ಬೆಂಗಳೂರು:ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 7,040 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,26,966ಕ್ಕೆ ಏರಿಕೆಯಾಗಿದೆ. ನಿನ್ನೆ ಒಟ್ಟು 8,818 ಕೇಸ್​​ಗಳು ವರದಿಯಾಗಿದ್ದವು.
ನಿನ್ನೆಯಂತೆಯೇ ಇಂದೂ ಕೂಡ ಸಾವಿನ ಪ್ರಕರಣಗಳೂ ಶತಕ ದಾಟಿ್ಟು 124 ಜನರು ಮೃತಪಟ್ಟಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 3,945ಕ್ಕೆ ಏರಿದೆ. ಒಟ್ಟಾರೆ ಮರಣ ಪ್ರಮಾಣ ಶೇ.1,74 ಆಗಿದೆ.
ಇನ್ನೊಂದೆಡೆ ನಿನ್ನೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 6,629 ಆಗಿದ್ದರೆ ಇಂದು ಚೇತರಿಕೆಯಾದವರ ಸಂಖ್ಯೆ 6,683 ಆಗಿದೆ. ಶೇಕಡಾ ಸರಾಸರಿ ಕೂಡ ಏರಿದ್ದು 62.34 ಆಗಿದೆ. ನಿನ್ನೆ ಈ ಪ್ರಮಾಣ ಶೇ.60.53 ಆಗಿತ್ತು.
ಇದನ್ನೂ ಓದಿ;ಸೈಕಲ್ ಮೇಲೆ ಶಂಕಿತನ ಶವ ಸಾಗಣೆ; ಅಂಬುಲೆನ್ಸ್​ ನೀಡದ ಆರೋಗ್ಯ ಇಲಾಖೆ
ಬೆಂಗಳೂರಿನಲ್ಲಿಯೂ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕಡಿಮೆಯಾಗಿದ್ದು, ಇಂದು 2,131ಕ್ಕೆ ಇಳಿದಿದೆ. ನಿನ್ನೆ 3,495 ಜನರಲ್ಲಿ ಸೋಂಕು ಕಂಡು ಬಂದಿತ್ತು. ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 89,811ಕ್ಕೆ ತಲುಪಿದೆ. ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 2,359 ಜನರು ಚೇತರಿಕೆ ಕಂಡಿದ್ದಾರೆ. ನಿನ್ನೆ ಕೇವಲ 2,034 ಜನರಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು.
ರಾಜಧಾನಿಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 34,860 ರಿಂದ 34,583ಕ್ಕೆ ಇಳಿದಿದೆ. ಒಟ್ಟು 49 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 1,444ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಚೇತರಿಕೆ ಪ್ರಮಾಣ ಶೇ.59.89 ಆಗಿದ್ದರೆ, ಸಾವಿನ ಪ್ರತಿಶತ ಶೇ.1.61 ಆಗಿದೆ.
ಜಿಲ್ಲಾವಾರು ಕೋವಿಡ್​ ಅಂಕಿ-ಸಂಖ್ಯೆ

ಭಾರತದಲ್ಲಿ ಬಿಜೆಪಿ, ಆರ್​ಎಸ್​ಎಸ್​ ನಿಯಂತ್ರಣದಲ್ಲಿದೆಯೇ ಫೇಸ್​ಬುಕ್..? ಕೆಸರೆರಚಾಟಕ್ಕೆ ಕಾರಣವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
