| ಹೊಸಹಟ್ಟಿ ಕುಮಾರ ಬೆಂಗಳೂರು
ಕರೊನಾ ವೈರಸ್ ಹಾವಳಿ ರಿಯಾಲ್ಟಿ ಕ್ಷೇತ್ರದ ಮೇಲೆ ಭೀಕರ ಪರಿಣಾಮ ಬೀರಿದೆ. ಲಾಕ್​ಡೌನ್ ವೇಳೆ ಎದುರಾದ ಸಂಕಷ್ಟದಿಂದ ಈ ಕ್ಷೇತ್ರ ಹೊರ ಬರಲು ಇನ್ನೂ ಹಲವು ತಿಂಗಳು ಬೇಕಿವೆ. ದೀಪಾವಳಿ ನಂತರ ಮೊದಲಿನಂತೆ ಆಗಬಹುದು ಎನ್ನುವ ಆಶಾಭಾವನೆ ರಿಯಲ್ ಎಸ್ಟೇಟ್ ತಜ್ಞರಲ್ಲಿ ಮೂಡಿದೆ.
ಲಾಕ್​ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಅಂದಾಜು 750 ಕೋಟಿ ರೂ. ಮೊತ್ತದ ವಸತಿ ಯೋಜನೆಗಳು ಮಾರಾಟವಾಗದೆ ಉಳಿದಿವೆ. ಬೆಂಗಳೂರು ನಗರದಲ್ಲಿ 300 ಕೋಟಿ ರೂ. ಮೊತ್ತದ ಯೋಜನೆಗಳು ಮಾರಾಟವಾಗಿಲ್ಲ. 2019ರಲ್ಲಿ ಶೇ.40 ವಸತಿ ಯೋಜನೆಗಳು ಮಾರಾಟವಾಗಿದ್ದವು. 2020ರಲ್ಲಿ ಶೇ.50-60 ಮಾರಲು ಗುರಿ ಹೊಂದಲಾಗಿತ್ತು. 2020ರ ಮೊದಲ ತ್ರೖೆಮಾಸಿಕದಲ್ಲಿ ಬೆಂಗಳೂರು, ಮೈಸೂರಿನಲ್ಲಿ 1.25 ಲಕ್ಷ ಚದರಡಿ ಜಾಗದ ವಸತಿ ಯೋಜನೆಗಳು ಮಾರಾಟವಾಗಿದ್ದವು. ಲಾಕ್​ಡೌನ್ ಬಳಿಕ ಮಾರಾಟ ಸಂಪೂರ್ಣ ಕುಸಿಯಿತು. ಆನ್​ಲೈನ್​ನಲ್ಲಿ ಮಾರಾಟ ನಡೆಯುತ್ತಿದ್ದು ಹೇಳಿಕೊಳ್ಳುವಂತೆ ಖರೀದಿ ನಡೆಯುತ್ತಿಲ್ಲ. ನೂರು ಮಂದಿಯಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ಆನ್​ಲೈನ್​ನಲ್ಲಿ ಖರೀದಿಗೆ ಮುಂದಾಗಿದ್ದಾರೆ ಎಂದು ಭಾರತೀಯ ರಿಯಲ್ ಎಸ್ಟೇಟ್ ನಿರ್ವಣಗಾರರ ಸಂಘಗಳ ಒಕ್ಕೂಟದ ರಾಜ್ಯ ಘಟಕ (ಕ್ರೆಡಾಯ್ ಕರ್ನಾಟಕ) ತಿಳಿಸಿದೆ.ಇದನ್ನೂ ಓದಿ:Web Exclusive: ಪೊಲೀಸ್ ಠಾಣೆಗಳಿಗೂ ಸಿಕ್ತು ಬಡ್ತಿ!; ರಾಜ್ಯದ 56 ಠಾಣೆಗಳಿಗೆ ಮೇಲ್ದರ್ಜೆ ಭಾಗ್ಯ
