ಬೆಂಗಳೂರು: ಲಾಕ್​ಡೌನ್ ಆದೇಶದಿಂದ ಲಕ್ಷಾಂತರ ಕೂಲಿ ಕಾರ್ವಿುಕರು, ನಿರ್ಗತಿಕರು ಆಹಾರವಿಲ್ಲದೆ ಬಳಲುವುದನ್ನು ತಪ್ಪಿಸಲು ಇಂದಿರಾ ಕ್ಯಾಂಟೀನ್​ನಿಂದ ನಿತ್ಯ 2.13 ಲಕ್ಷ ಮಂದಿಗೆ ಊಟ ಒದಗಿಸಲಾಗುತ್ತಿದೆ. ಇದರಿಂದ ಜನ ನೆಮ್ಮದಿಯಾಗಿ ಮೂರು ಹೊತ್ತು ಉಚಿತವಾಗಿ ಊಟ ಮಾಡುವಂತಾಗಿದೆ.
ರಾಜ್ಯ ಸರ್ಕಾರ ಮಾ.23 ರಿಂದ ಮಾ.31ರವರೆಗೆ ಲಾಕ್​ಡೌನ್ ಹೇರಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮಾ.25 ರಿಂದ 21 ದಿನ ಲಾಕ್​ಡೌನ್ ಹೇರಿಯಾರೊಬ್ಬರೂ ಮನೆಯಿಂದ ಅನಗತ್ಯವಾಗಿ ಹೊರಬಾರದಂತೆ ನಿಷೇಧ ಹೇರಿತು. ಇದರಿಂದ ಲಕ್ಷಾಂತರ ಕೂಲಿ ಕಾರ್ವಿುಕರು, ಸಾವಿರಾರು ನಿರಾಶ್ರಿತರು, ಭಿಕ್ಷುಕರು ಆಹಾರವಿಲ್ಲದೆ ಹಸಿವಿನಿಂದ ಬಳಲುವ ಸ್ಥಿತಿ ಬಂದಿತ್ತು. ಹಸಿವಿನಿಂದ ಮುಕ್ತಮಾಡಲು ಸರ್ಕಾರ ಇಂದಿರಾ ಕ್ಯಾಂಟೀನ್​ನಿಂದ ಉಚಿತ ಊಟ ವ್ಯವಸ್ಥೆ ಮಾಡಿದೆ. ಹಾಗಾಗಿ ಸಾಮಾನ್ಯ ದಿನಗಳಿಗಿಂತ ಲಾಕ್​ಡೌನ್ ವೇಳೆಯಲ್ಲಿ ಇಂದಿರಾ ಕ್ಯಾಂಟೀನ್​ಗಳು ಹೆಚ್ಚು ಉಪಯುಕ್ತವಾಗಿವೆ.
ಯಾರ್ಯಾರಿಗೆ ಕ್ಯಾಂಟೀನ್ ಊಟ:ಉಚಿತ ಊಟ ಎಂದಾಕ್ಷಣ ಎಲ್ಲರೂ ಊಟಕ್ಕೆ ಬಂದು ನಿಲ್ಲುತ್ತಿಲ್ಲ. ನಿರಾಶ್ರಿತರು, ಬಡವರು, ಕೂಲಿ ಕಾರ್ವಿುಕರು ಇಂದಿರಾ ಕ್ಯಾಂಟೀನ್ ಬಳಿ ಬಂದು ಊಟ ಪಡೆದುಕೊಳ್ಳುತ್ತಿದ್ದಾರೆ. ಲಾಕ್​ಡೌನ್ ಆದೇಶದಿಂದ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 9 ನಿರಾಶ್ರಿತರ ಕೇಂದ್ರಗಳು, ಬೌರಿಂಗ್ ಆಸ್ಪತ್ರೆ ಸೇರಿ ಕೆಲವು ಸರ್ಕಾರಿ ಆಸ್ಪತ್ರೆಗಳು, ತಾತ್ಕಾಲಿಕ ನಿರಾಶ್ರಿತರ ಕೇಂದ್ರಗಳು ಹಾಗೂ ಹಾರ ಸಹಾಯವಾಣಿಗೆ ಕರೆ ಮಾಡಿ ಊಟಕ್ಕೆ ನೆರವಾಗುವಂತೆ ಕರೆ ಮಾಡುವ ಕೂಲಿ ಕಾರ್ವಿುಕರಿಗೆ ಇಂದಿರಾ ಕ್ಯಾಂಟೀನ್​ನಿಂದ ಊಟವನ್ನು ಸರಬರಾಜು ಮಾಡಲಾಗುತ್ತಿದೆ.
