|ಸತೀಶ್ ಕಂದಗಲ್​ಪುರಬೆಂಗಳೂರು
ಸೂಕ್ತ ನಿರ್ವಹಣೆ ಕೊರತೆ, ದುರಸ್ತಿ ಕಾಮಗಾರಿ ನಿರ್ಲಕ್ಷ್ಯದಂತಹ ವೈಫಲ್ಯಗಳಿಂದಾಗಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿವೆ. ವಾಹನ ಸವಾರರಿಂದ ಟೋಲ್ ಸಂಗ್ರಹಿಸಿದರೂ ಸಮರ್ಪಕ ಸೇವೆ ಒದಗಿಸದ ಪರಿಣಾಮ ಈ ಹೆದ್ದಾರಿಗಳಲ್ಲಿ ಓಡಾಡುವುದೇ ಸಾಹಸವಾಗಿದೆ. ರಸ್ತೆ, ಮೇಲ್ಸೇತುವೆ, ಕೆಳಸೇತುವೆ, ತಿರುವು, ಎತ್ತರಿಸಿದ ಮಾರ್ಗ, ಚಿಹ್ನೆಗಳ ನಿರ್ವಹಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಫಲವಾಗಿರುವುದರಿಂದ ಅಪಘಾತಗಳು ಹೆಚ್ಚುತ್ತಿದೆ. ರಾಜ್ಯಾದ್ಯಂತ ವಿಜಯವಾಣಿ ನಡೆಸಿರುವ ರಿಯಾಲಿಟಿ ಚೆಕ್​ನಲ್ಲಿ ಹೆದ್ದಾರಿಗಳ ದುರವಸ್ಥೆ ಬಯಲಾಗಿದೆ. ರಾಜ್ಯದಲ್ಲಿ 6,647.02 ಕಿ.ಮೀ ವ್ಯಾಪ್ತಿಯ 29 ರಾಷ್ಟ್ರೀಯ ಹೆದ್ದಾರಿಗಳಿವೆ. ಇವುಗಳ ನಿರ್ವಹಣೆಗೆ ಪ್ರತಿ ರಸ್ತೆಗೆ ವಾಹನ ಬಳಕೆದಾರರಿಂದ ಟೋಲ್ ಸಂಗ್ರಹಿಸಲಾಗುತ್ತದೆ. ಪ್ರತಿ 6 ತಿಂಗಳು, ವಾರ್ಷಿಕ, ಮೂರು ವರ್ಷ ಮತ್ತು 5 ವರ್ಷಕ್ಕೆ ಅನುಗುಣವಾಗಿ ರಸ್ತೆಗಳ ಕೆಲವು ಭಾಗಗಳನ್ನು ನಿರ್ವಹಣೆ ಮಾಡ ಬೇಕಿದೆ. ಡಾಂಬರೀಕರಣ, ರಸ್ತೆ ದೀಪ, ರಸ್ತೆಗಳ ತಡೆಗೋಡೆ, ಮೇಲ್ಸೇತುವೆಗಳು, ಕೆಳಸೇತುವೆ, ರಸ್ತೆ ಸೂಚಕಗಳು, ಪಾದಚಾರಿ ಮೇಲ್ಸೇತುವೆ ಗಳ ನಿರ್ವಹಣೆಯಲ್ಲಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿದೆ.
ರಸ್ತೆಗಳ ಗೋಡೆಗಳಲ್ಲಿ ಗಿಡಗಳು ಬೆಳೆದುಕೊಂಡಿವೆ. ರಸ್ತೆ ಉಬ್ಬುಗಳು, ತಿರುವುಗಳು ಹಾಗೂ ಇತರ ಅಪಘಾತ ವಲಯಗಳಲ್ಲಿ ಸೂಚನಾ ಫಲಕ ಅಳವಡಿಸಿಲ್ಲ. ವಾಹನದ ಸಂಚಾರ ಮಿತಿಗಿಂತ ಅತಿವೇಗವಾಗಿ ಚಲಿಸುವುದರ ಪರಿಣಾಮ ಅಪಘಾತಗಳಾಗಿ ಪ್ರಾಣಹಾನಿಯುಂಟಾಗುತ್ತಿದೆ. ತಮಿಳುನಾಡು, ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಛತ್ತೀಸ್​ಗಢ ರಾಜ್ಯಗಳು ಅತಿವೇಗದಿಂದ ಆಗುವ ರಸ್ತೆ ಅಪಘಾತ ಪ್ರಕರಣಗಳಲ್ಲಿ ಟಾಪ್ 10 ಸ್ಥಾನ ಹೊಂದಿವೆ. ದೇಶದಲ್ಲಿ 2020ರಲ್ಲಿ ಒಟ್ಟು 3,54,796 ರಸ್ತೆ ಅಪಘಾತ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 2,15,159 (ಶೇ.61) ಪ್ರಕರಣಗಳು ಅತಿ ವೇಗದ ಕಾರಣದಿಂದಾಗಿವೆ. ಕರ್ನಾಟಕದಲ್ಲಿ 2020ರಲ್ಲಿ 34,178 ಅಪಘಾತ ಸಂಭವಿಸಿದ್ದು, ಇದರಲ್ಲಿ 9,760 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬೆಂಗಳೂರಿನ ಡಾ.ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ 8.5 ಕಿ.ಮೀ ಉದ್ದವಿದೆ. ಅಮೆರಿಕ, ಇಂಗ್ಲೆಂಡ್ ಮತ್ತು ಇತರ ಮುಂದುವರಿದ ರಾಷ್ಟ್ರದಲ್ಲಿ ನಿರ್ವಣವಾಗುವ ‘ಎಕ್ಸ್​ಟ್ರನಲ್ ಪೋಸ್ಟ್ ಟೆನ್ಸಿಂಗ್’ ವಿಶೇಷ ಮಾದರಿಯ ಕೇಬಲ್ ಇಂಟರ್ ಲಾಕಿಂಗ್ ವ್ಯವಸ್ಥೆಯ ಮೇಲ್ಸೇತುವೆಯನ್ನು ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮತ್ತು ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಸೇರಿ 2 ಕಡೆಗಳಲ್ಲಿ ನಿರ್ವಿುಸಲಾಗಿದೆ. ಆದರೆ, ವಾರ್ಷಿಕ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದರ ಫಲವೇ ಪೀಣ್ಯ ಮೇಲ್ಸೇತುವೆ ದೊಡ್ಡ ಪ್ರಮಾಣದಲ್ಲಿ ದುರಸ್ತಿಗೆ ಬರಲು ಕಾರಣವಾಗಿದೆ.
