ಬೆಂಗಳೂರು:ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ಸೇತುವೆಯಾಗಿ ವಿಜಯವಾಣಿ, ದಿಗ್ವಿಜಯ 24×7 ನ್ಯೂಸ್ ಸಹಯೋಗದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ರಿಯಲ್ ಎಸ್ಟೇಟ್ ಎಕ್ಸ್​ಪೋ’ಗೆ ಶುಕ್ರವಾರ (ಏ.8) ವಿದ್ಯುಕ್ತ ಚಾಲನೆ ಸಿಗಲಿದೆ. ಭಾನುವಾರದವರೆಗೆ (ಏ.10) ಎಕ್ಸ್​ಪೋ ನಡೆಯಲಿದೆ.
ಅಶ್ವಸೂರ್ಯ ರಿಯಾಲಿಟಿಸ್ ಅರ್ಪಿಸುವ ಈ ಎಕ್ಸ್​ಪೋದಲ್ಲಿ ರಾಜ್ಯದ ಪ್ರಮುಖ ರಿಯಾಲ್ಟಿ ಕಂಪನಿಗಳಾದ ಪ್ರಾವಿಡೆಂಟ್, ಎಸ್​ಆರ್​ಎಸ್ ಪ್ರಮೋಟರ್ಸ್, ಅಥರ್ವ ಗ್ರೂಪ್ಸ್, ಡಿಎಸ್ ಮ್ಯಾಕ್ಸ್, ಕೆಎನ್​ಎಸ್ ಇನ್​ಫ್ರಾ, ಕಲ್ಯಾಣ್ ಶೆಲ್ಟರ್ಸ್, ಗುರು ಪುನ್ವಾನಿ, ಆರ್ಯನ್ ಡೆವಲಪರ್ಸ್ ಮತ್ತು ಪ್ರಮೋಟರ್ಸ್, ಶರಣ್ಯ ಫಾರ್ಮ್ಸ್, ಎಂ.ಆರ್. ಪ್ರಾಪರ್ಟಿಸ್, ಆಶೀರ್ವಾದ ಪ್ರಾಪರ್ಟೀಸ್  , ಅಲೈಡ್ ಹ್ಯಾಬಿಟ್ಯಾಟ್ಸ್, ಕರ್ನಾಟಕ ಗೃಹ ಮಂಡಳಿ, ಓಂ ಶ್ರೀ ಇನ್​ಫ್ರಾಸ್ಟ್ರಕ್ಚರ್, ಎ4 ಪ್ರಾಪರ್ಟಿಸ್, ಭಗಿನಿ ಡೆವಲಪರ್ಸ್, ಎಂಎಚ್ ಪ್ರಮೋಟರ್ಸ್, ಎಂಡಿಎಸ್, ಗೃಹಮಿತ್ರ ಡೆವಲಪರ್ಸ್, ಪಿ.ಸಿ. ರಿಯಾಲ್ಟಿ, ಮದರ್ ಅರ್ತ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಮತ್ತು ಎಟಿಝುಡ್ ಪ್ರಾಪರ್ಟಿಸ್ ಸೇರಿ ವಿವಿಧ ರಿಯಾಲ್ಟಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿವೆ.
ಕನಸು ನನಸಾಗಿಸಿಕೊಳ್ಳಿಜೀವನದಲ್ಲಿ ಸ್ವಂತ ಮನೆ ಹೊಂದಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಕೋವಿಡ್ ಬಳಿಕ ಮನೆಯ ಮಹತ್ವ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಆಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಸುತ್ತಮುತ್ತ ಕೈಗೆಟಕುವ ದರದಲ್ಲಿ ನಿವೇಶನ, ವಿಲ್ಲಾ, ಅಪಾರ್ಟ್‌ಮೆಂಟ್ ಹಾಗೂ ಫಾರ್ಮ್ ಹೌಸ್​ಗಳನ್ನು ಖರೀದಿಸಿ ತಮ್ಮ ಕನಸುಗಳನ್ನು ನನಸಾಗಿಸುವ ಸುವರ್ಣಾವಕಾಶ ಸಿಕ್ಕಿದೆ. ಬಿಡಿಎ ಹಾಗೂ ಬಿಎಂಆರ್​ಡಿಎ ಸೈಟ್​ಗಳು ಲಭ್ಯವಿದೆ. ಆಕರ್ಷಕ ಕೊಡುಗೆಗಳು ಸಿಗಲಿವೆ. ಆದ್ದರಿಂದ ಇಂತಹ ಒಳ್ಳೆಯ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬಹುದು.
