ರಾಜ್ಯದ ಪೊಲೀಸ್ಇಲಾಖೆಯಲ್ಲಿ ಖಾಲಿ ಇರುವ 1,500 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ನ್ಯಾಯಾಲ ಯದ ಆದೇಶದಂತೆ 545 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮರುಪರೀಕ್ಷೆ ನಡೆಸ ಲಾಗುವುದು. ಆನಂತರ ಹೊಸ ನೇಮಕಾತಿ ಮಾಡಲಾಗುವುದು ಎಂದು ವಿವರಿಸಿದರು.
ನೇಮಕಾತಿ ಪರೀಕ್ಷೆ ನಡೆಸುವುದಕ್ಕೆ ಲೋಕಸೇವಾ ಆಯೋಗ, ಪರೀಕ್ಷಾ ಪ್ರಾಧಿಕಾರ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸೇರಿದಂತೆ ಅನೇಕ ಸಂಸ್ಥೆಗಳಿವೆ. ನ್ಯಾಯಾಲಯದ ಆದೇಶ ದೊರೆತ ನಾಲ್ಕೈದು ದಿನಗಳಲ್ಲೇ ಸರ್ಕಾರ ಅಧಿಸೂಚನೆ ಹೊರಡಿಸಿ, ಕರ್ನಾಟಕ ಪರೀಕ್ಷಾ ಪ್ರಾಕಾರದಿಂದ ಪಿಎಸ್​ಐ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಅಭ್ಯರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿಳಂಬವಿಲ್ಲದೆ, ಶೀಘ್ರವೇ ಮರು ಪರೀಕ್ಷೆಯಾಗಬೇಕಿದೆ. ನಿಯಮ 32ನ್ನು ಜಾರಿ ಮಾಡಿ 600 ಎಎಸ್​ಐಗಳಿಗೆ ಇತ್ತೀಚೆಗೆ ಬಡ್ತಿ ನೀಡಿದ್ದು, ಅವರು ಈಗ ಪಿಎಸ್​ಐಗಳಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಸಾವಿರ ಹಾಗೂ ಹಿಂದಿನ 540 ಸೇರಿ 1540 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕಿದೆ. ಅಭ್ಯರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪರಮೇಶ್ವರ್ ಹೇಳಿದರು. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಸ್ವಾಭಾವಿಕ. ಅದಕ್ಕಾಗಿ ಇಲಾಖೆಯಲ್ಲಿ ಮಂಡಳಿ ರಚಿಸಲಾಗಿದೆ. ಅನೇಕ ಕಾರಣದಿಂದ ವರ್ಗಾವಣೆಗಳಾಗುತ್ತವೆ. ಅಧಿಕಾರಿಗಳ ಹುದ್ದೆಗಳನ್ನು ಹೆಚ್ಚು ಸಮಯ ಖಾಲಿ ಇಡಲಾಗಲ್ಲ ಎಂದು ಸಚಿವರು ಹೇಳಿದರು.
ಪೊಲೀಸ್ ತರಬೇತಿ ಸಾಮರ್ಥ್ಯ ಹೆಚ್ಚಳಬೇರೆ ಇಲಾಖೆಗಳಂತೆ ನೇಮಕಾತಿಯಾದ ತಕ್ಷಣವೇ ಕೆಲಸಕ್ಕೆ ನಿಯೋಜಿಸಲು ಪೊಲೀಸ್ ಇಲಾಖೆಯಲ್ಲಿ ಸಾಧ್ಯವಿಲ್ಲ. ಒಂದು ವರ್ಷ ತರಬೇತಿ ನೀಡಬೇಕಿದೆ. ಮೈಸೂರಿನಲ್ಲಿರುವ ನಮ್ಮ ತರಬೇತಿ ಸಂಸ್ಥೆಯ ಸಾಮರ್ಥ್ಯ 300 ರಿಂದ 400 ಮಂದಿಯಷ್ಟೆ. ನೇಮಕಾತಿ ಜತೆಗೆ ತರಬೇತಿಯ ಸಾಮರ್ಥ್ಯವನ್ನು ವೃದ್ಧಿಸಬೇಕಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಭಾರತ ವಿಶ್ವಕಪ್​ ಗೆದ್ರೆ 100 ಕೋಟಿ ರೂ. ಹಂಚ್ತೀನಿ! ಆಸ್ಟ್ರೋಟಾಕ್​ ಸಿಇಒ ಬಂಪರ್​ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
