| ಶ್ರೀಕಾಂತ್ ಶೇಷಾದ್ರಿ ಬೆಂಗಳೂರುಕುಡಿಯುವ ನೀರಿಗೆ, ಒಳಚರಂಡಿ ಸೇವೆಗೆ ಈಗಾಗಲೇ ನಾಗರಿಕರು ಶುಲ್ಕ ಭರಿಸುತ್ತಿದ್ದಾರೆ. ಇದೀಗ ಒಳಚರಂಡಿಗೆ ಹರಿಬಿಡುವ ಕೊಳಚೆ ನೀರಿನ ಸಂಸ್ಕರಣೆಗೂ ಶುಲ್ಕ ನೀಡಬೇಕಾಗಲಿದೆ…! ಪ್ರತಿ ಮನೆಗೆ ಕನಿಷ್ಠ 300 ರೂ.ಗಳ ಶುಲ್ಕ ವಿಧಿಸುವ ಶಿಫಾರಸು ಸರ್ಕಾರದ ಮುಂದಿದೆ. ಕಲುಷಿತ ನೀರಿನ ವಿಲೇವಾರಿಯಿಂದ ಜಲಮೂಲಗಳು ಕಲುಷಿತ ಗೊಳ್ಳುತ್ತಿದ್ದು, ಪರಿಸರ ಮತ್ತು ಮಾನವನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಈ ನೀರನ್ನು ಪೂರ್ಣಪ್ರಮಾಣದಲ್ಲಿ ಸಂಸ್ಕರಣೆ ಮಾಡಬೇಕಾದುದು ಅನಿವಾರ್ಯ. ಅಂದ ಹಾಗೆ ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟಾರೆ ಕಲುಷಿತ ನೀರಿನ ಪೈಕಿ ಕರ್ನಾಟಕದ ಪಾಲು ಶೇ.6ರಷ್ಟು ಆಗಿದೆ.
ರಾಜ್ಯವು 6.70 ಕೋಟಿ ಜನಸಂಖ್ಯೆ ಹೊಂದಿದ್ದು, ಪ್ರತಿದಿನ 3,357 ಮಿಲಿಯನ್ ಲೀಟರ್ (ಎಂಎಲ್​ಡಿ) ಕಲುಷಿತ ನೀರು ಉತ್ಪಾದನೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಹಜವಾಗಿ ಈ ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ. ಆದ್ದರಿಂದ ಸಂಸ್ಕರಿಸಿದ ನೀರಿನ ಮರುಬಳಕೆ ನೀತಿಯನ್ನು ಜಾರಿ ಮಾಡಿ ಅದರ ಅನುಷ್ಠಾನಕ್ಕೆ ಪ್ರೋತ್ಸಾಹಿಸಬೇಕಾಗುತ್ತದೆ. ಸಮಗ್ರ ಸುಸ್ಥಿರ ನೀತಿ ಅಗತ್ಯವಾಗಿ ಬೇಕಾಗಿದೆ ಎಂದು ಸರ್ಕಾರಕ್ಕೆ ಸಲ್ಲಿಕೆಯಾದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಸಾಧಿಸಿದ ಪ್ರಗತಿ ಮೌಲ್ಯಮಾಪನ ಮಾಡಿ ಮುಂದಿನ ಕ್ರಮಗಳ ಉದ್ದೇಶವನ್ನು ಹೊಂದಿದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಮಗ್ರ ವರದಿಯಲ್ಲಿ ಅಧಿಕಾರಿಗಳು ಈ ಅಂಶವನ್ನು ಉಲ್ಲೇಖಿಸಿದ್ದಾರೆ.