ಅನ್ನದ ದೇವಾಲಯ:ಮೂರು ವರ್ಷದ ಹಿಂದೆ ಆಸ್ಪತ್ರೆಗೆ ಸೇರಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದೆ. ಆದರೆ, ದುಡಿದ ಹಣವನ್ನೆಲ್ಲಾ ಚಿಕಿತ್ಸೆಗಾಗಿ ಖರ್ಚು ಮಾಡಿ ಬೀದಿಗೆ ಬಂದಿ ದ್ದೇನೆ. ಒಂದೂವರೆ ವರ್ಷದಿಂದ ಕೆ.ಆರ್. ಮಾರುಕಟ್ಟೆಯಲ್ಲಿ ಸಣ್ಣಪುಟ್ಟ ಕೆಲಸ, ಭಿಕ್ಷಾಟನೆ ಮಾಡುತ್ತಾ ಇಂದಿರಾ ಕ್ಯಾಂಟೀನ್ ಊಟ ಪಡೆಯುತ್ತಿದೆ. ಈಗ ಲಾಕ್​ಡೌನ್​ನಿಂದ 2 ದಿನ ಊಟವಿಲ್ಲದೆ ತೀವ್ರ ತೊಂದರೆಗೆ ಒಳಗಾಗಿದ್ದೆ. ನನ್ನಂಥ ನೂರಾರು ನಿರಾಶ್ರಿತರಿಗೆ ಊಟ, ಉಪಾಹಾರ ನೀಡುವ ಇಂದಿರಾ ಕ್ಯಾಂಟೀನ್ ನಮ್ಮ ಪಾಲಿಗೆ ಅನ್ನ ನೀಡುವ ದೇವಾಲಯ ಆಗಿದೆ ಎಂದು ನಿರಾಶ್ರಿತ ವ್ಯಕ್ತಿ ವೆಂಕಟೇಶ್ ಹೇಳುತ್ತಾರೆ.
2.13 ಲಕ್ಷ ಊಟ ವಿತರಣೆ!:ಇಂದಿರಾ ಕ್ಯಾಂಟೀನ್​ನಲ್ಲಿ ಮಾ.25ರಿಂದ ಉಚಿತ ಊಟ ಆರಂಭವಾದಾಗ 87 ಕ್ಯಾಂಟೀನ್​ಗಳ ಬಳಿ ಒಟ್ಟು 92 ಸಾವಿರ ಊಟಗಳನ್ನು ನೀಡಲಾಯಿತು. ಮಾ. 28ಕ್ಕೆ 160 ಕ್ಯಾಂಟೀನ್​ಗಳ ಬಳಿ 1.75 ಲಕ್ಷ ಊಟಗಳನ್ನು ಆಹಾರ ಪೊಟ್ಟಣಗಳಾಗಿ ಮಾಡಿ ವಿತರಣೆ ಮಾಡಲಾಯಿತು. ಮಾ.30ರಿಂದ ಉಚಿತ ನೀಡುವ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಮೂರು ಅವಧಿಗೆ ಸೇರಿ 2.13 ಲಕ್ಷ ಉಚಿತ ಊಟದ ಪೊಟ್ಟಣ ನೀಡಲಾಗುತ್ತಿದೆ.
