| ಬೇಲೂರು ಹರೀಶ ಬೆಂಗಳೂರು
ಕರೊನಾ ಲಾಕ್​ಡೌನ್ ತೆರವಿನ ಬಳಿಕ ಎಲ್ಲ ಕ್ಷೇತ್ರಗಳಲ್ಲಿ ಚಟುವಟಿಕೆ, ವಹಿವಾಟು ಮತ್ತೆ ಗರಿಗೆದರಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರ ಕೂಡ ಪ್ರಗತಿಯತ್ತ ಸಾಗುತ್ತಿದೆ. ಕರೊನಾ ನಡುವೆಯೇ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾಕಷ್ಟು ವಹಿವಾಟು ನಡೆದಿದ್ದು, ಮುಂಬರುವ ದಿನಗಳಲ್ಲಿ ಆಸ್ತಿ ಖರೀದಿ ಭರಾಟೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಆಸ್ತಿಗಳ ಮೇಲೆ ಹೂಡಿಕೆ ಮಾಡಲು ಇದು ಸಕಾಲವಾಗಿದೆ.
ಕೆಲವರು ನಿವೇಶನ ಖರೀದಿಸಿ ಮನೆ ಕಟ್ಟಲು ಮುಂದಾದರೆ ಇನ್ನೂ ಕೆಲವರು ಅಪಾರ್ಟ್​ವೆುಂಟ್​ನ ಫ್ಲ್ಯಾಟ್​ಗಳ ಖರೀದಿಗೆ ಆಸಕ್ತಿ ತೋರುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೋವಿಡ್​ನಿಂದಾಗಿ ಕೆಲ ಗ್ರಾಹಕರು ಸಿದ್ಧ ಮನೆಗಳನ್ನು ಖರೀದಿಗೆ ಹೆಚ್ಚು ಒಲವು ತೋರುತ್ತಿದ್ದಾರೆ. ನಿರ್ಮಾಣ ಹಂತದ ಮನೆಗಳನ್ನು ಆಯ್ಕೆ ಮಾಡಿಕೊಂಡರೆ ಹೊಸ ಮನೆಗೆ ಹೋಗಲು ಕೆಲ ವರ್ಷಗಳು ಬೇಕಾಗುತ್ತದೆ. ಆದ್ದರಿಂದ, ಸಿದ್ಧವಾಗಿರುವ ಮನೆಗಳ ಖರೀದಿಸಲು ಸೂಕ್ತವೆಂಬ ಭಾವನೆ ಗ್ರಾಹಕರ ಮನಸ್ಸಿನಲ್ಲಿದೆ. ಹೆಚ್ಚಿನ ಮಂದಿ ಇದನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ಮನೆಯ ಬಗ್ಗೆ ಹೆಚ್ಚು ಪ್ರಾಮುಖ್ಯತೆ ಬಂದಿರುವ ಹಿನ್ನೆಲೆಯಲ್ಲಿ ಸಿದ್ಧ ಮನೆ (ರೆಡಿ ಟು ಮೂವ್) ಖರೀದಿಸಲು ಗ್ರಾಹಕರು ಮುಂದೆ ಬಂದಿರುವುದು ಆಶಾದಾಯಕ ಬೆಳವಣಿಗೆ ಎನ್ನುತ್ತಾರೆ ಡೆವಲಪರ್​ಗಳು ಹಾಗೂ ಬಿಲ್ಡರ್​ಗಳು.
