ಬೆಂಗಳೂರು:ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ವತಿಯಿಂದ ಹಮ್ಮಿಕೊಂಡಿದ್ದ ರಿಯಲ್​ ಎಸ್ಟೇಟ್ ಎಕ್ಸ್​ಪೋಗೆ ಭಾನುವಾರ ಸಂಭ್ರಮದ ತೆರೆಬಿದ್ದಿತು.
ಬೆಳಗ್ಗೆಯಿಂದಲೂ ನಿರಂತರವಾಗಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಗ್ರಾಹಕರು ತಮ್ಮ ಕನಸಿನ ನಿವೇಶನ, ಫ್ಲಾ್ಯಟ್, ವಿಲ್ಲಾ, ಫಾಮರ್್​ಹೌಸ್​ಗಳನ್ನು ಆಯ್ದುಕೊಂಡರು. ಬಹುತೇಕ ಬಿಲ್ಡರ್​ಗಳು ಅತ್ಯಾಕರ್ಷಕ ರಿಯಾಯಿತಿ ಆಫರ್​ಗಳನ್ನು ಇರಿಸಿದ್ದರಿಂದ ನಿವೇಶನ ಖರೀದಿಸುವುದರೊಂದಿಗೆ ಹಲವು ಲಾಭಗಳನ್ನೂ ಗ್ರಾಹಕರು ಪಡೆದು ನಗೆ ಬೀರಿದರು. ನೂರಾರು ಮಂದಿ ಸ್ಥಳದಲ್ಲಿಯೇ ನಿವೇಶನಗಳನ್ನು ನೋಂದಾಯಿಸಿಕೊಂಡರು. ಮಳಿಗೆಗಳಲ್ಲಿ ಮೊದಲೆರಡು ದಿನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ನಿವೇಶನ ಕೊಳ್ಳಲು ಮುಗಿಬೀಳುತ್ತಿದ್ದ ದೃಶ್ಯ ಕಂಡುಬಂತು.
ವಾಸಕ್ಕೆ ಸಿದ್ಧವಾಗಿರುವ ಹಾಗೂ ಹೂಡಿಕೆಗಾಗಿ ನಿವೇಶನ ಹುಡುಕು ವವರ ಸಂಖ್ಯೆ ಅಧಿಕವಾಗಿತ್ತು. ನಿವೇಶನ, ಫ್ಲಾ್ಯಟ್, ವಿಲ್ಲಾ ಖರೀದಿಗೆ ಮುಂದಾದ ಗ್ರಾಹಕರನ್ನು ನೇರವಾಗಿ ಆ ಪ್ರದೇಶಕ್ಕೆ ಕರೆದೊಯ್ದ ಬಿಲ್ಡರ್​ಗಳು ಅಲ್ಲಿನ ಸೌಲಭ್ಯಗಳ ಬಗ್ಗೆ ವಿವರಿಸಿದರು. ಅನೇಕ ಗ್ರಾಹಕರು ತಾವು ಖರೀದಿಸಲಿಚ್ಛಿಸಿದ ನಿವೇಶನ ವೀಕ್ಷಿಸಲು ಕುಟುಂಬದ ಸದಸ್ಯರೊಂದಿಗೆ ತೆರಳಿದರು. ಮುಂದಿನ ಎಕ್ಸ್​ಪೋ ಯಾವಾಗ ಎಂಬ ಕುತೂಹಲವೂ ಮನೆ ಮಾಡಿತ್ತು. ಕಡಿಮೆ ಬೆಲೆಯಲ್ಲಿ ಹೆಚ್ಚು ಗುಣಮಟ್ಟವಿದ್ದ ಪ್ರಾಜೆಕ್ಟ್​ಗಳಿಗೆ ಆದ್ಯತೆ ದೊರೆಯಿತು. ಎಕ್ಸ್​ಪೋ ಮುಕ್ತಾಯಗೊಳ್ಳುವ ಸಮಯದವರೆಗೂ ಜನರ ಆಗಮನ ನಿರಂತರವಾಗಿತ್ತು.