ಕೇಂದ್ರ ಸರ್ಕಾರ ರಿಯಾಲ್ಟಿ ಕ್ಷೇತ್ರದ ಮೇಲೆ ವಿಧಿಸುತ್ತಿದ್ದ ಜಿಎಸ್​ಟಿ ದರ ಕಡಿತಗೊಳಿಸಿದ್ದರಿಂದ 2020ರ ಮೊದಲ ತ್ರೖೆಮಾಸಿಕ ಅಂದರೆ ಜನವರಿಯಿಂದ ಮಾರ್ಚ್​ವರೆಗೆ ಉತ್ತಮ ಬೇಡಿಕೆ ವ್ಯಕ್ತವಾಗಿತ್ತು. ಇಡೀ ವರ್ಷ ಇದೇ ಬೇಡಿಕೆ ವ್ಯಕ್ತವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಲಾಕ್​ಡೌನ್​ನಿಂದ ಯೋಜನೆಗಳ ಮಾರಾಟ ಸ್ಥಗಿತಗೊಂಡಿತ್ತು. ಲಾಕ್​ಡೌನ್ ಬಳಿಕ ನಿಧಾನವಾಗಿ ರಿಯಾಲ್ಟಿ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ ಎಂದು ಬೆಂಗಳೂರು ಕ್ರೆಡಾಯ್ ಅಧ್ಯಕ್ಷ ಸುರೇಶ್ ಹರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಕೋವಿಡ್-19 ನಿಯಮ ಸಡಿಲಗೊಳಿಸಿದ್ದರಿಂದ ರಿಯಲ್ ಎಸ್ಟೇಟ್ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿವೆ. ಕಟ್ಟಡ ನಿರ್ಮಾಣ ಕಾಮಗಾರಿ ಸೇರಿ ವಿವಿಧ ಚಟುವಟಿಕೆಗಳು ಆರಂಭವಾಗಿವೆ. ಬೆಂಗಳೂರು, ಮೈಸೂರು, ಮಂಗಳೂರು ಸೇರಿ ವಿವಿಧೆಡೆ ನಿಂತಿದ್ದ 2 ಸಾವಿರ ವಸತಿ ಯೋಜನೆಗಳು ಆರಂಭವಾಗಿವೆ. ಮನೆ, ವಸತಿ ಸಂಕೀರ್ಣ, ಲೇಔಟ್ ಅಭಿವೃದ್ಧಿ, ಬೃಹತ್ ಸಮುಚ್ಚಯಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಖಾಸಗಿ ರಿಯಾಲ್ಟಿ ಕಂಪನಿಗಳೂ ಲೇಔಟ್ ಅಭಿವೃದ್ಧಿ ಕಾಮಗಾರಿ ಆರಂಭಿಸಿವೆ. ರಾಜ್ಯದಲ್ಲಿ ಲಾಕ್​ಡೌನ್ ನಿಯಮ ಬಹುತೇಕ ಸಡಿಲಗೊಂಡಿದ್ದರೂ ಕಾರ್ವಿುಕರು-ಕಟ್ಟಡ ಸಾಮಗ್ರಿಗಳ ಕೊರತೆಯಿಂದ ಶೇ.65 ಕೆಲಸವಷ್ಟೇ ಆರಂಭವಾಗಿದೆ. ಸಂಪೂರ್ಣ ಕೆಲಸ ಆರಂಭವಾಗಬೇಕಾದರೆ ಇನ್ನಷ್ಟು ದಿನಗಳು ಕಾಯಬೇಕಾಗುತ್ತದೆ.