ಶಾಸಕ ಗರುಡಾಚಾರ್ ಚಾಲನೆಶುಕ್ರವಾರ ಮಧ್ಯಾಹ್ನ 12.30ಕ್ಕೆ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಶಾಸಕ ಉದಯ್ ಬಿ. ಗರುಡಾಚಾರ್ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಟಿ ಪ್ರಿಯಾಂಕಾ ತಿಮ್ಮೇಶ್, ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಭಾಗಿಯಾಗಲಿದ್ದಾರೆ.
ಉಚಿತ ಪ್ರವೇಶಸಾರ್ವಜನಿಕರಿಗೆ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಎಕ್ಸ್​ಪೋಗೆ ಉಚಿತ ಪ್ರವೇಶ ಇರಲಿದೆ.
ಬೃಹತ್ ವೇದಿಕೆಕಾಲೇಜು ಮೈದಾನದಲ್ಲಿ ರಿಯಾಲ್ಟಿ ಮೇಳಕ್ಕೆ ಬೃಹತ್ ವೇದಿಕೆ ನಿರ್ವಿುಸಲಾಗಿದೆ. ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಆಕರ್ಷಕ ಕಮಾನು ಗ್ರಾಹಕರನ್ನು ಸ್ವಾಗತಿಸಲಿದೆ. ಸ್ಟಾಲ್​ಗಳ ಪ್ರವೇಶದಲ್ಲಿ ಸುಂದರವಾದ ಕಟೌಟ್ ನಿರ್ಮಾಣವಾಗಿದೆ. ಎಕ್ಸ್​ಪೋಗೆ ಉಚಿತ ಪ್ರವೇಶ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರು ಹಾಗೂ ಇತರ ವಾಹನಗಳಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲಿದೆ. ಒಂದೇ ಸೂರಿನಡಿ ಗ್ರಾಹಕರು ರಿಯಾಲ್ಟಿ ಕ್ಷೇತ್ರದ ವಿವಿಧ ಕಂಪನಿಗಳ ನಿವೇಶನ, ಅಪಾರ್ಟ್‌ಮೆಂಟ್, ವಿಲ್ಲಾ, ಫಾರ್ಮ್ ಹೌಸ್ ಹಾಗೂ ಫಾರ್ಮ್ ಪ್ಲಾಟ್ ಯೋಜನೆಗಳ ಮಾಹಿತಿ ಪಡೆಯಬಹುದು. 3 ದಿನ ನಡೆಯುವ ಈ ಮೇಳದಲ್ಲಿ 20-25 ಸಾವಿರ ಗ್ರಾಹಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಮದರ್ ಅರ್ತ್ ಬಿಲ್ಡರ್ಸ್ ಆಂಡ್ ಡೆವಲಪರ್ರ್ಸ್ ವತಿಯಿಂದ ಚನ್ನಪಟ್ಟಣ ಬಳಿ 30 ಎಕರೆಯಲ್ಲಿ ಫಾರ್ಮ್ ಲ್ಯಾಂಡ್ ಅಭಿವೃದ್ಧಿಪಡಿಸಲಾಗಿದೆ. 3ನೇ ಪ್ರಾಜೆಕ್ಟ್ ಇದಾಗಿದೆ. ಪ್ರತಿ ಚದರ ಅಡಿಗೆ 425 ರೂ. ನಿಗದಿಪಡಿಸಲಾಗಿದೆ. ರಿಯಲ್ ಎಸ್ಟೇಟ್ ಎಕ್ಸ್​ಪೋ ಪ್ರಯುಕ್ತ ಸ್ಥಳದಲ್ಲಿ ಬುಕಿಂಗ್ ಮಾಡಿದವರಿಗೆ ಉಚಿತವಾಗಿ ನೋಂದಣಿ ಮಾಡಿಕೊಡಲಾಗುವುದು. ಶೂನ್ಯ ಬಡ್ಡಿದರದಲ್ಲಿ ನಾವೇ ಸಾಲ ನೀಡಲಿದ್ದೇವೆ.