ಮೂರು ದಿನ ನಡೆದ ಎಕ್ಸ್​ಪೋದಲ್ಲಿ ಭರ್ಜರಿ ವ್ಯಾಪಾರವಾದ ಖುಷಿಯಲ್ಲಿ ರಿಯಲ್​ಎಸ್ಟೇಟ್ ಉದ್ಯಮಿಗಳಿದ್ದರು. 50ಕ್ಕೂ ಅಧಿಕ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿಗಳಿಂದ ನೂರಾರು ಪ್ರಾಜೆಕ್ಟ್​ಗಳನ್ನು ಪ್ರದರ್ಶಿಸಲಾಗಿತ್ತು. ಹೊಸದಾಗಿ ಘೋಷಣೆಗೊಂಡಿದ್ದ ಹಲವು ಪ್ರಾಜೆಕ್ಟ್​ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ನೂರಾರು ನಿವೇಶನ ಮಾರಾಟವಾಗುವುದಕ್ಕೂ ಈ ಬಾರಿಯ ಎಕ್ಸ್​ಪೋ ಸಾಕ್ಷಿಯಾಯಿತು. ಎಕ್ಸ್​ಪೋ ದಲ್ಲಿ ತೆರೆದಿದ್ದ ಬ್ಯಾಂಕ್​ಗಳ ಮಳಿಗೆಗಳಿಗೂ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಹಲವಾರು ಜನ ಸಾಲ ಪಡೆಯುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಎಕ್ಸ್​ಪೋಗೆ ಭೇಟಿ ನೀಡಿದವರಲ್ಲಿ ಬಹುಪಾಲು ಜನ ನಿವೇಶನ ಖರೀದಿಸಿದ್ದಾರೆ. ಇನ್ನು, ಕೆಲವರು ನಿವೇಶನ ಹಾಗೂ ಫ್ಲಾ್ಯಟ್​ಗಳನ್ನು ವೀಕ್ಷಿಸಿ ಖರೀದಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಎಲ್ಲ ವರ್ಗದವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಕೇವಲ ಶ್ರೀಮಂತ ವರ್ಗಕ್ಕೆ ಮಾತ್ರ ಸೀಮಿತವಾಗದೆ ಮಧ್ಯಮ ವರ್ಗದವರಿಗೂ ಕೈಗೆಟುಕುವ ದರದಲ್ಲಿ ಫ್ಲಾ್ಯಟ್, ನಿವೇಶನಗಳು ಲಭ್ಯವಿರುವುದನ್ನು ಮನಕಂಡು ಗ್ರಾಹಕರು ಸಂತಸಪಟ್ಟರು. ಕಳೆದ 2 ದಿನಗಳಲ್ಲಿ ಎಕ್ಸ್​ಪೋಗೆ ಭೇಟಿ ನೀಡಿದ್ದ ಬಹುಪಾಲು ಜನ ಭಾನುವಾರ ಮತ್ತೊಮ್ಮೆ ಭೇಟಿ ನೀಡಿ ತಮ್ಮ ಆಯ್ಕೆಗಳನ್ನು ಅಂತಿಮಗೊಳಿಸಿದರು. ಸಂಜೆ ಜನ ಸಂದಣಿ ಹೆಚ್ಚಾಗಿದ್ದುದರಿಂದ ಹೆಚ್ಚಿನ ಸಮಯದವರೆಗೆ ಅವಕಾಶ ಕಲ್ಪಿಸಲಾಗಿತ್ತು.
ಹೆಚ್ಚಿನ ಆಸಕ್ತಿ ತೋರಿದ ನಿವೃತ್ತ ನೌಕರರು:ನಿವೃತ್ತ ನೌಕರರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಗಮನಾರ್ಹ. ತಾವು ಸೇವೆಯಲ್ಲಿದ್ದಾಗ ಉಳಿಸಿದ ಹಣ ನಿವೃತ್ತಿ ನಂತರ ಸಿಕ್ಕಿದ್ದು, ನಿವೇಶನ ಅಥವಾ ಮನೆ ಖರೀದಿ ಮಾಡಿ ಹೂಡಿಕೆ ಜತೆಗೆ ಸುರಕ್ಷತೆಯನ್ನು ಬಯಸಿದ್ದರು. ವಿವಿಧ ರಿಯಲ್​ಎಸ್ಟೇಟ್ ಕಂಪನಿಗಳಿಗೆ ತೆರಳುವುದಕ್ಕಿಂತ, ಒಂದೇ ಸೂರಿನಲ್ಲಿ ಎಲ್ಲ ಸಂಸ್ಥೆಗಳ ಯೋಜನೆಗಳು, ಅದೂ ಅತ್ಯಾಕರ್ಷಕ ರಿಯಾಯಿತಿಯೊಂದಿಗೆ ದೊರಕುತ್ತಿರುವುದು ಸಂತಸ ಮೂಡಿಸಿದೆ ಎನ್ನುವುದು ಹಿರಿಯ ನಾಗರಿಕರ ಅಭಿಮತವಾಗಿತ್ತು.