ಶಿಸ್ತಿನ ಸಾಲು:ಇಂದಿರಾ ಕ್ಯಾಂಟೀನ್​ನೊಳಗೆ ಯಾರಿಗೂ ಪ್ರವೇಶವಿಲ್ಲ. ಹೊರಭಾಗದಲ್ಲಿ 3 ಅಡಿಗೆ ಒಂದರಂತೆ ಜಾಗ ಗುರುತು ಮಾಡಿದ್ದು, ಆಹಾರ ಪಡೆಯಬಯಸುವ ಎಲ್ಲರನ್ನು ಮಾರ್ಷಲ್​ಗಳು ಅದರಲ್ಲಿ ನಿಲ್ಲಿಸಿ ಊಟದ ಪೊಟ್ಟಣ ವಿತರಿಸುತ್ತಾರೆ. ಬೆಳಗ್ಗೆ 8.30, ಮಧ್ಯಾಹ್ನ 12.30 ಹಾಗೂ ರಾತ್ರಿ 7.30 ಕ್ಕೆ ಊಟ ನೀಡಲಾಗುತ್ತದೆ. ಕರೊನಾ ಸೋಂಕು ಭೀತಿಯಿದ್ದರೂ, ಹಸಿವು ಸರತಿ ಸಾಲಿನಲ್ಲಿ ನಿಲ್ಲುವ ಶಿಸ್ತು ಕಲಿಸಿದೆ.
ವರ್ಕ್​ಶಾಪ್​ನಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದೆ, ಬಂದ ಹಣದಲ್ಲಿ ಊಟ ಮಾಡುತ್ತಿದ್ದೆ. ಆದರೆ, ಈಗ ಕೆಲಸವೂ ಇಲ್ಲ, ಊಟವೂ ಇಲ್ಲ ಎನ್ನುವಂತಾಗಿತ್ತು. ಆದರೆ ಇಂದಿರಾ ಕ್ಯಾಂಟೀನ್ ಉಚಿತ ಊಟದಿಂದ ನಮ್ಮ ಹೊಟ್ಟೆ ತುಂಬುತ್ತಿದೆ. |ಚಂದ್ರಶೇಖರ್
ನಾನು ಮೊದಲು ಇಂದಿರಾ ಕ್ಯಾಂಟೀನ್ ಊಟ ಮಾಡುತ್ತಿರಲಿಲ್ಲ. ಆದರೆ, ಲಾಕ್​ಡೌನ್​ನಿಂದ ಯಾವುದೇ ಹೋಟೆಲ್, ಅಂಗಡಿಗಳು ತೆರೆದಿಲ್ಲ. ಹಾಗಾಗಿ ಕ್ಯಾಂಟೀನ್ ಊಟದ ಮೇಲೆ ಅವಲಂಬಿತನಾಗಿದ್ದೇನೆ. ರುಚಿಯಾದ, ಗುಣಮಟ್ಟದ ಊಟ ಸಿಗುತ್ತಿದೆ.  |ಅನ್ಸರ್ಶಿವಾಜಿನಗರ ನಿವಾಸಿ
ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತೇನೆ. ಈಗ ಮನೆಯಲ್ಲಿ ಕುಟುಂಬ ಸದಸ್ಯರೆಲ್ಲರೂ ಊರಿಗೆ ಹೋಗಿದ್ದಾರೆ. ದುಡಿಮೆ ಇಲ್ಲದೆ ಊಟಕ್ಕೂ ಕಷ್ಟವಾಗಿದೆ. ಈ ವೇಳೆ ಇಂದಿರಾ ಕ್ಯಾಂಟೀನ್ ಊಟ ನನಗೆ ಆಸರೆಯಾಗಿದೆ.   |ರಿಯಾಜ್ ಶರೀಫ್ಆಟೋ ಚಾಲಕ
ಸತೀಶ್ ಕೆ.ಬಳ್ಳಾರಿ
ಉಚಿತ ವೈದ್ಯ ಸಮಾಲೋಚನೆಗಾಗಿ ಕರೆ ಮಾಡಿ ಸಲಹೆ ಪಡೆಯಿರಿ | ಮಲ್ಲೇಶ್ವರದಲ್ಲಿ ಪ್ರಾಯೋಗಿಕ ಜಾರಿ; ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 4 =
Remember me