| ಬಿ. ಚಂದ್ರಪ್ಪ ಮದರ್ ಅರ್ತ್ ಬಿಲ್ಡರ್ಸ್ ಆಂಡ್ ಡೆವಲಪರ್ರ್ಸ್​ನ ಎಂ.ಡಿ.
2011ರಲ್ಲಿ ಆರಂಭವಾಗಿರುವ ಗೃಹ ಮಿತ್ರ ಕನ್​ಸ್ಟ್ರಕ್ಷನ್ ಮೊದಲ ಪ್ರಾಜೆಕ್ಟ್ ಅನ್ನು ಕೆಂಗೇರಿಯಲ್ಲಿ ಮೂರು ಎಕರೆಯಲ್ಲಿ 300 ಅಪಾರ್ಟ್​ವೆುಂಟ್​ಗಳನ್ನು ನಿರ್ವಿುಸಲಾಗಿದೆ. ಈಗ ಮತ್ತೆ ಕೆಂಗೇರಿಯಲ್ಲಿ ಜಿಎಂಸಿ-1 ಪ್ರಾಜೆಕ್ಟ್ ಅನ್ನು 2 ಎಕರೆಯಲ್ಲಿ ಆರಂಭಿಸಿದ್ದು, 180 ಅಪಾರ್ಟ್ ಮೆಂಟ್​ಗಳನ್ನು ನಿರ್ವಿುಸಲಾಗಿದೆ. ಇದಕ್ಕೆ ರೇರಾ ಅನುಮೋದನೆ ಸಿಕ್ಕಿದೆ. 2ಬಿಎಚ್​ಕೆ ಮನೆಗೆ 45 ಲಕ್ಷ ರೂ.ನಿಂದ ಆರಂಭವಾಗಲಿದೆ. ಎಕ್ಸ್​ಪೋ ದಲ್ಲಿ ಬುಕಿಂಗ್ ಮಾಡಿದವರಿಗೆ ಡಿಸ್ಕೌಂಟ್ ಸಿಗಲಿದೆ.
| ವಿ. ದುರ್ಗ ಚಂದ್ರು, ಗೃಹಮಿತ್ರ ಕನ್​ಸ್ಟ್ರಕ್ಷನ್ ಕಂಪನಿ ಕಾರ್ಯಾಚರಣೆ ಮುಖ್ಯಸ್ಥ
ಎಂಆರ್ ಪ್ರಾಪರ್ಟಿ ವತಿಯಿಂದ ಸದ್ಯ ಮೂರು ಲೇಔಟ್​ಗಳನ್ನು ಅಭಿವೃದ್ಧಿಪಡಿಸಲಾಗಿದೆ. ನೆಲಮಂಗಲ- ದೊಡ್ಡಬಳ್ಳಾಪುರ ರಸ್ತೆಯಲ್ಲಿ ಮೊದಲನೇ ಲೇಔಟ್ ನಿರ್ವಿುಸಲಾಗಿದ್ದು, ಪ್ರತಿ ಚದರ ಅಡಿಗೆ 1,800 ರೂ. ನಿಗದಿಪಡಿಸಲಾಗಿದೆ. ನೆಲಮಂಗಲ ರೈಲು ನಿಲ್ದಾಣ ಬಳಿ 2ನೇ ಲೇಔಟ್ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಚದರ ಅಡಿಗೆ 1,500 ರೂ.ಗೆ ನೀಡಲಾಗುತ್ತಿದೆ. ಅದೇ ರೀತಿ, ಕುಣಿಗಲ್ ಬೈಪಾಸ್ ರಸ್ತೆ ಸಮೀಪದಲ್ಲಿ 3ನೇ ಲೇಔಟ್ ಅಭಿವೃದ್ಧಿಪಡಿಸಲಾಗಿದೆ. ರಿಯಲ್ ಎಸ್ಟೇಟ್ ಎಕ್ಸ್​ಪೋದಲ್ಲಿ ಸ್ಪಾಟ್ ಬುಕಿಂಗ್ ಮಾಡಿದವರಿಗೆ ಉಚಿತವಾಗಿ ಎಲೆಕ್ಟ್ರಿಕ್ ಬೈಕ್ ಅನ್ನು ಕೊಡುಗೆಯಾಗಿ ನೀಡಲಾಗುತ್ತದೆ.