ಸೈಟ್, ಮನೆ, ವಿಲ್ಲಾ ಮತ್ತು ಕೃಷಿಭೂಮಿ ಬಗ್ಗೆ ಮಾಹಿತಿ:ಭಾನುವಾರ ರಜಾದಿನವಾಗಿದ್ದರಿಂದ ಸಾವಿರಾರು ಗ್ರಾಹಕರು ಕುಟುಂಬಸಮೇತ ಬಂದು ತಮಗೆ ಇಷ್ಟವಾದ, ಹೂಡಿಕೆಗೆ ಯೋಗ್ಯವಾದ, ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಬಲ್ಲ ನಿವೇಶನ, ಮನೆ, ವಿಲ್ಲಾ ಮತ್ತು ಫಾಮ್ರ್ ಹೌಸ್​ಗಳ ಬಗ್ಗೆ ಮಾಹಿತಿ ಪಡೆದು ಖರೀದಿಗೆ ಮುಂದಾದರು. ಹೀಗಾಗಿ ಕಳೆದೆರಡು ದಿನಕ್ಕಿಂತ ಹೆಚ್ಚಿನ ಜನರು ಭೇಟಿ ನೀಡಿದರು. ಮಧ್ಯಮ ವರ್ಗಕ್ಕೆ ಅನುಗುಣವಾಗಿ ಬ್ಯಾಂಕ್​ನಿಂದ ಸಾಲಸೌಲಭ್ಯ ಒದಗಿಸುವ ಜತೆಯಲ್ಲಿ ಪ್ರತಿಯೊಬ್ಬರಿಗೂ ಸೂರಿನ ಅವಶ್ಯಕತೆ ಜಿದೆ ಎಂಬುದನ್ನು ರಿಯಲ್ ಎಸ್ಟೇಟ್ ಎಕ್ಸ್​ಪೋ ಮೂಲಕ ಮನವರಿಕೆ ಮಾಡುವ ಕೆಲಸದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 24 ್ಡ ನ್ಯೂಸ್ ಸಫಲವಾಗಿದೆ ಎಂಬುದು ಎಕ್ಸ್​ಪೋಗೆ ಭೇಟಿ ನೀಡಿದ ಗ್ರಾಹಕರ ಅಭಿಪ್ರಾಯವಾಗಿತ್ತು.
ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಚಾನೆಲ್​ನಿಂದ ಹಮ್ಮಿಕೊಂಡಿದ್ದ ಎಕ್ಸ್​ಪೋಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರಿಯಲ್ ಎಸ್ಟೇಟ್ ಎಕ್ಸ್​ಫೋ ಆಯೋಜನೆ ಮಾಡಿ ಒಳ್ಳೆಯ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಹಲವು ಕಾರ್ಯಕ್ರಮ ಆಯೋಜಿಸಬೇಕು ಎಂಬುದು ಗ್ರಾಹಕರ ಅಭಿಪ್ರಾಯವಾಗಿತ್ತು.
ಬಂಗಾರದ ನಾಣ್ಯ ಗೆದ್ದು ಬೀಗಿದರು:ಎಕ್ಸ್​ಪೋಗೆ ಬಂದ ಗ್ರಾಹಕರಿಗಾಗಿ ಬೆನಕ ಗೋಲ್ಡ್ ಕಂಪನಿ ಲಕ್ಕಿ ಡ್ರಾ ಆಯೋಜಿಸಿತ್ತು. ಭಾನುವಾರ ಶ್ರೀನಿವಾಸ್ ಹಾಗೂ ಜಿ. ಶರಣ್ ಎಂಬುವರು ಲಕ್ಕಿ ಡ್ರಾದಲ್ಲಿ ಜಯಶಾಲಿಯಾಗಿದ್ದು, ತಲಾ 2 ಗ್ರಾಂ ಬಂಗಾರದ ನಾಣ್ಯವನ್ನು ಪಡೆದರು.
ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಭಾನುವಾರ ಭೇಟಿ ನೀಡಿದ ಸಚಿವ ಗೋಪಾಲಯ್ಯ ಪ್ರತಿ ಮಳಿಗೆಗಳಿಗೂ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿದರು. ಜತೆಗೆ ಬಿಲ್ಡರ್​ಗಳು, ಗ್ರಾಹಕರೊಂದಿಗೆ ಮಾತುಕತೆ ನಡೆಸಿ ಗ್ರಾಹಕರಿಗೆ ಉತ್ತೇಜನ ನೀಡಿದರು. ಬೆಂಗಳೂರು ಸುತ್ತಮುತ್ತ ನಿವೇಶನ, ಮನೆ ಲಭ್ಯವಿರುವ ಬಗ್ಗೆ ಎಕ್ಸ್​ಪೋದಲ್ಲಿ ಒಂದೇ ಸೂರಿನಡಿ ಸಾರ್ವಜನಿಕರಿಗೆ ಮಾಹಿತಿ ಸಿಗುತ್ತಿರುವುದು ಅನುಕೂಲವಾಗಿದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಒಂದು ಸೂರಿನ ಅವಶ್ಯಕತೆಯಿದ್ದು, ಪ್ರತಿವರ್ಷವೂ ಇಂತಹ ಎಕ್ಸ್​ಪೋ ಕಾರ್ಯಕ್ರಮ ಮಾಡಿದರೆ ಉತ್ತಮ. ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಗೋಪಾಲಯ್ಯ ತಿಳಿಸಿದರು.


ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

ಸ್ವಾಮೀಜಿ ಕಾರು ಅಪಘಾತ, ಚಾಲಕ ಸ್ಥಳದಲ್ಲೇ ಸಾವು; ಶ್ರೀಗಳು ಆಸ್ಪತ್ರೆಗೆ ದಾಖಲು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 15 =
Remember me
