ಬಳ್ಳಾರಿ:ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗುತ್ತಿದ್ದಂತೆಯೇ ಅವರಿಗೆ ಮತ್ತು ಅವರ ಸಹೋದರ ಸೋಮಶೇಖರ ರೆಡ್ಡಿಗೆ ಹೊಸ ಸಂಕಷ್ಟ ಶುರುವಾಗಿದೆ. 2010ರಲ್ಲಿ ಬಳ್ಳಾರಿಯಲ್ಲಿ ನಡೆದ ಪಾಲಿಕೆ ಸದಸ್ಯೆ ಪದ್ಮಾವತಿ ಯಾದವ್ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಕೆಯ ಸಹೋದರ ಸುಬ್ಬರಾಯುಡು ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಪತ್ರದ ಕುರಿತು ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಸೋಮಶೇಖರ್ ರೆಡ್ಡಿ, ಕಾರ್ಪೊರೇಟರ್ ಪದ್ಮಾವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿರುವ ಸುಬ್ಬರಾಯುಡು ಒಬ್ಬ ಬ್ಲಾೃಕ್‌ಮೇಲರ್. ಹಣಕ್ಕೆ ಬೇಡಿಕೆ ಇಡೋದೆ ಅವನ ಕೆಲಸ, ಅವನು ನಮಗೆ ಏನು ಸಂಬಂಧ? ಕೊಲೆ ಬಗ್ಗೆ ಎಲ್ಲವೂ ತನಿಖೆ ಆಗಿ ಪೊಲೀಸರು ರಿಪೋರ್ಟ್ ಸಲ್ಲಿಸಿದ್ದಾರೆ. ಸುಬ್ಬರಾಯುಡು ಆಗಾಗ ರೊಕ್ಕ ಕೇಳ್ತಾನೆ ಕೊಡದೇ ಇದ್ರೇ ಹೀಗೆ ಮಾಡ್ತಾರೆ ಎಂದು ಹೇಳಿದ್ದಾರೆ.
‘‘ಅವನು ಬೇರೆಯವರ ಮೂಲಕ ಮಾತನಾಡಿಸಲು ಟ್ರೈ ಮಾಡ್ತಾನೆ. ಪದ್ಮಾವತಿ ಮಕ್ಕಳಿಗೆ ದ್ರೋಹ ಮಾಡಲು ಯತ್ನಿಸಿದ. ಅದಕ್ಕೆ ಅವಕಾಶ ಮಾಡಲಿಲ್ಲ. ಮೋರ್ ಪಾಪುಲರ್, ಮೋರ್ ಪ್ರಾಬ್ಲಮ್, ಹೀಗಾಗಿದೆ ನಮ್ಮ ಸ್ಥಿತಿ. ಹನುಮಾನ್ ದೇವರು ನಮ್ಮನ್ನು ಕಾಪಾಡ್ತಾನೆ. ಪದ್ಮಾವತಿ ಯಾದವ್ ಪಾರ್ಟಿಗಾಗಿ ದುಡಿದಿದ್ದಾರೆ, ಆಕೆ ಬಗ್ಗೆ ನಾವೇನು ಮಾಡೋದು?’’ ಎಂದು ಸೋಮಶೇಖರ ರೆಡ್ಡಿ ಪ್ರಶ್ನಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