ಬಳಕೆ ಪ್ರಮಾಣ:ಬೆಂಗಳೂರಲ್ಲಿ ಪ್ರತಿದಿನ ಉತ್ಪಾದನೆಯಾಗುವ 1,440 ಮಿಲಿಯನ್ ಲೀಟರ್ ಕಲುಷಿತ ನೀರಿನಲ್ಲಿ 1,213 ಎಂಎಲ್​ಡಿ ಸಂಸ್ಕರಣೆಯಾಗುತ್ತಿದೆ. ಇದರಲ್ಲಿ 800.8 (ಶೇ.66) ಮಿಲಿಯನ್ ಲೀಟರ್ ನೀರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ನೀರು ಪೂರೈಸಲು ಬಳಕೆಯಾದರೆ, ಉಳಿದ ನೀರನ್ನು ಹಸಿರು ವಲಯ ಅಭಿವೃದ್ಧಿಗೆ, ವಿಮಾನ ನಿಲ್ದಾಣದ ಉದ್ಯಾನ, ಗಾಲ್ಪ್ ಕೋರ್ಸ್, ಲಾಲ್​ಬಾಗ್, ಕಬ್ಬನ್ ಪಾರ್ಕ್ ಮುಂತಾದ ಕಡೆ ಉಪಯೋಗಿಸಲಾಗುತ್ತಿದೆ. ಸ್ಥಳೀಯ ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ 1916.5 ಎಂಎಲ್​ಡಿಯಷ್ಟು ಕಲುಷಿತ ನೀರು ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 1259.96 ಎಂಎಲ್​ಡಿ ಸಾಮರ್ಥ್ಯದ ಘಟಕಗಳಲ್ಲಿ 745.87 ಎಂಎಲ್​ಡಿ ಮಾತ್ರ ಸಂಸ್ಕರಣೆ ಮಾಡಲಾಗುತ್ತಿದೆ. ಅಂದರೆ ಶೇ.41.64ರಷ್ಟು ಸಾಮರ್ಥ್ಯ ಬಳಕೆಯಾಗುತ್ತಿಲ್ಲ.
ಶಿಫಾರಸಿನಲ್ಲೇನಿದೆ?:ಕಲುಷಿತ ನೀರಿನ ಸಂಸ್ಕರಣಾ ಸೇವೆಗಳಿಗಾಗಿ ಬಳಕೆದಾರರಿಗೆ ಶುಲ್ಕ ವಿಧಿಸಬೇಕು. ಇದಕ್ಕಾಗಿ ನಿಗದಿತ ದರ ಪ್ರಸ್ತಾಪಿಸಬೇಕು. ನಿಗಾ- ನಿಯಂತ್ರಕ ಉಪಕರಣಗಳನ್ನು ಅಳವಡಿಸುವುದರ ಮೂಲಕ ಮಾಲಿನ್ಯಕಾರಕ ಅಂಶಗಳ ಬಿಡುಗಡೆ ಮೇಲೆ ನಿಗಾವಹಿಸಲು ಸಾಧ್ಯವಾಗುತ್ತದೆ.
ಶುಲ್ಕವೇಕೆ?:ಕಲುಷಿತ ನೀರಿನ ಸಂಸ್ಕರಣೆ ಪ್ರಕ್ರಿಯೆಯು ದುಬಾರಿ ಯಾಗಿರುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಆದ ಕಾರಣ ಬಳಕೆದಾರರ ಮೇಲೆ ಶುಲ್ಕವನ್ನು ವಿಧಿಸುವುದರಿಂದ ಮೂಲಸೌಕರ್ಯ ಪೂರೈಸ ಬಹುದು ಎಂಬುದು ಅಧಿಕಾರಿಗಳ ವಾದ. ಅಲ್ಲದೆ, ಸಾರ್ವಜನಿಕ ಸಂಪನ್ಮೂಲ ಗಳನ್ನು ಇತರ ನಿರ್ದಿಷ್ಟ ಉದ್ದೇಶಗಳಿಗೆ ಬಳಸಲು ಸಾಧ್ಯವಾಗುತ್ತದೆ. ಇನ್ನೂ ಮುಖ್ಯವಾಗಿ ಸೇವೆ ಪಡೆಯಲು ತಗಲುವ ವೆಚ್ಚದ ಕುರಿತು ಬಳಕೆದಾರನಿಗೆ ಪೂರ್ಣ ಅರಿವು ಮೂಡಿಸುವುದರಿಂದ ಬಳಕೆಯನ್ನು ಪ್ರಜ್ಞಾಪೂರ್ವ ಕವಾಗಿ ಮಾಡಲೂ ಸಹ ಅವಕಾಶ ದೊರೆಯುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಪ್ರತಿ ಮನೆಗೆ 300 ರೂ.:ಈ ಹಂತದಲ್ಲಿ ಅಂದಾಜಿಸುವುದಾದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1,440 ಎಂಎಲ್​ಡಿ ಕಲುಷಿತ ನೀರು ಉತ್ಪಾದನೆಯಾಗುತ್ತಿದ್ದು, ಇದನ್ನು ಸಮರ್ಥವಾಗಿ ಸಂಸ್ಕರಿಸಿದ್ದೇ ಆದಲ್ಲಿ 1,153 ಎಂಎಲ್​ಡಿ ಮರುಬಳಕೆಗೆ ಯೋಗ್ಯವಾಗಿರುತ್ತದೆ ಎಂಬ ಅಂದಾಜಿದೆ. ಪ್ರತಿಮನೆಗೆ 300 ರೂ. ದರದಂತೆ ವಿಧಿಸಿದಲ್ಲಿ ಬೆಂಗಳೂರು ಜಲಮಂಡಳಿಗೆ 346 ಕೋಟಿ ರೂ.ಗೂ ಅಧಿಕ ಆದಾಯ ನಿರೀಕ್ಷಿಸಬಹುದು. ಅದೇ ಮಾದರಿ ಇತರ ನಗರಗಳಲ್ಲೂ ಕಡಿಮೆ ಶುಲ್ಕ ನಿಗದಿ ಮಾಡಿದರೂ ಸ್ಥಳೀಯ ಸಂಸ್ಥೆಗೆ ಆದಾಯ ಲಭ್ಯವಾಗಲಿದೆ.
