ಚಿಕ್ಕಬಳ್ಳಾಪುರ:ಬೆಂಗಳೂರಿನ ಮಹಿಳಾ ಟೆಕ್ಕಿ ಆತ್ಮಹತ್ಯೆಗೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಯುವತಿ ಸಾವಿಗೆ ಶರಣಾಗಿದ್ದಾಳೆ ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ನಿಹಾರಿಕ (22) ಮೃತ ದುರ್ದೈವಿ. ಈಕೆ ಧರ್ಮಾವಂರಂ ಸಿವಾಸಿ. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಪಿಜಿಯಲ್ಲಿ ವಾಸವಾಗಿದ್ದಳು. ಜೂ. 24ರಂದು ಬಾಗೇಪಲ್ಲಿಯ ಚಿತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣ ಏನೆಂದು ತಿಳಿದುಬಂದಿರಲಿಲ್ಲ. ಇದೀಗ ಪ್ರೇಮ ವೈಫಲ್ಯವೇ ಕಾರಣ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮಹಿಳೆಯರು DPಯಲ್ಲಿ ಅವರ ಫೋಟೋ ಬಳಸಬಾರದು: ಮಹಿಳಾ ಆಯೋಗದ ಅಧ್ಯಕ್ಷೆ
ಕೆಲಸಕ್ಕೆಂದು ಹೋದವಳು ವಾಪಸ್​ ಪಿಜಿಗೆ ಬಂದಿರಲಿಲ್ಲ. ಇದೀಗ ಆಕೆಯ ವಿಡಿಯೋ ಕಾಲ್ ಬೆಳಕಿಗೆ ಬಂದಿದೆ. ಸಾಯುವ ಮುನ್ನ ಮನೆಯವರಿಗೆ ವಿಡಿಯೋ ಕಾಲ್​ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿಹಾರಿಕ ಹೇಳಿದ್ದಳು. ಬಾಗೇಪಲ್ಲಿಯಲ್ಲಿ ಬಸ್​ನಿಂದ ಇಳಿದು ಚಿತ್ರಾವತಿ ನದಿ ಕಡೆಗೆ ನಡೆದುಕೊಂಡು ಹೋಗಿ ಸಾವಿಗೆ ಶರಣಾಗಿದ್ದಳು.
ನಿಹಾರಿಕಳ ಆತ್ಮಹತ್ಯೆಗೆ ಅಜಯ್ ಎಂಬಾತನೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ತನಿಖೆ ಆರಂಭವಾಗಿದೆ.(ದಿಗ್ವಿಜಯ ನ್ಯೂಸ್​)
ಯಾರಿಗೂ ಭಾರವಾಗಬಾರದೆಂದು 15 ವರ್ಷದ ಹಿಂದೆ ತನ್ನ ಸಮಾಧಿಯನ್ನು ತಾನೇ ತೋಡಿಕೊಂಡಿದ್ದ ವೃದ್ಧ ಸಾವು

ರಥಯಾತ್ರೆ ವೇಳೆ ವಿದ್ಯುತ್​ ಅವಘಡ: ಮಕ್ಕಳಿಬ್ಬರು ಸೇರಿ 7 ಮಂದಿ ಸಾವು, 16 ಮಂದಿಯ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 2 =
Remember me
