ಬೆಂಗಳೂರು:ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.ಕಳೆದ 24 ಗಂಟೆ ಅಂತರದಲ್ಲಿ ಉತ್ತರ ಕನ್ನಡದ ಗೇಸೊಪ್ಪ 18, ಕಾರವಾರ ವೀಕ್ಷಣಾಲಯ 17, ಅಂಕೋಲಾ 16, ಕ್ಯಾಸಲ್​ ರಾಕ್​ 12, ಗೋಕರ್ಣ 11, ಕದ್ರಾ 11, ಉಡುಪಿಯ ಕೋಟಾದಲ್ಲಿ16 ಸೆಂಮೀ ಮಳೆ ಬಿದ್ದಿದೆ.
ಶಿವಮೊಗ್ಗದ ಆಗುಂಬೆ,ದಾವಣಗೆರೆ, ಚಿಕ್ಕಮಗಳೂರಿನ ಮೂಡುಗೆರೆ, ದಕ್ಷಿಣ ಕನ್ನಡದ ಮಂಗಳೂರು, ಕೊಡಗಿನ ಕೊಣಿಗೊಪ್ಪ, ಯಾದಗಿರಿ, ತುಮಕೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ವರ್ಷಧಾರೆಯಾಗಿದೆ. ದಕ್ಷಿಣ ಕರ್ನಾಟಕ ಭಾಗಗಿಂತ ಕರಾವಳಿ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಜಾಸ್ತಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ.
ಉಡುಪಿ, ಉತ್ತರ ಕನ್ನಡ, ಬೆಳಗಾವಿಯಲ್ಲಿ ಮುಂದಿನ ಎರಡು ದಿನ, ಧಾರವಾಡ, ಗದಗದಲ್ಲಿ ಜೂ 10ರಿಂದ ಜೂ 12ರವರೆಗೆ ಹಾಗೂ ಕೊಪ್ಪಳದಲ್ಲಿ ಜೂ 11ರಿಂದ ಮುಂದಿನ ಎರಡು ದಿನ ಅತಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೆಡ್​ ಅಲರ್ಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆ ಭಾಗದ ನಿವಾಸಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಶಿವಮೊಗ್ಗ, ಬಳ್ಳಾರಿಯಲ್ಲಿಯೂ ಮುಂದಿನ 3 ದಿನ ಜೋರಾಗಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಆರೆಂಜ್​ ಅಲರ್ಟ್​ ನೀಡಲಾಗಿದೆ. ದಾವಣಗೆರೆ ಚಿಕ್ಕಮಗಳೂರು, ರಾಯಚೂರು, ಕಲಬುರಗಿ, ಯಾದಗಿರಿ, ದಣ ಕನ್ನಡದಲ್ಲಿ ಜೂ 10ರಿಂದ ಜೂ 12ರವರೆಗೆ ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಕರ್ನಾಟಕ ಭಾಗದ 3 ಜಿಲ್ಲೆ ಹೊರತುಪಡಿಸಿ ಉಳಿದೆಡೆ ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.
ಏನಿದು ಅಲರ್ಟ್?*204 ಮಿಮೀಗಿಂತ ಅಧಿಕ ಮಳೆ ಬೀಳುವ ಮೂನ್ಸೂಚನೆ ಇದ್ದರೆ ರೆಡ್​ ಅಲರ್ಟ್​.*115ರಿಂದ 204 ಮಿಮೀವರೆಗೆ ಮಳೆಯಾಗುವ ಜಿಲ್ಲೆಗಳಿಗೆ ಆರೆಂಜ್​ ಅಲರ್ಟ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 13 =
Remember me