ರಾಜ್ಯದಲ್ಲೆಷ್ಟು ಉತ್ಪಾದನೆ?:ಬೆಂಗಳೂರು ನಗರದಲ್ಲಿ ಹೆಚ್ಚು ಕಲುಷಿತ ನೀರು ಹೊರಬರುತ್ತಿದೆ. ಮಹಾನಗರದಲ್ಲಿ ಅಂದಾಜು 85 ಲಕ್ಷ ಜನಸಂಖ್ಯೆ ಹೊಂದಿದ್ದು, ಪ್ರತಿದಿನ 1,440 ಮಿಲಿಯನ್ ಲೀಟರ್ ಕಲುಷಿತ ನೀರು ಗೃಹ ಬಳಕೆಯ ಚಟುವಟಿಕೆಗಳಿಂದ ಉತ್ಪಾದನೆಯಾಗುತ್ತಿದೆ. ಇದನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊಂದಿದೆ. ಅದೇ ರೀತಿ ಇತರ ಸ್ಥಳೀಯ ಸಂಸ್ಥೆಗಳಲ್ಲಿ 1916.5 ಎಂಎಲ್​ಡಿ ಕಲುಷಿತ ನೀರು ಉತ್ಪಾದನೆಯಾಗುತ್ತಿದೆ ಎಂಬ ಅಂದಾಜಿದೆ. ಇದರ ನಿರ್ವಹಣೆ ಪೌರಾಡಳಿತ ಇಲಾಖೆಯದ್ದಾಗಿದೆ. ನೀರು ಸಂಸ್ಕರಣೆ ಘಟಕ ಸ್ಥಾಪಿಸುವ ಹೊಣೆಗಾರಿಕೆಯನ್ನು ಸರ್ಕಾರದ ವಿವಿಧ ಇಲಾಖೆಗಳಾದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ, ಹಣಕಾಸು ಸಂಸ್ಥೆ ಹೊಂದಿವೆ.
ಸಂಸ್ಕರಣಾ ಸಾಮರ್ಥ್ಯ:ರಾಜ್ಯದಲ್ಲಿ ಉತ್ಪತ್ತಿಯಾಗುವ 3,356 ಎಂಎಲ್​ಡಿ ಕೊಳಚೆ ನೀರಿನಲ್ಲಿ 2,788 ಎಂಎಲ್​ಡಿ (ಶೇ.83.1) ನೀರನ್ನು ಸಂಸ್ಕರಿಸುವ ಸೌಕರ್ಯವಿದೆ. ಇದರ ಪೈಕಿ ಶೇ.70.26 ರಷ್ಟು ಸಾಮರ್ಥ್ಯ ಬಳಸಿಕೊಂಡು 1958.15 ಎಂಎಲ್​ಡಿಯನ್ನು ಮಾತ್ರ ಸಂಸ್ಕರಿಸಲಾಗುತ್ತಿದೆ. ಉಳಿದ 1389.44 ಎಂಎಲ್​ಡಿ ಕಲುಷಿತ ನೀರು ಸಂಸ್ಕರಣೆಯಾಗದೇ ನದಿ ಮತ್ತು ಕೆರೆಗಳನ್ನು ಸೇರುತ್ತಿದೆ.
ಎಮ್ಮೆಗೆ ನೀರು ಕುಡಿಸಲು ಹೋದ ಪತ್ನಿಗೆ ಶಾಕ್; ಹೆಂಡತಿಯನ್ನು ರಕ್ಷಿಸಲು ಧಾವಿಸಿದ ಗಂಡ; ಕೊನೆಗೆ ಇಬ್ಬರ ಸಾವು!

ತೆನೆ ಹೊತ್ತ ಕಮಲ: ಎಚ್​ಡಿಕೆ ನಡೆಗೆ ಬೇಸತ್ತ ಅಲ್ಪಸಂಖ್ಯಾತ ಮುಖಂಡರಿಂದ ಜೆಡಿಎಸ್​ಗೆ ಸಾಮೂಹಿಕ ರಾಜೀನಾಮೆ ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 11 =
Remember me