| ಆರ್.ಅಶೋಕ್, ಎಂಆರ್ ಪ್ರಾಪರ್ಟಿ ಎಂ.ಡಿ.
2010ರಲ್ಲಿ ಆರಂಭವಾದ ಆಶೀರ್ವಾದ ಡೆವಲಪರ್ಸ್ ಹಲವು ಪ್ರಾಜೆಕ್ಟ್ ಆರಂಭಿಸಿದ್ದೇವೆ. ಮೈಸೂರು ಮುಖ್ಯ ರಸ್ತೆಯ ಕೆಂಗೇರಿ ಸಮೀಪ ಒಂದು ಲೇಔಟ್, ದೊಡ್ಡ ಅಲದ ಮರ ಬಳಿ 2 ಲೇಔಟ್ ಹಾಗೂ ಗಣಪತಿಹಳ್ಳಿ ಹತ್ತಿರ ಇನ್ನೊಂದು ಲೇಔಟ್ ಅಭಿವೃದ್ಧಿಪಡಿಸಲಾಗಿದೆ. 30×40, 40×60, 30×50 ಸೇರಿ ಎಲ್ಲ ಅಳತೆಯ ನಿವೇಶನಗಳು ಲಭ್ಯವಿದೆ. ಎಕ್ಸ್​ಪೋದಲ್ಲಿ ನಿವೇಶನ ಬುಕಿಂಗ್ ಮಾಡಿದವರಿಗೆ 10 ಸಾವಿರ ರೂ.ವರೆಗೆ ರಿಯಾಯಿತಿ ಸಿಗಲಿದೆ.
| ಟಿ.ರವಿಕುಮಾರ್, ಆಶೀರ್ವಾದ ಡೆವಲಪರ್ಸ್ ಎಂ.ಡಿ.
ವಿಜಯನಗರದಲ್ಲಿ ಎಸಿ ಸ್ಫೋಟ: ಗಂಡ-ಹೆಂಡತಿ, ಇಬ್ಬರು ಮಕ್ಕಳು ಮಲಗಿದ್ದಲ್ಲೇ ದುರಂತ ಸಾವು

ಸುಪ್ರೀಂಕೋರ್ಟ್​ನಲ್ಲಿ ಪಾಕ್​ ಪ್ರಧಾನಿಗೆ ಭಾರೀ ಮುಖಭಂಗ: ನಾಳೆಯೇ ಇಮ್ರಾನ್​ ಸರ್ಕಾರದ ಭವಿಷ್ಯ ನಿರ್ಧಾರ

ಪೊಲೀಸ್​ ತಪಾಸಣೆ ವೇಳೆ ಓಡಿ ಹೋಗಲು ಯತ್ನಿಸಿ ರೈಲಿಗೆ ಸಿಲುಕಿ ರೌಡಿಶೀಟರ್ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 6 =
Remember me