ಕೇಂದ್ರ ಸರ್ಕಾರ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೈಗೊಳ್ಳಬೇಕಾದ ನಿಯಮ ಜಾರಿಗೊಳಿಸಿದ್ದು, ಅದನ್ನು ಜಾರಿಗೆ ತರುವಂತೆ ಕ್ರೆಡಾಯ್ ಎಲ್ಲ ಗುತ್ತಿಗೆದಾರರಿಗೆ ಸೂಚಿಸಿದೆ. ಕಾರ್ವಿುಕರ ಶಿಬಿರ ಇರುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು, ಶುದ್ಧ ಕುಡಿಯುವ ನೀರು ಹಾಗೂ ಕಾರ್ವಿುಕರಿಗೆ ಪೌಷ್ಟಿಕ ಆಹಾರ ಒದಗಿಸುವಂತೆ ಸೂಚನೆ ನೀಡಲಾಗಿದೆ. ಈ ನಿಯಮ ಅನುಸರಿಸಿ ಕಾಮಗಾರಿ ಆರಂಭಿಸುವಂತೆ ಸೂಚಿಸಲಾಗಿದೆ ಎಂದು ಕ್ರೆಡಾಯ್ ತಿಳಿಸಿದೆ.
ಕರೊನಾ ಕುರಿತ ನಿಯಮ ಸಡಿಲಗೊಳಿಸಿದರೂ ಈಗ ರಾಜ್ಯದಲ್ಲಿ ಮಾನ್ಸೂನ್ ಮಳೆ ಸುರಿಯುತ್ತಿರುವುದರಿಂದ ಕಾಮಗಾರಿ ವೇಗ ಪಡೆದಿಲ್ಲ. ದೀಪಾವಳಿ ಬಳಿಕ ಕಾಮಗಾರಿ ವೇಗ ಪಡೆಯಬಹುದು. ಡಿಸೆಂಬರ್​ನಲ್ಲಿ ಶೇ.100 ಕಾಮಗಾರಿ ಆರಂಭಿಸಬಹುದು ಎಂದು ಕ್ರೆಡಾಯ್ ರಾಜ್ಯ ಘಟಕದ ಅಧ್ಯಕ್ಷ ಕಿಶೋರ್ ಜೈನ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಲಾಕ್​ಡೌನ್ ನಿಯಮ ಸಡಿಲಗೊಳಿಸಿದ್ದರೂ ಕಟ್ಟಡ ಕಾರ್ವಿುಕರಿಗೆ ಬೆಂಗಳೂರು, ಮೈಸೂರು, ಮಂಗಳೂರಿನಂಥ ಬೃಹತ್ ನಗರಗಳಲ್ಲಿ ಕೆಲಸ ಸಿಗಬಹುದು. ಸಣ್ಣಪುಟ್ಟ ನಗರಗಳಲ್ಲಿ ಕಾರ್ವಿುಕರಿಗೆ ಕೆಲಸ ಸಿಗುವುದು ಇನ್ನು ಅನುಮಾನ. ಹೀಗಾಗಿ ಇಂಥ ಪ್ರದೇಶದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದು ಕೆಲಸ ನೀಡಬಹುದು ಎಂದು ಕಿಶೋರ್ ಜೈನ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಲಾಕ್​ಡೌನ್ ನಿಯಮ ಸಡಿಲಿಗೊಳಿಸಿದೆ. ವಸತಿ ಯೋಜನೆಗಳ ಮಾರಾಟ ಹೇಳಿಕೊಳ್ಳುವಂತೆ ನಡೆಯುತ್ತಿಲ್ಲ. ಆನ್​ಲೈನ್​ನಲ್ಲಿ ನೂರಕ್ಕೆ ಒಬ್ಬರು ಅಥವಾ ಇಬ್ಬರು ಮಾತ್ರ ಖರೀದಿಸುತ್ತಿದ್ದಾರೆ.
| ಸುರೇಶ್ ಹರಿಕ್ರೆಡಾಯ್ ಬೆಂಗಳೂರು ಅಧ್ಯಕ್ಷ
https://www.vijayavani.net/covid-19-vaccine-possible-by-2021-first-quarter/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 3 =
Remember me