ಹೆದ್ದಾರಿ ಗೋಡೆಗಳಲ್ಲಿ ಮರ:ಗ್ರಾಮೀಣ ಪ್ರದೇಶಗಳಲ್ಲಿ ಹೆದ್ದಾರಿ ಹಾದು ಹೋಗುತ್ತಿದ್ದರೆ ಅಲ್ಲಿ ಮೇಲ್ಸೇತುವೆ ಮಾಡಲಾಗುತ್ತದೆ. ಸೇತುವೆಗೆ ಇಳಿಜಾರಿಗೆ ಮಣ್ಣು ಹಾಕಿ ಇಕ್ಕೆಲಗಳಲ್ಲಿ ಕಾಂಕ್ರೀಟ್ ಜಾಯಿಂಟ್ ಬ್ಲಾಕ್ ಅಳವಡಿಕೆ ಮಾಡಲಾಗಿರುತ್ತದೆ. ಈ ಕಾಂಕ್ರೀಟ್ ಕಲ್ಲುಗಳ ಜೋಡಣೆಯ ನಡುವೆ ಮರ ಗಿಡಗಳು ಬೆಳೆದುಕೊಂಡಿವೆ. ಈ ಮರ-ಗಿಡಗಳ ಮೂಲಕ ಮಳೆಯ ನೀರು ಆಳಕ್ಕೆ ಇಳಿದಲ್ಲಿ ಇಡೀ ರಸ್ತೆಯೇ ಹಾಳಾಗುತ್ತದೆ. ಆದರೆ ಇದನ್ನು ಹೆದ್ದಾರಿ ಪ್ರಾಧಿಕಾರವಾಗಲಿ ಅಥವಾ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿದ ಗುತ್ತಿಗೆ ಸಂಸ್ಥೆಗಳಾಗಲಿ ನಿರ್ವಹಣೆ ಮಾಡುತ್ತಿಲ್ಲ. ಇನ್ನು ರಸ್ತೆ ನಿರ್ವಿುಸಿದ ಗುತ್ತಿಗೆ ಸಂಸ್ಥೆಗಳು ಕಳಪೆ ಕಾಮಗಾರಿ ಮತ್ತು ನಿರ್ವಹಣೆ ನಿರ್ಲಕ್ಷ್ಯ ಮಾಡಿದಲ್ಲಿ ಕಪು್ಪಪಟ್ಟಿಗೆ ಸೇರಿಸಬೇಕು. 2016 ರಿಂದ 2022ರ ಜ.30ರ ಅವಧಿಯಲ್ಲಿ ದೇಶದಲ್ಲಿ ಒಟ್ಟು 63 ಗುತ್ತಿಗೆ ಸಂಸ್ಥೆಗಳನ್ನು ವಿವಿಧ ಅವಧಿಯವರೆಗೆ ಕಪು್ಪಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.
ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ದುರಸ್ತಿ ಕಾರ್ಯದಿಂದ ಸಮಸ್ಯೆಯಾಗಿದೆ. ಶೀಘ್ರ ದುರಸ್ತಿ ಮಾಡಿ ಲಘುವಾಹನಗಳ ಸಂಚಾರಕ್ಕೆ ಸೂಚಿಸಲಾಗಿದೆ. ಕಳಪೆ ಕಾಮಗಾರಿ ನಡೆದಿರುವ ಅನುಮಾನ ವ್ಯಕ್ತವಾಗಿದ್ದು, ಹೊಸದಾಗಿಯೇ ಮೇಲ್ಸೇತುವೆ ನಿರ್ಮಾಣ ಮಾಡಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
551 ಅಪಘಾತ ವಲಯ:ಕೇಂದ್ರ ಸಾರಿಗೆ ಸಚಿವಾಲಯದ 2018-20ರ ಮಾಹಿತಿ ಪ್ರಕಾರ ದೇಶಾದ್ಯಂತ 5,803 ಅಪಘಾತ ವಲಯಗಳಿವೆ (ಬ್ಲಾಕ್ ಸ್ಪಾಟ್). ಈ ಪೈಕಿ ಕರ್ನಾಟಕ ಇಂತಹ 551 ಪ್ರದೇಶ ಹೊಂದಿದ್ದು, 3ನೇ ಸ್ಥಾನದಲ್ಲಿದೆ. ತಮಿಳುನಾಡು (748), ಪಶ್ಚಿಮ ಬಂಗಾಳ (701) ಮೊದಲೆರಡು ಸ್ಥಾನಗಳಲ್ಲಿವೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − 7 =
Remember me
