ಬೆಂಗಳೂರು:ಮುಂದಿನ ಪೀಳಿಗೆ ಅಪೇಕ್ಷಿಸುವ ಅತ್ಯಾಧುನಿಕ ತಂತ್ರಜ್ಞಾನ, ವೈಶಿಷ್ಟ್ಯಪೂರ್ಣ ವಿನ್ಯಾಸ ಹೊಂದಿದ ವಿಮಾನಗಳು ಆದಷ್ಟು ಬೇಗ ದೇಶದಲ್ಲೇ ಅದರಲ್ಲೂ ಬೆಂಗಳೂರಿನಲ್ಲೇ ನಿರ್ವಣವಾಗಲಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಮಿತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿ ಸಮೀಪದಲ್ಲಿ ತಲೆ ಎತ್ತಿರುವ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರವನ್ನು ಶುಕ್ರವಾರ ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ವಾಯುಯಾನ ಕ್ಷೇತ್ರದಲ್ಲಿ ತರಬೇತಿ ನೀಡುವ ‘ಬೋಯಿಂಗ್ ಸುಕನ್ಯಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲೇ ಸಂಪೂರ್ಣ ವಿನ್ಯಾಸದೊಂದಿಗೆ ತಯಾರಿಸಿದ ಬೋಯಿಂಗ್​ನ ಮೊದಲ ವಿಮಾನಕ್ಕಾಗಿ ಹೆಚ್ಚು ದಿನ ಕಾಯಬೇಕಾಗಿಲ್ಲ.
ಭಾರತದ ಆಕಾಂಕ್ಷೆಗಳ ಜತೆಗೆ ಬೋಯಿಂಗ್​ನ ವಿಸ್ತರಣೆ ಬೆಸೆದುಕೊಂಡಿರುವ ಕಾರಣ ಈ ನಿರೀಕ್ಷೆ ಹುಟ್ಟಿಹಾಕಿದೆ ಎಂದರು. ಅಮೆರಿಕದ ಹೊರಗೆ ಅತಿದೊಡ್ಡ ವಾಯುಯಾನ ಕ್ಷೇತ್ರದ ಸೌಲಭ್ಯವನ್ನು ಬೆಂಗಳೂರಿನಲ್ಲಿ ಬೋಯಿಂಗ್ ಸೃಜಿಸುವ ಮೂಲಕ ಭಾರತದ ಪ್ರತಿಭೆಯಲ್ಲಿ ವಿಶ್ವದ ನಂಬಿಕೆಯನ್ನು ದೃಢಪಡಿಸಿದೆ. ‘ಸ್ವಾವಲಂಬಿ ಭಾರತ’ ಪರಿಕಲ್ಪನೆ, ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಅತ್ಯಾಧುನಿಕ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಹೊಂದಿದ ಕ್ಯಾಂಪಸ್ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದರು.
ಉದ್ಯೋಗ ಸೃಷ್ಟಿಗೆ ಒತ್ತಾಸೆ:ತ್ವರಿತವಾಗಿ ಬೆಳೆಯುತ್ತಿರುವ ವಾಯುಯಾನ ಕ್ಷೇತ್ರವು ದೇಶದ ಒಟ್ಟಾರೆ ಬೆಳವಣಿಗೆ, ಉದ್ಯೋಗ ಸೃಷ್ಟಿಗೆ ಒತ್ತಾಸೆ ನೀಡುತ್ತಿದೆ. ವಿಮಾನ ನಿಲ್ದಾಣ ಸಾಮರ್ಥ್ಯ ಹೆಚ್ಚಳದಿಂದ ಏರ್ ಕಾಗೋ ವಲಯವು ಗಮನಾರ್ಹ ಪ್ರಗತಿ ಸಾಧಿಸುತ್ತಿದೆ ಎಂದರು. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸುತ್ತಿರುವ ಸಂದರ್ಭದಲ್ಲಿ ಬೋಯಿಂಗ್ ಸಂಸ್ಥೆಯು ಮಹಿಳಾ ಸಬಲೀಕರಣದ ‘ಸುಕನ್ಯಾ’ ಕಾರ್ಯಕ್ರಮ ಆರಂಭಿಸಿರುವುದು ಶ್ಲಾಘನೀಯ. ಭಾರತದ ಪೈಲಟ್​ಗಳಲ್ಲಿ ಶೇ.15ರಷ್ಟು ಮಹಿಳೆಯರಿದ್ದಾರೆ. ಜಾಗತಿಕ ಸರಾಸರಿಗೆ ಹೋಲಿಸಿದರೆ ಮೂರುಪಟ್ಟು ಹೆಚ್ಚಿರುವುದು ಹೆಮ್ಮೆಪಡುವ ವಿಚಾರ. ಬಡ ಕುಟುಂಬದ ಬಾಲಕಿ ಪೈಲಟ್ ಆಗುವ ಕನಸು ನನಸಾಗಿಸಲು ಈ ಯೋಜನೆ ನೆರವಾಗಲಿದೆ. ಅಲ್ಲದೆ, ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ‘ಸುಕನ್ಯಾ’ ಉತ್ತೇಜಿಸಲಿದೆ ಎಂದು ಪ್ರಶಂಸಿಸಿದರು. ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ವಿುಸುವುದು 140 ಕೋಟಿ ಭಾರತೀಯರ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಬೋಯಿಂಗ್ ಮತ್ತಿತರ ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ಪ್ರಗತಿ ಸಾಧಿಸಲು ಭಾರತದ ಬೆಳವಣಿಗೆಗೆ ಕೈಜೋಡಿಸುವುದಕ್ಕೆ ಇದೇ ಸರಿಯಾದ ಸಮಯ ಎಂದರು.
ಸುಕನ್ಯಾ ಬೋಯಿಂಗ್ ವೈಶಿಷ್ಟ್ಯ:ಬಡ ಬಾಲಕಿಯರ ಪೈಲಟ್ ತರಬೇತಿಗೆ ಸಹಾಯಹಸ್ತ, ಕೌಶಲ ಅಭಿವೃದ್ಧಿ ಜತೆಗೆ ಶಿಷ್ಯವೇತನ, ದೇಶದ 2 ಮತ್ತು 3ನೇ ಹಂತದ ನಗರಗಳ ಶಾಲೆಗಳಲ್ಲಿ ಸ್ಟೆಮ್ ಪ್ರಯೋಗಾಲಯಗಳ ಮೂಲಕ 75 ಸಾವಿರ ಬಾಲಕಿಯರಿಗೆ ತರಬೇತಿ, ವಿವಿಗಳ ಸಹಭಾಗಿತ್ವದಲ್ಲಿ ವೃತ್ತಿಪರ ನೈಪುಣ್ಯತೆ, ವ್ಯಾಸಂಗಕ್ಕೆ ಬೇಕಾದ ಪಠ್ಯ ಮತ್ತಿತರ ಚಟುವಟಿಕೆಗಳಿಗೆ ನೆರವು.
ಚಂದ್ರಯಾನದ ಯಶಸ್ಸು ಭಾರತದ ಯುವಕರಲ್ಲಿ ವೈಜ್ಞಾನಿಕ ಮನೋಭಾವ ತುಂಬಿದೆ. ತ್ವರಿತವಾಗಿ ಬೆಳೆಯುತ್ತಿರುವ ವಾಯುಯಾನ ಕ್ಷೇತ್ರವು ಭಾರತದ ಒಟ್ಟಾರೆ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತಿದೆ.
| ನರೇಂದ್ರ ಮೋದಿ ಪ್ರಧಾನಿ
ಬೋಯಿಂಗ್ ಸಂಸ್ಥೆಯು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಪ್ರದೇಶವನ್ನು ಆಯ್ಕೆ ಮಾಡಿರುವುದು ಅತ್ಯಂತ ಸಂತೋಷ. ತಂತ್ರಜ್ಞಾನ ವಲಯದಲ್ಲಿ ಮುಂದಿರುವ ಕರ್ನಾಟಕದ ಮುಕುಟಕ್ಕೆ ಹೊಸದೊಂದು ಮಣಿ ಸೇರ್ಪಡೆಯಾದಂತಿದೆ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