ಆಶಾದಾಯಕ ಬೆಳವಣಿಗೆ:ಬಹುತೇಕ ಗ್ರಾಹಕರು ಶೇ.50 ಹಣವನ್ನು ಆಸ್ತಿಗಳ ಮೇಲೆ ಬಂಡವಾಳ ಹೂಡಿದರೆ ಉಳಿದ ಹಣವನ್ನು ಗೃಹಸಾಲ ಮೇಲೆ ಅವಲಂಬಿತರಾಗಿದ್ದಾರೆ. ಇದೀಗ ಗೃಹಸಾಲ ಬಡ್ಡಿ ದರಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಮನೆಗಳ ಮೇಲೆ ಹೂಡಿಕೆ ಮಾಡಲು ಖರೀದಿದಾರರು ಮುಂದೆ ಬರುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಎಲ್ಲ ಬ್ಯಾಂಕ್​ಗಳಲ್ಲಿ ಗೃಹ ಸಾಲದ ಬಡ್ಡಿದರವೀಗ ಕಡಿಮೆಯಾಗಿದೆ. ಆದ್ದರಿಂದ, ಬ್ಯಾಂಕ್​ಗಳಲ್ಲಿ ಸಾಲ ಪಡೆದು ದೀರ್ಘಕಾಲದವರೆಗೆ ಕಂತಿನ ರೂಪದಲ್ಲಿ ಪಾವತಿಸಿ ತೀರಿಸಲು ಗ್ರಾಹಕರು ಆಲೋಚಿಸಿದ್ದಾರೆ. ಅದನ್ನು ಮನಗಂಡ ಡೆವಲಪರ್​ಗಳು ಹಾಗೂ ಬಿಲ್ಡರ್​ಗಳು ಗ್ರಾಹಕರಿಗೆ ಮನೆ, ನಿವೇಶನ ಹಾಗೂ ಫ್ಲ್ಯಾಟ್​ಗಳ ಮೇಲೆ ರಿಯಾಯಿತಿ ಯೋಜನೆ ಘೋಷಿಸಿದ್ದಾರೆ. ಜತೆಗೆ ಜಿಎಸ್​ಟಿ ವಿನಾಯಿತಿ ಇನ್ನಿತರ ಹೊಸ ಆಫರ್​ಗಳನ್ನೂ ನೀಡುತ್ತಿದ್ದಾರೆ.
ತುಮಕೂರು ರಸ್ತೆ, ಮೈಸೂರು ರಸ್ತೆ, ವೈಟ್​ಫೀಲ್ಡ್, ಹೆಬ್ಬಾಳ ಮತ್ತಿತರ ಹೊರ ಪ್ರದೇಶಗಳಲ್ಲಿ ನಿವೇಶನಗಳಿಗೂ ಬೇಡಿಕೆ ಬರಲಾರಂಭಿಸಿದೆ. ಸ್ವಂತ ಮನೆ ಹೊಂದಬೇಕೆಂಬ ಕನಸು ಸಾಕಾರಗೊಳಿಸಲು ಇದೊಂದು ಉತ್ತಮ ಸಮಯವಾಗಿದೆ. 2 ಹಾಗೂ 3ನೇ ಹಂತದ ನಗರಗಳಲ್ಲಿಯೂ ಖರೀದಿದಾರರ ಸಂಖ್ಯೆಯೂ ಹೆಚ್ಚಾಗಿದೆ.
ಸಹಕಾರ ಹಾಗೂ ನಿರ್ಮಾಣ ಸಂಸ್ಥೆಗಳ ಸಹಯೋಗದಲ್ಲಿ ನಿರ್ವಣವಾಗಿರುವ ನಿವೇಶನ ಮತ್ತು ಗೃಹಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯುವ ಅವಕಾಶವನ್ನು ಖರೀದಿದಾರರು ಬಳಸಿಕೊಳ್ಳಿ. ಖರೀದಿಸುವ ಮುನ್ನ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್​ಡಿಎ) ಹಾಗೂ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಗಳಿಗೆ (ರೇರಾ) ಒಳಪಟ್ಟಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
ಬಡತನದ ವಿರುದ್ಧದ ಹೋರಾಟದ ಫಲ ರಿಸ್ಕ್​​ನಲ್ಲಿದೆ: ಸಚಿವೆ ನಿರ್ಮಲಾ ಸೀತಾರಾಮನ್​ ಕಳವಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − seven =
Remember me
