ಇದೆ.
* ವಿಜಯನಗರ ಜಿಲ್ಲೆಯ 24 ವಸತಿ ಶಾಲೆಗಳಲ್ಲಿ ಒಪ್ಪಂದದಂತೆ ಊಟ ಸಿಗುತ್ತಿಲ್ಲ.
* ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಗೋದಾಮಿನಲ್ಲಿ, ಮಾನ್ವಿ ತಾಲೂಕಿನ ರಾಜಲಬಂಡಾ ಗ್ರಾಮದಲ್ಲಿ ಮುರಾರ್ಜಿ ವಸತಿ ಶಾಲೆಯನ್ನು ಟಿನ್ ಶೆಡ್​ನಲ್ಲಿ ನಡೆಯುತ್ತಿದೆ. ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿಗಳು ನೆಲದ ಮೇಲೆ ಮಲಗುವಂತಾಗಿದೆ.
* ಕೊಪ್ಪಳ ಜಿಲ್ಲೆಯ ಒಂದೊಂದು ವಸತಿ ನಿಲಯದಲ್ಲಿ ನಾಲ್ಕು ಶೌಚಗೃಹಗಳಿದ್ದು, 250-300 ವಿದ್ಯಾರ್ಥಿಗಳಿದ್ದಾರೆ.
ನಿರ್ವಹಣೆಗೆ ಹಣ ಬಿಡುಗಡೆ ವಿಳಂಬ
* ಶಿವಮೊಗ್ಗ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮೂರು ವಸತಿ ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ 31 ವಸತಿ ಶಾಲೆಗಳಿಗೆ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಹಣ ಬಿಡುಗಡೆಯಾಗುವುದು ಕೆಲವೊಮ್ಮೆ ವಿಳಂಬವಾಗುತ್ತದೆ.
* ಮಂಡ್ಯ ಜಿಲ್ಲೆಯ 37 ವಸತಿ ಶಾಲೆಗಳಲ್ಲಿ ಕೊಠಡಿಗಳ ಸಮಸ್ಯೆ ಕಾಡುತ್ತಿದೆ. ನಿರ್ವಹಣಾ ವೆಚ್ಚ ಮೂರು ತಿಂಗಳಿಗೊಮ್ಮೆ ಪಾವತಿ
* ಕೊಡಗಿನಲ್ಲಿ 9 ವಸತಿ ಶಾಲೆಗಳ ಪೈಕಿ 2 ಬಾಡಿಗೆ ಕಟ್ಟಡದಲ್ಲಿ.
ಗುಣಮಟ್ಟದ ಆಹಾರ ಕೊರತೆ
* ಬೆಳಗಾವಿ ಜಿಲ್ಲೆಯಲ್ಲಿ 53 ವಸತಿ ಶಾಲೆಗಳಿವೆ. ಕೆಲವು ಬಾಡಿಗೆ ಕಟ್ಟಡ ದಲ್ಲಿದ್ದು, ಮೂಲಸೌಲಭ್ಯ ಸಮಸ್ಯೆ ಎದುರಿಸುತ್ತಿವೆ. ಗುಣಮಟ್ಟದ ಆಹಾರ ಪದಾರ್ಥ, ದಿನಬಳಕೆ ವಸ್ತುಗಳ ಕಿಟ್ ಸರಿಯಾಗಿ ಪೂರೈಕೆಯಾ ಗುತ್ತಿಲ್ಲ. ಕೆಲ ಶಾಲೆಗಳಲ್ಲಿ ಶಿಕ್ಷಕರೇ ವಾರ್ಡನ್ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ 40ಕ್ಕೂ ವಸತಿ ಶಾಲೆಗಳಿಗೆ ಸಾರಿಗೆ ಸೌಲಭ್ಯ ಮರೀಚಿಕೆ.
* ವಿಜಯಪುರ ಜಿಲ್ಲೆ ಇಂಡಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಳೆ ಬಂದರೆ ಸೋರುತ್ತದೆ. ಸಿಂದಗಿ ಹಾಗೂ ಮುದ್ದೇಬಿಹಾಳದ ಅಲ್ಪ ಸಂಖ್ಯಾತ ಶಾಲೆಯಲ್ಲಿ ಮೂಲಸೌಕರ್ಯ ಕೊರತೆ ಇದೆ. ಕಸ್ತೂರ ಬಾ ಗಾಂಧಿ ಬಾಲಿಕೆಯರ ಐದು ವಸತಿ ಶಾಲೆಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ.
* ಬಾಗಲಕೋಟೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಕೆಲವು ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ದೊರೆಯುತ್ತಿಲ್ಲ.
* ದಾವಣಗೆರೆ ಜಿಲ್ಲೆಯ ಸರ್ಕಾರಿ ವಸತಿ ಶಾಲೆಗಳಲ್ಲಿ ಕುಡಿವ ನೀರು, ಕಟ್ಟಡ ಮತ್ತು ನಿರ್ವಹಣೆಯ ಸಮಸ್ಯೆಗಳಿವೆ. ಹರಿಹರ ತಾಲೂಕು ಕೊಂಡಜ್ಜಿಯ ಇಂದಿರಾಗಾಂಧಿ ವಸತಿ ಶಾಲೇಲಿ ಸ್ವಚ್ಛತೆ ಮತ್ತು ನಿರ್ವಹಣೆಯ ಕೊರತೆ ಯಿಂದಾಗಿ ಮಕ್ಕಳಲ್ಲಿ ಮೈ ತುರಿಕೆಯಾಗುವುದು ಬೆಳಕಿಗೆ ಬಂದಿದೆ.
ಜವಳಿ ತರಬೇತಿ ಕೇಂದ್ರದಲ್ಲಿ ಪಾಠಯಾದಗಿರಿ ಜಿಲ್ಲೆಯ ಸರ್ಕಾರಿ ವಸತಿ ಶಾಲೆಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆೆ. ಗುರಮಠಕಲ್ ತಾಲೂಕಿನ ಮೋಟ್ನಳ್ಳಿ ಮುರಾರ್ಜಿ ವಸತಿ ಶಾಲೆಯಲ್ಲಿ ಮೂಲಸೌಲಭ್ಯ ಕೊರತೆಯಿಂದಾಗಿ ಬಂದಳ್ಳಿ ಗ್ರಾಮದ ಜವಳಿ ತರಬೇತಿ ಕೇಂದ್ರದಲ್ಲಿ ನಡೆಯುತ್ತಿದೆ. ಬಾಲಚೇಡ ಗ್ರಾಮದ ಎಪಿಜೆ ಎಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಶುದ್ಧ ಕುಡಿವ ನೀರಿನ ಸಮಸ್ಯೆಯಿಂದಾಗಿ ಮಕ್ಕಳಿಗೆ ಚರ್ಮ ತುರಿಕೆ ಕಾಡುತ್ತಿದೆ.
ಬೀದಿಬದಿ ವ್ಯಾಪಾರಕ್ಕೆ ಅವಕಾಶ ಕೋರಿ ಬಿಬಿಎಂಪಿ ಮುಂದೆ ಪ್ರತಿಭಟನೆ

ಜಾತಿ ಜನಗಣತಿಗೆ ಆರ್​ಎಸ್​ಎಸ್​ ವಿರೋಧ: ‘ಮಹಾ’ನಾಯಕರಿಗೆ ಸಂಘ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + eleven =
Remember me
