ಎಲ್ಲರ ಕೈಗೆಟಕುವ ಕರಿಬೇವಿನ ಎಲೆ ಗೃಹಿಣಿಯರು ಅಡುಗೆಮನೆಯಲ್ಲಿ ಹೆಚ್ಚಾಗಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಕೆಲವು ಭಕ್ಷ್ಯಗಳನ್ನು ತಯಾರಿಸುವಾಗ ವಿಶೇಷವಾಗಿ ಕರಿಬೇವು ಬೇಕೇ ಬೇಕು. ಆಯುರ್ವೇದದ ಪ್ರಕಾರ, ಕರಿಬೇವಿನ ಎಲೆಗಳು ಅನೇಕ ಪ್ರಯೋಜನಕಾರಿ ಗುಣಗಳನ್ನು ಹೊಂದಿದ್ದು, ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ. ವಿಶೇಷವಾಗಿ ಕೂದಲು ಮತ್ತು ಚರ್ಮದ ಸಮಸ್ಯೆಗಳಿಗೆ ವಿದಾಯ ಹೇಳಲು ಕರಿಬೇವಿನ ಎಲೆಗಳು ಸಹಾಯ ಮಾಡುತ್ತವೆ. ಆಯುರ್ವೇದ ತಜ್ಞರ ಪ್ರಕಾರ, ಈ ಎಲೆಗಳನ್ನು ಚಹಾಗೂ ಕೂಡ ಉಪಯೋಗಿಸಬಹುದಂತೆ. ಆದರೆ ಈ ಚಹಾವನ್ನು ಉಗುರುಬೆಚ್ಚಗಿರುವಾಗ ಕುಡಿದರೆ ಒಳಿತು. ಜತೆಗೆ 5-7 ನಿಮಿಷಗಳಿಗಿಂತ ಹೆಚ್ಚು ಕಾಲ ಎಲೆಗಳನ್ನು ಕುದಿಸದಂತೆ ನೋಡಿಕೊಳ್ಳಬೇಕು. ಹಾಗಾದರೆ ಕರಿಬೇವಿನ ಎಲೆಗಳನ್ನು ಹೇಗೆ ಸೇವಿಸಬೇಕು?. ನಿಮ್ಮ ದೇಹಕ್ಕೆ ಯಾವ ರೀತಿ ಪ್ರಯೋಜನ ನೀಡುತ್ತವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ ನೋಡಿ…
ಹೇನುಗಳ ನಿವಾರಣೆಗೆ:ಕರಿಬೇವಿನ ಎಲೆಯನ್ನು ಚೆನ್ನಾಗಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಒಂದು ಕಪ್ ಹುಳಿ ಮಜ್ಜಿಗೆಗೆ ಸೇರಿಸಿ. ನಂತರ ನಿಮ್ಮ ನೆತ್ತಿಯ ಮೇಲೆ ಹಚ್ಚಿ, ಕೂದಲು ಸಂಪೂರ್ಣವಾಗಿ ಒಣಗುವವರೆಗೆ ಬಿಡಿ. ನಂತರ ನಿಮ್ಮ ಕೂದಲನ್ನು ನೈಸರ್ಗಿಕ ಶಾಂಪೂ ಬಳಸಿ ತೊಳೆಯಿರಿ. ಒಂದೆರಡು ದಿನಗಳ ಅಂತರದಲ್ಲಿ ಅಥವಾ ವಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ಬಾರಿ ಈ ರೀತಿ ಮಾಡಬೇಕು. ಆಗ ಹೇನುಗಳು ಉಂಟು ಮಾಡುವ ತುರಿಕೆಯಿಂದ ನೀವು ಸ್ವಲ್ಪ ಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು.
ಬಾಯಿ ಹುಣ್ಣಿಗೆ ಪರಿಹಾರ:ಒಂದು ಹಿಡಿಯಷ್ಟು ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಒಣಗಿಸಿ. ನಂತರ ನುಣ್ಣಗೆ ಪುಡಿಮಾಡಿಕೊಂಡು, ಗಟ್ಟಿಯಾಗಿ ಪೇಸ್ಟ್ ಮಾಡಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಬಾಯಿ ಹುಣ್ಣಿನಿಂದ ಪರಿಹಾರ ಕಂಡುಕೊಳ್ಳಲು ನೀವು ಕನಿಷ್ಟ ಮೂರು ದಿನಗಳವರೆಗೆ ಹುಣ್ಣಿನ ಮೇಲೆ ಈ ಪೇಸ್ಟ್ ಹಚ್ಚಬಹುದು.
ಬಾಯಿ ವಾಸನೆ ತೊಲಗಿಸಲು:ಬಹುತೇಕರಿಗೆ ಕರಿಬೇವು ಈ ಮೇಲಿನ ಸಮಸ್ಯೆಗಳಿಗೆ ಪರಿಹಾರವೆಂದು ತಿಳಿದಿದ್ದರೂ, ಬಾಯಿ ವಾಸನೆ ತೊಲಗಿಸಲು ಸಹಕಾರಿ ಎಂಬುದು ತಿಳಿದಿರುವುದಿಲ್ಲ. ಅದರಲ್ಲೂ ನೀವು ಬಾಯಿ ವಾಸನೆಗೆ ಎಲ್ಲ ರೀತಿಯ ಮನೆಮದ್ದನ್ನು ಉಪಯೋಗಿಸಿ, ಕರಿಬೇವನ್ನು ಉಪಯೋಗಿಸದಿದ್ದರೆ ನೀವು ಒಮ್ಮೆ ಈ ಮನೆಮದ್ದನ್ನು ಪ್ರಯತ್ನಿಸಬಹುದು. 5-6 ತೊಳೆದ ಕರಿಬೇವಿನ ಎಲೆಗಳನ್ನು 5 ನಿಮಿಷಗಳ ಕಾಲ ಅಗಿದು, ನಂತರ ಬಾಯಿ ತೊಳೆಯಿರಿ ಅಥವಾ ಮುಕ್ಕಳಿಸಿ.
ಡಯಾಬಿಟಿಸ್ ರೋಗಿಗಳಿಗೂ ಒಳಿತು:ರಕ್ತದಲ್ಲಿನ ಸಕ್ಕರೆಯನ್ನು (ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಮಧುಮೇಹದ ಪರಿಣಾಮ) ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವವರು ಕರಿಬೇವಿನ ಎಲೆಗಳನ್ನು ಬಳಸಿ ಚಟ್ನಿ ಮಾಡಬಹುದು. ಚಪಾತಿ, ಪರಾಠ ಅಥವಾ ಇನ್ನಾವುದೇ ಖಾದ್ಯದೊಂದಿಗೆ ಸೇವಿಸಬಹುದು.
ನಾಸಾ ಹೊಸ ಮೈಲಿಗಲ್ಲು; ಮೂತ್ರ, ಬೆವರಿನಿಂದ ಕುಡಿಯುವ ನೀರು ಉತ್ಪಾದನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 10 =
Remember me
