|ಎ.ಬಿ. ಶೆಟ್ಟಿ
ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ 23,63,031 ರಸ್ತೆ ಅಪಘಾತಗಳು ಸಂಭವಿಸಿದ್ದು ಅಂದಾಜು 7,47,361 ಸಾವುಗಳು ಸಂಭವಿಸಿವೆ. 2021ರಲ್ಲಿ ದೇಶದಲ್ಲಿ 4,22,669 ಅಪಘಾತಗಳು ಸಂಭವಿಸಿದ್ದು 1.55 ಲಕ್ಷ ಜನರು ಅಸುನೀಗಿದ್ದಾರೆ. ಕರ್ನಾಟಕದಲ್ಲಿ 2021ರಲ್ಲಿ 34,647 ಅಪಘಾತಗಳು ಅಗಿದ್ದು 40,754 ಜನರು ಗಾಯಗೊಂಡಿದ್ದು 10,038 ಜನರು ಸತ್ತಿದ್ದಾರೆ. ರಸ್ತೆ ಅಪಘಾತಗಳ ನಿಟ್ಟಿನಲ್ಲಿ ತಮಿಳುನಾಡು ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕವು ಮೂರನೇ ಸ್ಥಾನದಲ್ಲಿ ಇದೆ. 2020ರಲ್ಲಿ ತಮಿಳುನಾಡಿನಲ್ಲಿ 45000ಕ್ಕೂ ಅಧಿಕ ರಸ್ತೆ ಅಪಘಾತಗಳು ಸಂಭವಿಸಿವೆಯಂತೆ. 2021-22ರಲ್ಲಿ ರಾಜ್ಯದಲ್ಲಿ ಬೆಳಗಾವಿ (816) ಮೊದಲನೇ ಸ್ಥಾನದಲ್ಲಿ ಇದ್ದರೆ, ನಂತರದ ಸ್ಥಾನದಲ್ಲಿ ಬೆಂಗಳೂರು 633) ಮತ್ತು ತುಮಕೂರು (596) ಇವೆ. ಜಾಗತಿಕವಾಗಿ ಅಮೆರಿಕಾ ಮೊದಲನೇ ಸ್ಥಾನದಲ್ಲಿ ಇದೆ.
ಲಭ್ಯ ಮಾಹಿತಿಗಳ ಪ್ರಕಾರ, ಅತಿ ವೇಗವೇ ರಸ್ತೆ ಅಪಘಾತಗಳ ಹಿಂದಿನ ಮುಖ್ಯ ಕಾರಣ. ಅಂದಾಜು ಶೇ. 60ರಷ್ಟು ಅಪಘಾತಗಳು ಅತಿ ವೇಗದಿಂದ ಅಗುತ್ತವೆ. ಅಪಘಾತದಲ್ಲಿನ ಶೇ. 50-55 ಸಾವುಗಳು ಅತಿವೇಗದಿಂದಲೇ ಅಗುತ್ತವೆ. ಚಾಲಕರ ಗಮನವನ್ನು ಬೇರೆಡೆ ಸೆಳೆಯುವ ರೀತಿಯಲ್ಲಿ ರಸ್ತೆ ಪಕ್ಕದಲ್ಲಿ ಅಂಟಿಸಿರುವ ಜಾಹೀರಾತು, ಸಿನಿಮಾ ಹೋರ್ಡಿಂಗ್, ಬಂಟಿಂಗ್ಸ್, ಪೋಸ್ಟರ್ಸ್, ಫಲಕಗಳು ಹಾಗೂ ಬೀಡಿ-ಸಿಗರೇಟ್ ಸೇದುವುದು, ವಾಹನ ಓಡಿಸುವಾಗಲೇ ಫೋನಿನಲ್ಲಿ ಮಾತನಾಡುವುದು ಅಪಘಾತಗಳಲ್ಲಿ ಮುಖ್ಯಪಾತ್ರ ವಹಿಸುತ್ತವೆ.
ಕೆಲವು ಟೂರಿಸ್ಟ್ ಕಾರ್​ಗಳು ಮತ್ತು ಟ್ರಕ್​ಗಳು ಅಪಘಾತವಾಗುವುದರ ಹಿಂದೆ ಅವುಗಳ ಚಾಲಕರು ನಿದ್ರೆಗೆಟ್ಟು, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡದೆ ಸುದೀರ್ಘ ಅವಧಿಯ ಡ್ರೖೆವಿಂಗ್ ಮಾಡುವುದು ಹಾಗೂ ಮದ್ಯ ಪಾನ, ಮಾದಕ ಪದಾರ್ಥಗಳನ್ನು ಸೇವನೆ ಮಾಡಿ ಡ್ರೖೆವ್ ಮಾಡುವುದು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಸುರಕ್ಷತೆಗಾಗಿ ಇರುವ ಹೆಲ್ಮೆಟ್ ಬಳಸಲು ತಾತ್ಸಾರ ತೋರಿಸುತ್ತಾರೆ. ಸೀಟ್ ಬೆಲ್ಟ್ ಧರಿಸುವ ಬಗೆಗೂ ಇದೇ ಮನೋಭಾವ ಎದ್ದು ಕಾಣುತ್ತದೆ.
ಇವು ಮನುಷ್ಯನ ತಪ್ಪಿನಿಂದಾಗುವ ಅಪಘಾತಗಳಾದರೆ, ಸರ್ಕಾರದ ತಪ್ಪಿನಿಂದಾಗುವ ಅಪಘಾತಗಳ ಸಂಖ್ಯೆಯೂ ಕಡಿಮೆ ಏನಿಲ್ಲ. ರಸ್ತೆಗಳ ಗುಣಮಟ್ಟ ನಿರೀಕ್ಷೆಯಷ್ಟು ಇಲ್ಲ ಎನ್ನುವುದು ಸತ್ಯ. ಹಾಗೆಯೇ ಅವುಗಳ ನಿರ್ವಹಣೆ ನಿರಂತರವಾಗಿ ನಡೆಯುವುದಿಲ್ಲ. ರಸ್ತೆಗಳನ್ನು ನಿರ್ವಿುಸುವಾಗ ಮತ್ತು ಅವುಗಳ ದುರಸ್ತಿ ಮಾಡುವಾಗ ನಿರ್ದಿಷ್ಟ ಮಾನದಂಡ ಅನುಸರಿಸುವುದಿಲ್ಲ. ಮಾನವರ ತಪ್ಪು ಮತ್ತು ಸರ್ಕಾರದ ವೈಫಲ್ಯಗಳ ಕುರಿತಂತೆ ಜನಜಾಗೃತಿ ಮೂಡಬೇಕು. ಸರ್ಕಾರ ಮತ್ತು ಜನರು ಕೈಜೋಡಿಸಿ ಸೂಕ್ತ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸಿದರೆ ಅಪಘಾತಗಳ ಸಂಖ್ಯೆ ಇಳಿಮುಖವಾಗುತ್ತದೆ.
(ಲೇಖಕರು ಭಾರತೀಯ ರೆಡ್​ಕ್ರಾಸ್ ಬೆಂಗಳೂರು ನಗರ ಜಿಲ್ಲೆಯ ಸಭಾಪತಿ)
ಮಧ್ಯರಾತ್ರಿಯಲ್ಲಿ ಕಾಂಪೌಂಡ್ ಹಾರಿ ಸಿಕ್ಕಿಬಿದ್ದ ಲವರ್​; ಪ್ರೇಯಸಿಯ ಪತಿಯ ಕೈಯಿಂದ ಬಚಾವಾಗಲು ಯತ್ನಿಸಿ ಪೊಲೀಸರ ವಶವಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
