ಬೆಂಗಳೂರು:2020-21ನೇ ಆರ್ಥಿಕ ಸಾಲಿನ ಆಯವ್ಯಯ ಮಂಡನೆಗೆ ತಯಾರಿ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಕೈಗಾರಿಕೆ, ವಾಣಿಜ್ಯ ಕ್ಷೇತ್ರದ ಸಂಘಟನೆ ಗಳಿಂದ ದಂಡಿ ಪ್ರಮಾಣದಲ್ಲಿ ಬೇಡಿಕೆ ಬಂದಿದೆ. ಗೊಂದಲ ಪರಿಹರಿಸುವ ಒತ್ತಾಯ, ಹೊಸ ಬೇಡಿಕೆಗಳೂ ಸಲ್ಲಿಕೆಯಾಗಿವೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಕರ್ನಾಟಕ ಹೊಸೈರಿ ಮತ್ತು ಗಾರ್ವೆಂಟ್ ಅಸೋಸಿಯೇಷನ್ ಸೇರಿ ವಿವಿಧ ಸಂಘಟನೆಗಳು ಸಿಎಂಗೆ ಮನವಿ ಪತ್ರ ಸಲ್ಲಿಸಿ ಕೋರಿಕೆ ಮಂಡಿಸಿದವು. ಪ್ರಮುಖವಾಗಿ ವಿದ್ಯುತ್ ದರ ಕಡಿತ ಮತ್ತು ಜಿಎಸ್​ಟಿ ಗೊಂದಲ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ. ಕೈಗಾರಿಕೆಗೆ ಅತಿ ಹೆಚ್ಚು ವಿದ್ಯುತ್ ದರ ವಿಧಿಸುತ್ತಿರುವುದು ಸಮಂಜಸವಲ್ಲ, ಎಲ್​ಟಿ ಮಿತಿಯನ್ನು 65 ಎಚ್​ಪಿಯಿಂದ 110 ಎಚ್​ಪಿವರೆಗೆ ಏರಿಸಲು ಆಗಿಂದಾಗ್ಗೆ ಬೇಡಿಕೆ ಸಲ್ಲಿಸಿದ್ದರೂ ಪರಿಗಣಿಸಿಲ್ಲ ಎಂದು ಎಫ್​ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ್ ನೇತೃತ್ವದ ನಿಯೋಗ ಮನವಿಯಲ್ಲಿ ವಿವರಿಸಿದೆ.
ಕೆಇಆರ್​ಸಿ ವಿದ್ಯುತ್ ದರವನ್ನು ವಾರ್ಷಿಕವಾಗಿ ಮೇಲ್ಮುಖದಲ್ಲಿ ಪರಿಷ್ಕರಿಸುತ್ತಿದ್ದು, ಇದರಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಸಂಕಷ್ಟಕ್ಕೀಡಾಗಿವೆ. ಸರಬರಾಜು ಮತ್ತು ವಿತರಣಾ ಕಂಪನಿಗಳು ಸೌರ ಮತ್ತು ಇತರ ಮೂಲಗಳಿಂದ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಪಡೆಯಲು ಸಾಧ್ಯವಿದ್ದರೂ ವಿದ್ಯುತ್ ಶುಲ್ಕಗಳನ್ನು ಅಸಹಜವಾಗಿ ಪರಿಷ್ಕರಿಸುತ್ತಿರುವುದು ಒಗಟಾಗಿದೆ ಎಂದು ಕಾಸಿಯಾ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯ ಜಿಎಸ್​ಟಿ ಅಧಿಕಾರಿಗಳು ಕಾನೂನು ಹೊರತಾಗಿ ನೋಟಿಸ್ ನೀಡುತ್ತಿದ್ದಾರೆ. ಯಾರು ನ್ಯಾಯಬದ್ಧವಾಗಿ ತೆರಿಗೆ ಕಟ್ಟುತ್ತಾರೋ ಅವರೊಂದಿಗೆ ಹೇಗೆ ವರ್ತಿಸಬೇಕೆಂಬ ಬಗ್ಗೆ ಅವರಿಗೆ ಸೂಕ್ತ ತರಬೇತಿ ಅಗತ್ಯವಿದೆ ಎಂದು ಹೊಸೈರಿ ಗಾರ್ವೆಂಟ್ಸ್ ಅಸೋಸಿಯೇಷನ್ ಹೇಳಿಕೊಂಡಿದೆ.
ಬೆಂಗಳೂರಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಸಮ-ಬೆಸ ಪ್ರಯೋಗ ಇಲ್ಲೂ ನಡೆಯಲಿ. =ಮಹಾರಾಷ್ಟ್ರದ ಸಿಡ್ಕೋ ಮಾದರಿಯಲ್ಲಿ ನಗರ ಮತ್ತು ಕೈಗಾರಿಕಾ ಬಡಾವಣೆ ಅಭಿವೃದ್ಧಿಪಡಿಸಬೇಕು. =ನಿರುದ್ಯೋಗ ನಿವಾರಣೆಗೆ ವಿಯೆಟ್ನಾಂ ರೀತಿ ಒನ್ ವಿಲೇಜ್ ಒನ್ ಪ್ರಾಡೆಕ್ಟ್, ಒನ್ ತಾಲೂಕ್ ಒನ್ ಪ್ರಾಡೆಕ್ಟ್, ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡೆಕ್ಟ್ ಶೀರ್ಷಿಕೆಯಿಂದ ಪ್ರಾರಂಭಿಸಬೇಕು.=ನಗರ ಪ್ರದೇಶಗಳಲ್ಲಿ ಬಹುಮಹಡಿ ಕೈಗಾರಿಕಾ ವಸಹಾತುಗಳು ಹಾಗೂ ತಾಲೂಕು ಮಟ್ಟದಲ್ಲಿ ಅತಿ ಸಣ್ಣ ಕೈಗಾರಿಕಾ ವಲಯ ಸ್ಥಾಪಿಸಬೇಕು.
ಜಿಎಸ್ಟಿ ಅನುಷ್ಠಾನದಲ್ಲಿ ಒಂದಷ್ಟು ಗೊಂದಲ, ಸಮಸ್ಯೆಗಳಿವೆ. ಸರ್ಕಾರ ಆದ್ಯತೆ ಮೇಲೆ ಪರಿಹರಿಸಬೇಕಿದೆ.
| ಸಜ್ಜನ್ ರಾಜ್ ಮೆಹ್ತಾ, ಹೊಸೈರಿ ಮತ್ತು ಗಾರ್ವೆಂಟ್ಸ್ ಅಸೋಸಿಯೇಷನ್
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 − eight =
Remember me
